ಮದುವೆ ದಿಬ್ಬಣದಲ್ಲಿ ವಿಚಿತ್ರ ಡ್ಯಾನ್ಸ್, ಕುದುರೆ ಜೊತೆ ವ್ಯಂಗ್ಯ: ಮುಂದೆ ಬಿದ್ದ ಹೊಡೆತಕ್ಕೆ ಫ್ಯೂಜ್ ಔಟ್

Entertainment Featured-Articles News Viral Video

ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ವೈವಿದ್ಯಮಯ ಎನಿಸುವಂತಹ ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವೀಡಿಯೋಗಳು ಭರ್ಜರಿ ಮನರಂಜನೆ ಸಹಾ ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಹಲವು ವೀಡಿಯೋಗಳು ವೈರಲ್ ಆಗುತ್ತಲೇ ಇವೆ. ಇವುಗಳಲ್ಲಿ ಕೆಲವು ವೀಡಿಯೋಗಳು ಬಹಳ ತಮಾಷೆಯಾಗದ್ದು, ನಗುವಿನ ಹೊಳೆಯನ್ನೇ ಹರಿಸಿದರೆ ಇನ್ನೂ ಕೆಲವು ಆಶ್ಚರ್ಯಕರವಾಗಿ ಇರುತ್ತವೆ. ಇತ್ತೀಚೆಗೆ, ಮದುವೆಗೆ ಸಂಬಂಧಿಸಿದ ತಮಾಷೆಯ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಮದುವೆ ಸಮಾರಂಭ ಎಂದರೆ ಅಲ್ಲಿ ಹಾಡು, ನೃತ್ಯಗಳೆನ್ನುವ ಸದ್ದು ಗದ್ದಲಗಳು ಇರುತ್ತವೆ. ವಧು, ವರರ ಜತೆಗೆ ಕುಟುಂಬದವರೆಲ್ಲರೂ ಸಂತಸ, ಸಂಭ್ರಮದಲ್ಲಿ ತೇಲುತ್ತಾರೆ. ಅದೇನೇ ಇರಲಿ.. ಈ ಮದುವೆ ಸಮಾರಂಭಗಳಲ್ಲಿ ಒಂದಷ್ಟು ನೃತ್ಯ ಪ್ರತಿಭೆಗಳೂ ಸಹಾ ಮುನ್ನೆಲೆಗೆ ಬರುತ್ತವೆ ಎಂದರೆ ಸುಳ್ಳಲ್ಲ. ಕೆಲವರು ಜೋಶ್ ನಿಂದ ಡ್ಯಾನ್ಸ್ ಬಾರದೇ ಹೋದರೂ ತಮ್ಮ ವಿಚಿತ್ರವಾದ ನೃತ್ಯದಿಂದ ಎಲ್ಲರ ಗಮನ ಸೆಳೆದು, ಎಲ್ಲರನ್ನೂ ರಂಜಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಡೆಯುವ ಕೆಲವೊಂದು ಅನಿರೀಕ್ಷಿತ ಘಟನೆಗಳು ಎಲ್ಲರನ್ನೂ ನಗುವಂತೆ ಮಾಡುತ್ತವೆ.

ಈಗ ಒಂದು ವೀಡಿಯೋ ವೈರಲ್ ಆಗಿದ್ದು, ಇದು ಸಹಾ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ ಮತ್ತು ಜನರನ್ನು ಆಕರ್ಷಿಸುತ್ತಿದೆ. ಈ ವೈರಲ್ ವೀಡಿಯೊದಲ್ಲಿ, ಮದುವೆಯ ಬಾರಾತ್‌ನ ಮೆರವಣಿಗೆ ಹೊರಟಿದ್ದು, ಈ ವೇಳೆ ವ್ಯಕ್ತಿಯೊಬ್ಬರು ವಿಚಿತ್ರವಾಗಿ ನೃತ್ಯ ಮಾಡುವುದನ್ನು ನಾವು ನೋಡಬಹುದು. ಆ ಮೆರವಣಿಗೆಯಲ್ಲಿ ಆ ವ್ಯಕ್ತಿ ಕುಣಿಯುತ್ತಾ ಕುದುರೆಗಳ ಹತ್ತಿರ ನೃತ್ಯ ಹೆಜ್ಜೆಗಳನ್ನು ಹಾಕುತ್ತಿದ್ದಾನೆ. ಈ ವೇಳೆ ಅವನ ವಿಚಿತ್ರ ಹೆಜ್ಜೆಗಳನ್ನು ಕಂಡು ಕುದುರೆಯೊಂದಕ್ಕೆ ಸಿಕ್ಕಾಪಟ್ಟೆ ಕಿರಿಕಿರಿ ಮಾಡಿದಂತೆ ಕಂಡಿದೆ.

ಹೀಗೆ ಕಿರಿಕಿರಿ ಅನುಭವಿಸಿದ ಕುದುರೆ ಆ ವ್ಯಕ್ತಿಯನ್ನು ತನ್ನ ಹಿಂದಿನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತಿ ಝಾಡಿಸಿ ಒದ್ದಿದ್ದು, ಜೋಶ್ ನಿಂದ ಕುಣಿಯುತ್ತಿದ್ದ ವ್ಯಕ್ತಿ ಕುದುರೆಯ ಒದ್ದ ರಭಸಕ್ಕೆ ಸ್ವಲ್ಪ ದೂರಕ್ಕೆ ಹಾರಿ ನೆಲದ ಮೇಲೆ ದೊಪ್ಪೆಂದು ಬಿದ್ದಿದ್ದಾನೆ. ವೈರಲ್ ಆದ ಈ ವಿಡಿಯೋ ನೋಡಿ ನೆಟ್ಟಿಗರೆಲ್ಲರೂ ಸಹಾ ಬಿದ್ದು ಬಿದ್ದು ನಗುತ್ತಿದ್ದಾರೆ. ಅಲ್ಲದೇ ನೆಟ್ಟಿಗರು, ನೀವು ಕುದುರೆಗಳನ್ನು ಕೀಟಲೆ ಮಾಡಿದರೆ, ಅವು ಹೇಗೆ ತಾನೇ ಶಾಂತವಾಗಿರಲು ಸಾಧ್ಯವೇ? ಅವು ಹೀಗೆ ಪ್ರತಿಕ್ರಿಯೆ ನೀಡುತ್ತವೆ ಎಂದು ವ್ಯಂಗ್ಯ ಮಾಡಿದ್ದಾರೆ.

ವಾಸ್ತವವಾಗಿ, ಯಾರೇ ಆಗಲೀ ಪ್ರಾಣಿಗಳ ಬಳಿ ಅತಿಯಾಗಿ ಆಡಿದರೆ, ಅವುಗಳಿಗೆ ಕಿರಿಕಿರಿ ಉಂಟು ಮಾಡಿದರೆ ಸಹಜವಾಗಿಯೇ ಅವುಗಳ ತಾಳ್ಮೆ ಕೆಡುತ್ತದೆ. ಅಂತಹ ಸಂದರ್ಭಗಳಲ್ಲಿ ಅವು ಬಹಳ ತೀವ್ರವಾಗಿ ಪ್ರತಿಕ್ರಿಯಿಸುತ್ತವೆ ಎಂದು ಹೇಳಲಾಗುತ್ತದೆ. ಇನ್ನು ವೀಡಿಯೋದಲ್ಲಿ ಕುದುರೆ ದಾಳಿಗೆ ತುತ್ತಾದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆಯಂತೆ. ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳ ವೇದಿಕೆ ಇನ್ಸ್ಟಾಗ್ರಾಂ ನಲ್ಲಿ iam_a_dreamer_5 ಹೆಸರಿನ ಖಾತೆಯಲ್ಲಿ ಅದರ ಬಳಕೆದಾರರು ಹಂಚಿಕೊಂಡಿದ್ದಾರೆ.

Leave a Reply

Your email address will not be published.