ಮದುವೆ ಆದ್ಮೇಲೆ ಫಸ್ಟ್ ನೈಟ್ ನಲ್ಲಿ ಏನ್ಮಾಡ್ತೀರಾ?? ಪತ್ರಕರ್ತರಿಗೆ ರಚಿತಾ ಪ್ರಶ್ನೆ, ಪಡ್ಡೆಗಳ ಹಾರ್ಟ್ ಬೀಟ್ ಹೆಚ್ಚಿಸಿದ ನಟಿ

Written by Soma Shekar

Published on:

---Join Our Channel---

ಕನ್ನಡ ಸಿನಿಮಾ ರಂಗದ ಸ್ಟಾರ್ ನಟಿಯಾಗಿ ಗುರ್ತಿಸಿಕೊಂಡು, ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿ ರಚಿತಾ ರಾಮ್. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ರಚಿತಾ ರಾಮ್ ಅವರು ಹೊಸ ಸಿನಿಮಾ ಲವ್ ಯು ರಚ್ಚು ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ಅವರಿಗೆ ಜೋಡಿಯಾಗಿ, ನಾಯಕನಾಗಿ ನಟಿಸಿದ್ದಾರೆ ನಟ ಅಜಯ್ ರಾವ್ ಅವರು. ಈ ಸಿನಿಮಾದ ಒಂದು ರೋಮ್ಯಾಂಟಿಕ್ ಹಾಡಿನ ದೃಶ್ಯ ಯೂಟ್ಯೂಬ್ ನಲ್ಲಿ ಸದ್ದು ಮಾಡಿದೆ. ಈ ಹಾಡಿನಲ್ಲಿ ಕಂಡ ಹಸಿ, ಬಿಸಿ ದೃಶ್ಯದ ಬಗ್ಗೆ ಚರ್ಚೆಗಳು ನಡೆದಿವೆ.

ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅವರ ಐ ಲವ್ ಯೂ ಸಿನಿಮಾದಲ್ಲಿ ರಚಿತಾ ಒಂದು ಬೋಲ್ಡ್ ಹಾಡಿನಲ್ಲಿ ಕಾಣಿಸಿಕೊಂಡು, ಅನಂತರ ಮಾದ್ಯಮಗಳ ಮುಂದೆ ಅದರ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೇ ಇನ್ನು ಮುಂದೆ ಅಂತ ದೃಶ್ಯ ಗಳಲ್ಲಿ ನಟಿಸುವುದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರು. ಆದರೆ ಐ ಲವ್ಯೂ ರಚ್ಚು ಸಿನಿಮಾದಲ್ಲಿ ಮತ್ತೊಮ್ಮೆ ಬೋಲ್ಡಾಗಿ ರಚಿತಾ ಕಾಣಿಸಿಕೊಂಡಿದ್ದು, ಈ ಕುರಿತು ಮಾದ್ಯಮಗಳ ಮಿತ್ರರು ಅವರನ್ನು ನೇರವಾಗಿಯೇ ಪ್ರಶ್ನೆ ಮಾಡಿದ್ದಾರೆ.

ಮಾದ್ಯಮದವರು, ನೀವು ಹಾಟ್ ಸೀನ್ ಗಳಲ್ಲಿ ನಟಿಸೋದಿಲ್ಲ ಎಂದು ಹೇಳಿದ್ದವರು ಇದೀಗ ಈ ಸಿನಿಮಾದಲ್ಲಿ ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲು ಕಾರಣವೇನು?? ಎಂದು ಕೇಳಿದ್ದಾರೆ. ಆಗ ರಚಿತಾ ರಾಮ್ ಅವರು ಹೌದು ನಾನು ನಟಿಸಲ್ಲ ಅಂತ ಹೇಳಿದ್ದೆ. ಆದರೆ ಈಗ ನಟಿಸಿದ್ದೇನೆ ಅಂದ ಮೇಲೆ ಅಲ್ಲಿ ಏನೋ ಒಂದು ವಿಶೇಷ ಇದೆ ಎಂದು ಅರ್ಥ ಎಂದು ಉತ್ತರವನ್ನು ನೀಡಿ ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಇನ್ನಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಾನು ಆ ಚಿತ್ರದಲ್ಲಿ ಅಷ್ಟ ಹಾಟ್ ಆಗಿ ಏಕೆ ನಟಿಸಿದ್ದೇನೆ ಗೊತ್ತಾ?? ಫಸ್ಟ್ ನೈಟ್ ನಲ್ಲಿ ಏನ್ ಮಾಡ್ತಾರೆ, ನಿಮ್ಮಲ್ಲಿ ಬಹುತೇಕ ಎಲ್ಲರಿಗೂ ಮದುವೆ ಆಗಿದೆ. ಫಸ್ಟ್ ನೈಟ್ ನಲ್ಲಿ ಏನ್ಮಾಡ್ತಾರೆ ಹೇಳಿ?? ಎಂದು ರಚಿತಾ ಪತ್ರಕರ್ತ ರನ್ನೇ ಪ್ರಶ್ನೆ ಮಾಡಿದ್ದಾರೆ. ಅನಂತರ ಅವರು, ರೊಮಾನ್ಸ್ ಅಲ್ವಾ, ಅದನ್ನೇ ನಾವು ಮಾಡಿರೋದು, ಡೀಟೈಲ್ ಆಗಿ ಹೋಗಿಲ್ಲ, ಬೇಸಿಕ್ ಅಷ್ಟೇ ಎಂದಿದ್ದು, ಯಾಕೆ‌ ನಾನು ಮಾಡಲ್ಲ‌ ಅಂತ ಹೇಳಿ ಮಾಡಿದ್ದೀನಿ ಅಂದ್ರೆ ಅದು ಸಿನಿಮಾ ನೋಡಿದ್ರೆ ಗೊತ್ತಾಗುತ್ತದೆ ಎಂದಿದ್ದಾರೆ ರಚಿತಾ.

Leave a Comment