ಮದುವೆ ಎನ್ನುವ ಸಂಭ್ರಮ ಪ್ರತಿಯೊಬ್ಬರ ಜೀವನದಲ್ಲೂ ಸಹಾ ಬಹಳ ವಿಶೇಷವಾಗಿರುತ್ತದೆ. ಜೀವನದಲ್ಲಿ ಒಮ್ಮೆ ಬರುವ ಈ ಸಂತೋಷದ ಕ್ಷಣಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಹಾಗೆ ಮಾಡಲು ಅನೇಕರು, ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಪ್ರಸ್ತುತ ದಿನಗಳಲ್ಲಿ ಮದುವೆ ಸಂಭ್ರಮ ಎಂದರೆ ಅಲ್ಲಿ ಡಿಜೆ ಸಾಂಗ್ ಗಳ ಅಬ್ಬರ ಜೋರಾಗಿರುತ್ತದೆ. ಅಲ್ಲದೇ ಮದುವೆಯಲ್ಲಿ ಡ್ಯಾನ್ಸ್ ಮಾಡುವ ಸಲುವಾಗಿ ಮೊದಲೇ ಸಾಕಷ್ಟು ಸಿದ್ಧತೆಗಳನ್ನು, ಡ್ಯಾನ್ಸ್ ಪ್ರಾಕ್ಟೀಸ್ ಗಳನ್ನು ಸಹಾ ಮಾಡುತ್ತಾರೆ. ಮದುವೆಗಳಲ್ಲಿ ಡ್ಯಾನ್ಸ್ ಎನ್ನುವುದು ಬಹಳ ಸಾಮಾನ್ಯ ಎನಿಸಿದೆ.
ಇನ್ನು ಮದುವೆ ಮಂಟಪದಲ್ಲಿ, ರಿಸಪ್ಷನ್ ವೇದಿಕೆಯಲ್ಲಿ, ವಧು, ವರ ಡ್ಯಾನ್ಸ್ ಮಾಡುವ ಅನೇಕ ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈಗ ಇವೆಲ್ಲವುಗಳಿಗಿಂತ ಭಿನ್ನವಾಗಿ ವರನೊಬ್ಬನು ಮದುವೆಯ ಖುಷಿಯಲ್ಲಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿ, ತಾನು ಮಾಡಿದ ಕೆಲಸಕ್ಕೆ ಭಾರೀ ದಂಡವನ್ನು ಕೂಡಾ ತೆತ್ತಿದ್ದಾನೆ. ಈ ಡ್ಯಾನ್ಸ್ ಗೆ ಸಂಬಂಧಿಸಿದ ವೀಡಿಯೊವನ್ನು ಸ್ಥಳೀಯ ಪೋಲಿಸರು ಶೇರ್ ಮಾಡಿದ್ದು, ಅದು ವೈರಲ್ ಆಗಿದೆ.
ಉತ್ತರ ಪ್ರದೇಶದ ಮುಜಾಫರ್ ನಗರಕ್ಕೆ ಸೇರಿದ ಯುವಕನೊಬ್ಬನು ತನ್ನ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಿಕೊಂಡಿದ್ದಾನೆ. ವಿವಾಹದ ನಂತರ ಸಂಜೆ ಮೆರವಣಿಗೆಯನ್ನು ಸಹಾ ಬಹಳ ಜೋರಾಗಿ ನಡೆಸಿದ್ದಾರೆ. ಅದರ ಭಾಗವಾಗಿಯೇ ಮದುವೆ ಗಂಡು ಹಾಗೂ ಆತನ ಮಿತ್ರರು ಒಂಬತ್ತು ಕಾರುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ವಿನ್ಯಾಸಗಳನ್ನು ಮಾಡಿದ್ದಾರೆ. ವರನು ಟಾಪ್ ಲೆಸ್ ಆಡಿ ಕಾರಿನಲ್ಲಿ ಹತ್ತಿ ನಿಂತು ಕೊಂಡು ಪೋಸ್ ನೀಡಿದ್ದಾನೆ.
ಆತನ ಮಿತ್ರರು ಬೇರೆ ಬೇರೆ ಕಾರುಗಳ ಮೇಲೆ ಹತ್ತಿ ಸೆಲ್ಫಿ ಗಳನ್ನು ತೆಗೆದುಕೊಂಡಿದ್ದಾರೆ. ಇನ್ನೂ ಕೆಲವರು ಸೆಲ್ಫಿ ತೆಗೆದುಕೊಂಡು, ಚಲಿಸುತ್ತಿದ್ದ ಕಾರುಗಳಲ್ಲೇ ಡ್ಯಾನ್ಸ್ ಗಳನ್ನು ಮಾಡಿದ್ದಾರೆ. ಮುಜಾಫರ್ ನಗರ್ ಮತ್ತು ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹುದೊಂದು ಅ ಪಾ ರ ಕಾರಿ ಸ್ಟಂಟ್ ಗಳನ್ನು ಮಾಡಿದ್ದಾರೆ ವರ ಮತ್ತು ಆತನ ಮಿತ್ರ ಬೃಂದ. ದಾರಿ ಹೋಕರು ವೀಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೇಲೆ ಅದು ಪೋಲಿಸರಿಗೂ ತಲುಪಿದೆ.
ನೆಟ್ಟಿಗರು ರಸ್ತೆಯ ಮೇಲೆ ಇತರೆ ಪ್ರಯಾಣಿಕರಿಗೂ ತೊಂದರೆಯಾಗುವಂತಹ ಅ ಪಾ ಯ ಕಾರಿ ಮೆರವಣಿಗೆ ಹೊರಟವರ ಮೇಲೆ ಸಿಟ್ಟು, ಅಸಮಾಧಾನವನ್ನು ಹೊರ ಹಾಕಿದ್ದಾರೆ. ವಿಷಯ ಎಲ್ಲೆಡೆ ವೈರಲ್ ಆಗಿ ವ್ಯಾಪಕ ಟೀಕೆಗಳು ಹರಿದು ಬಂದ ಕೂಡಲೇ ಪೋಲಿಸರು ಎಲ್ಲಾ ಒಂಬತ್ತು ಕಾರುಗಳನ್ನು ಸೀಜ್ ಮಾಡಿದ್ದು, ಕಾರುಗಳ ಮಾಲೀಕರಿಗೆ ಎರಡು ಲಕ್ಷ ರೂ. ಗಳ ದಂಡವನ್ನು ವಿಧಿಸಿದ್ದಾರೆ. ಪೋಲಿಸರು ಶೇರ್ ಮಾಡಿದ ವೀಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.