ಮೊದಲ ಮಗುವಿನ ಆಗಮನದ ಖುಷಿಯಲ್ಲಿ ಆಲಿಯಾ: ಇಷ್ಟು ಬೇಗ ಮಗೂನ ಅಂದ ಅಭಿಮಾನಿಗಳು!!

Entertainment Featured-Articles Movies News

ಬಾಲಿವುಡ್ ಸಿನಿಮಾ ರಂಗದ ಸ್ಟಾರ್ ಜೋಡಿಗಳ‌ ಸಾಲಿಗೆ ಇತ್ತೀಚಿಗೆ ಸೇರಿದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ.‌‌ ಈ ಜೋಡಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟ ವಿಷಯ ದೊಡ್ಡ ಸುದ್ದಿಯಾಗಿತ್ತು. ಕಳೆದ ಏಪ್ರಿಲ್ ನಲ್ಲಿ ನಡೆದ ರಣಬೀರ್ ಮತ್ತು ಆಲಿಯಾ ಮದುವೆಯ ಸಂಭ್ರಮದ ಫೋಟೋಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದರು. ರಣಬೀರ್ ಹಾಗೂ ಆಲಿಯಾ ಅಭಿಮಾನಿಗಳು ಈ ಜೋಡಿಗೆ ಸೋಶಿಯಲ್ ಮೀಡಿಯಾಗಳ ಮೂಲಕ ದೊಡ್ಡ ಮಟ್ಟದಲ್ಲಿ ಶುಭಾಶಯವನ್ನು ಕೋರಿದ್ದರು.

ಮದುವೆ ನಂತರ ಕೆಲವೇ ದಿನಗಳ ಬ್ರೇಕ್ ಪಡೆದಿದ್ದ ಜೋಡಿ ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅಲ್ಲದೇ ಇತ್ತೀಚಿಗಷ್ಟೇ ರಣಬೀರ್ ಮತ್ತು ಆಲಿಯಾ ಜೋಡಿಯಾಗಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ದೊಡ್ಡ ಸದ್ದನ್ನು ಮಾಡಿದ್ದು, ಬಾರೀ ತಾರಾಗಣದ ಈ ಸಿನಿಮಾ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ನಟಿ ಆಲಿಯಾ ಭಟ್ ಅಭಿಮಾನಿಗಳೊಂದಿಗೆ ಮತ್ತೊಂದು ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ವಿಷಯ ಕೇಳಿ ಥ್ರಿಲ್ ಆಗಿದ್ದಾರೆ.

ಹೌದು, ನಟಿ ಆಲಿಯಾ ಭಟ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದು, ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿಕೊಂಡ ನಟಿ, ನಮ್ಮ‌ ಮಗು, ಶೀಘ್ರದಲ್ಲೇ ಬರಲಿದೆ ಎಂದು ಬರೆದುಕೊಂಡಿದ್ದಾರೆ. ರಣಬೀರ್ ಕಪೂರ್ ಅವರ ಸಹೋದರಿ ರಿಧಿಮಾ ಕಪೂರ್ ಸಹಾ ಈ ಫೋಟೋ ಹಂಚಿಕೊಂಡು, ಖುಷಿ ವ್ಯಕ್ತಪಡಿಸಿರುವುದು ಮಾತ್ರವೇ ಅಲ್ಲದೇ ರಣಬೀರ್ ಮತ್ತು ಆಲಿಯಾಗೆ ಶುಭವನ್ನು ಹಾರೈಸುತ್ತಾ, ನಮ್ಮ ಮಕ್ಕಳಿಗೆ, ಮಗು, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಆಲಿಯಾ ಭಟ್ ಶೇರ್ ಮಾಡಿದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ‌. ಅಲ್ಲದೇ ರಣಬೀರ್ ಮತ್ತು ಆಲಿಯಾ ಅಭಿಮಾನಿಗಳ ಕಡೆಯಿಂದ ಶುಭ ಹಾರೈಕೆಗಳ ಕಾಮೆಂಟ್ ಗಳು ಹರಿದು ಬರುತ್ತಿವೆ. ಕಾಮೆಂಟ್ ಮಾಡಿದವರು ಈ ಜೋಡಿಗೆ ಕಂಗ್ರಾಟ್ಸ್ ಹೇಳುತ್ತಿದ್ದಾರೆ. ಅನೇಕರು ಸುಂದರವಾದ ಇಮೋಜಿಗಳು, ಹಾರ್ಟ್ ಸಿಂಬಲ್ ಗಳ ಮೂಲಕ ರಣಬೀರ್ ಮತ್ತು ಆಲಿಯಾ ಜೋಡಿಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published.