ಮದುವೆ ಆಗೋದಿಕ್ಕೆ ನಾನಿನ್ನೂ ಚಿಕ್ಕವಳು: ಪ್ರೀತಿ, ಪ್ರೇಮ, ಮದುವೆಯ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ!!

Entertainment Featured-Articles News

ರಶ್ಮಿಕಾ ಮಂದಣ್ಣ ಪ್ರಸ್ತುತ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಯಶಸ್ಸಿನ ನಂತರ ಮತ್ತೊಂದು ಎತ್ತರಕ್ಕೆ ಬೆಳೆದಿದ್ದು, ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್ ಚಿತ್ರಸೀಮೆಯಿಂದ ಅವಕಾಶಗಳು ಅರಸಿ ಬಂದವು. ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡರು.

ಬಾಲಿವುಡ್ ನ ಎರಡು ಸಿನಿಮಾಗಳು ಕೂಡಾ‌ ಇನ್ನೂ ಹಣ ಬಿಡುಗಡೆಯಾಗಿಲ್ಲ. ಆದರೆ ಅದಕ್ಕಿಂತ ಮೊದಲೇ ಬಾಲಿವುಡ್ ಒಂದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾಕ್ಕೆ ರಶ್ಮಿಕಾ ಅವಕಾಶವನ್ನು ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಈಗಾಗಲೇ ಹರಿದಾಡುತ್ತಿದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ನಟಿಯು ಮದುವೆಯ ಬಗ್ಗೆ ಯಾವ ಆಲೋಚನೆಯನ್ನು ಮಾಡುತ್ತಾರೆ, ಈ ವಿಚಾರದ ಕುರಿತಾಗಿ ಅವರ ಅಭಿಪ್ರಾಯಗಳು ಏನು ಎಂದು ತಿಳಿಯುವ ಆಸಕ್ತಿ ಅಭಿಮಾನಿಗಳಲ್ಲಿ ಹಾಗೂ ಶನಿ ಪ್ರೇಮಿಗಳ ಮನಸ್ಸಿನಲ್ಲಿ ಇದೆ.‌

ಅಲ್ಲದೇ ಈ ಹಿಂದೆ ಅವರ ನಿಶ್ಚಿತಾರ್ಥವು ಮುರಿದು ಬಿದ್ದ ಕಾರಣದಿಂದಾಗಿ ಅನೇಕ ಸಂದರ್ಶನಗಳಲ್ಲಿ ರಶ್ಮಿಕಾ ಮುಂದೆ ಮದುವೆಯ ವಿಚಾರ ಬರುತ್ತದೆ. ಇತ್ತೀಚೆಗಷ್ಟೇ ಇಂಡಿಯಾ ಟುಡೇ ನಡೆಸಿದಂತಹ ಸಂದರ್ಶನವೊಂದರಲ್ಲಿ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಈ ವಿಚಾರಗಳ ಕುರಿತಾಗಿ ಮಾತನಾಡಿದ್ದಾರೆ ಹಾಗೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಶ್ಮಿಕ ಮಾತನಾಡುತ್ತಾ, ಪ್ರೀತಿ ಎಂದರೆ ಅದು ಪರಸ್ಪರ ಸಮಯ, ಗೌರವ ನೀಡುವುದು ಹಾಗೂ ಒಬ್ಬರ ಜೊತೆಗೆ ಸುರಕ್ಷಿತ ಎನ್ನುವ ಭಾವನೆ ಮೂಡುವುದು ಎಂದು ಹೇಳಿದ್ದಾರೆ.

ಪ್ರೀತಿಯೆಂಬುದು ಸಂಪೂರ್ಣವಾಗಿ ಭಾವನೆಗಳಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟ ಎನ್ನುವ ಮಾತನ್ನು ಸಹ ಅವರೇ ಹೇಳಿದ್ದಾರೆ. ಇನ್ನು ಎರಡು ಕಡೆಯಿಂದಲೂ ಎಲ್ಲವೂ ಸರಿ ಇದ್ದಾಗ ಮಾತ್ರ ಪ್ರೀತಿಯು ಸಫಲವಾಗುತ್ತದೆ, ಒಂದು ಕಡೆಯಿಂದ ಅದು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ. ಇನ್ನು ಮದುವೆಯ ವಿಚಾರದಲ್ಲಿ, ನಾನು ಆ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಇದರ ಬಗ್ಗೆ ಏನು ಆಲೋಚನೆ ಮಾಡಬೇಕು ಎಂದು ನನಗೆ ತಿಳಿದಿಲ್ಲ.

ಮದುವೆ ಆಗಲು ನಾನಿನ್ನೂ ತುಂಬಾ ಚಿಕ್ಕವಳು, ಅದರ ಬಗ್ಗೆ ಯಾವುದೇ ನಿರ್ಧಾರವನ್ನು ಮಾಡಿಲ್ಲ ಎನ್ನುತ್ತಲೇ, ನಿಮಗೆ ಕಂಫರ್ಟಬಲ್ ಎನಿಸುವವರ ಜೊತೆಗೆ ನೀವು ಇರಬೇಕು ಎನ್ನುವ ಮಾತನ್ನು ಹೇಳುವ ಮೂಲಕ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯವೇನು ಎನ್ನುವುದನ್ನು ತಿಳಿಸಿದ್ದಾರೆ. ಇನ್ನು ಸಿನಿಮಾ ವಿಚಾರಗಳಿಗೆ ಬಂದರೆ ರಶ್ಮಿಕಾ ನಾಯಕಿಯಾಗಿ ತೆಲುಗಿನ ಜನಪ್ರಿಯ ನಟ ಶರ್ವಾನಂದ್ ನಾಯಕನಾಗಿ ಕಾಣಿಸಿಕೊಂಡಿರುವ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ಇದೇ ಫೆಬ್ರವರಿ 25 ರಂದು ತೆರೆಗೆ ಬರಲು ಸಜ್ಜಾಗಿದೆ.

ಹಿಂದಿಯಲ್ಲಿ ರಶ್ಮಿಕಾ ಅಭಿನಯದ ಮಿಷನ್ ಮಜ್ನು ಮತ್ತು ಗುಡ್ ಬೈ ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಪ್ರಸ್ತುತ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಜೊತೆಗೆ ಹೊಸ ಸಿನಿಮಾ ಒಂದರಲ್ಲಿ ರಶ್ಮಿಕಾ ತೊಡಗಿಕೊಂಡಿದ್ದಾರೆ. ಅಲ್ಲದೇ ಆದರೆ ನಾಯಕಿಯಾಗಿರುವ ಪುಷ್ಪ ಟು ಸಿನಿಮಾ ಕೂಡ ಶ್ರೀಘ್ರದಲ್ಲೆ ಚಿತ್ರೀಕರಣವನ್ನು ಪ್ರಾರಂಭಿಸಲಿದೆ ಎನ್ನಲಾಗುತ್ತಿದೆ. ತೆಲುಗಿನ ಸ್ಟಾರ್ ನಟ ರಾಮ್ ಚರಣ್ ತೇಜ ಅವರ ಹೊಸ ಸಿನಿಮಾ ವಿಚಾರದಲ್ಲಿ ರಶ್ಮಿಕಾ ನಾಯಕಿ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.

Leave a Reply

Your email address will not be published.