ಮದುವೆ ನಂತರ ಮಡದಿಯ ಮೊದಲ ಜನ್ಮದಿನ:ವಿಶೇಷ ಉಡುಗೊರೆ ನೀಡಿ ಸಂಭ್ರಮಿಸಿದ ನಟ ಚಂದನ್ ಕುಮಾರ್

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಜೋಡಿಯಾಗಿ ನಟಿಸುವ ಮೂಲಕ ಜನರ ಅಪಾರವಾದ ಅಭಿಮಾನವನ್ನು ಪಡೆದುಕೊಂಡು ಇತ್ತೀಚೆಗಷ್ಟೇ ತಮ್ಮ ನಿಜ ಜೀವನದಲ್ಲಿಯೂ ಜೋಡಿಯಾದವರು ಕಿರುತೆರೆಯ ಜನಪ್ರಿಯ ನಟ ಹಾಗೂ ನಟಿಯಾದಂತಹ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಚಂದನ್ ಕುಮಾರ್ ಅವರು ಕವಿತಾ ಗೌಡ ಅವರ ಜನ್ಮದಿನದಂದು ಅವರಿಗೊಂದು ಸರ್ಪ್ರೈಸ್ ಬರ್ತಡೇ ಗಿಫ್ಟ್ ನೀಡಿದ್ದರು. ಅದಾದ ನಂತರ ಇಬ್ಬರೂ ಜೊತೆಯಾಗಿ ಪ್ರವಾಸಗಳು ಹಾಗೂ ಟ್ರೆಕ್ಕಿಂಗ್ ಗಳಿಗೆ ಹೋಗುವ ಮೂಲಕ, ಜೊತೆಯಾಗಿ ಸುತ್ತಾಡಲು ಪ್ರಾರಂಭಿಸಿದರು. ಆ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಸದ್ದನ್ನು ಮಾಡಿದವು.

ಈ ಜೋಡಿಯ ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ, ಬಹಳಷ್ಟು ಜನರು ಈ ಜೋಡಿಯ ನಡುವೆ ಸ್ನೇಹಕ್ಕಿಂತ ಹೆಚ್ಚಿನದು ಬೇರೇನೋ ಇದೆ ಎನ್ನುವ ಮಾತುಗಳನ್ನು ಆಡತೊಡಗಿದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ?? ಎಂದು ಪ್ರಶ್ನೆಯನ್ನು ಮಾಡ ತೊಡಗಿದರು. ಇದೆಲ್ಲಾ ಆಗುವಾಗಲೇ ಚಂದನ್ ಹಾಗೂ ಕವಿತಾ ತಾವು ವಿವಾಹ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ ಎಲ್ಲರ ಪ್ರಶ್ನೆ ಹಾಗೂ ಅನುಮಾನಗಳಿಗೆ ಉತ್ತರವನ್ನು ನೀಡಿದ್ದರು.

ಕಳೆದ ಏಪ್ರಿಲ್ ಒಂದರಂದು ಚಂದನ್ ಕವಿತಾ ಅವರು ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಕೆಲವೇ ಆಪ್ತರ ನಡುವೆ ಬಹಳ ಸರಳವಾಗಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಎಂಟು ವರ್ಷಗಳ ಹಿಂದೆ ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಜೋಡಿಯಾಗಿ ಜನರನ್ನು ರಂಜಿಸಿದ್ದ ಈ ಜೋಡಿ,‌ ಇದೀಗ ತಮ್ಮ ರಿಯಲ್ ಲೈಫ್ ನಲ್ಲೂ ಕೂಡಾ ಸತಿ ಪತಿಯಾಗಿ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಮದುವೆಯ ನಂತರ ಕವಿತಾ ಅವರ ಮೊದಲನೇ ಜನ್ಮ ದಿನವನ್ನು ಚಂದನ್ ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದ್ದಾರೆ. ಚಂದನ್ ಅವರು ಕವಿತಾ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

ಕವಿತಾ ಅವರ ಹುಟ್ಟುಹಬ್ಬವನ್ನು ಮಧ್ಯರಾತ್ರಿಯಲ್ಲಿ ಸರ್ಪ್ರೈಸ್ ಎನ್ನುವಂತೆ, ಕವಿತಾ ಅವರ ಸ್ನೇಹಿತರನ್ನು ಆಹ್ವಾನಿಸಿ, ಹೃದಯದ ಆಕಾರದ ಕೇಕನ್ನು ಮಾಡಿಸಿದ್ದ ಚಂದನ್ ಅವರು ಬಹಳ ಖುಷಿಯಿಂದ ಆಚರಣೆ ಮಾಡಿದ್ದಾರೆ. ಅಲ್ಲದೆ ತಮ್ಮ ಪತ್ನಿಗೆ ದುಬಾರಿ ಬೆಲೆಯ ಫೋನ್ ವೊಂದನ್ನು ಜನ್ಮದಿನದ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಪತಿ ಸರ್ಪ್ರೈಸ್ ಆಗಿ ಹುಟ್ಟುಹಬ್ಬದ ಆಚರಣೆಯನ್ನು ಮಾಡಿದ್ದರಿಂದ ಬಹಳಷ್ಟು ಸಂಭ್ರಮ ಪಟ್ಟಿದ್ದಾರೆ ಕವಿತಾ. ಇನ್ನು ಚಂದನ್ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.

Leave a Comment