ಮದುವೆ ನಂತರ ನಯನತಾರಾ ಮಹತ್ವದ ನಿರ್ಧಾರ: ಅಚ್ಚರಿ ಮೂಡಿಸಿದ ನಟಿಯ ನಡೆಗೆ ಹರಿದು ಬಂತು ಮೆಚ್ಚುಗೆ

Written by Soma Shekar

Published on:

---Join Our Channel---

ಮೊನ್ನೆ ಮೊನ್ನೆಯಷ್ಟೇ ತಮಿಳು ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ದಕ್ಷಿಣದ ಸ್ಟಾರ್ ನಟಿ ನಯನತಾರಾ ಬಹಳ ಅದ್ದೂರಿಯಾಗಿ ನಡೆದ ವಿವಾಹ ಸಂಭ್ರಮದಲ್ಲಿ ಸಪ್ತಪದಿ ತುಳಿದು, ಹೊಸ ಜೀವನಕ್ಕೆ ಅಡಿಯಿಟ್ಟಿದ್ದರು. ಆದರೆ ಈಗ ನಟಿ ಮದುವೆಯ ನಂತರ ಖಾಸಗಿ ಬದುಕಿಗಿಂತ ವೃತ್ತಿಪರತೆ ಮೊದಲು ಎಂದು ತಮ್ಮ ಕೆಲಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿರುವ ವಿಚಾರ ಇದೀಗ ಸುದ್ದಿಯಾಗಿದ್ದು, ನಟಿಯ ಈ ನಿರ್ಧಾರವನ್ನು ಕಂಡು ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.

ಹೌದು, ನಟಿ ನಯನತಾರಾ ಮದುವೆಯ ನಂತರ ಹನಿಮೂನ್ ಎಂದು ವಿದೇಶಕ್ಕೆ ಹಾರಲಿದ್ದಾರೆ ಎಂದು ಭಾವಿಸಿದ್ದವರಿಗೆ ಶಾ ಕ್ ನೀಡಿದ್ದಾರೆ. ಮದುವೆಯಾದ ಒಂದು ವಾರದ ನಂತರ ಇದೀಗ ನಟಿ ಮತ್ತೆ ಸಿನಿಮಾ ಚಿತ್ರೀಕರಣಕ್ಕೆ ಮರಳಿದ್ದಾರೆ. ನಟಿ ನಯನತಾರಾ ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ನಾಯಕನಾಗಿರುವ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾ ಮೂಲಕ ಬಾಲಿವುಡ್‌ ಗೆ ಎಂಟ್ರಿ ನೀಡುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಈಗ ಮದುವೆಯ ನಂತರ, ಒಂದು ವಾರ ಬ್ರೇಕ್ ಪಡೆದಿದ್ದ ನಟಿ ಜವಾನ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮದುವೆ ನಂತರ ಮೊದಲು ತಿರುಪತಿಗೆ ನಂತರ ಬೇರೆ ಬೇರೆ ದೇಗುಲಗಳಿಗೆ ಭೇಟಿ ನೀಡಿದ್ದ ವಿಘ್ನೇಶ್, ನಯನತಾರಾ ದಂಪತಿ ದೇವರ ಆಶೀರ್ವಾದ ಪಡೆದು ಬಂದ ನಂತರ ಹನಿಮೂನ್ ಗಾಗಿ ವಿದೇಶಕ್ಕೆ ಹಾರಲಿದ್ದಾರೆ ಎನ್ನುವ ಸುದ್ದಿಗಳು ಹರಡಿದ್ದವು. ಆದರೆ ತನ್ನ ಮದುವೆ ಕಾರಣದಿಂದಾಗಿ ಚಿತ್ರೀಕರಣ ನಿಂತಿದ್ದ ಜವಾನ್ ಸಿನಿಮಾಕ್ಕೆ ತೊಂದರೆ ಆಗಬಾರದು ಎಂದು ನಯನತಾರಾ ಅವರು ಸಿನಿಮಾ ಚಿತ್ರೀಕರಣಕ್ಕೆ ಮರಳಿದ್ದಾರೆ.

ಶಾರೂಖ್ ಖಾನ್ ಮತ್ತು ನಯನತಾರಾ ಜೋಡಿಯಾಗಿರುವ ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಆ್ಯಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಶಾರೂಖ್ ಖಾನ್ ಗಾಗಿ ಒಂದು ಹಿಟ್ ಸಿನಿಮಾ ನೀಡಬೇಕೆಂದು ಆ್ಯಟ್ಲಿ ಒಂದೊಳ್ಳೆ ಕಥೆಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ನಟಿ ನಯನತಾರಾ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟಿಯರಿಗೆ ಪೈಪೋಟಿ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

Leave a Comment