ಮದುವೆಯ ಖುಷಿಯಲ್ಲಿ ಕುಣಿದು ಮೈಮರೆತ ವರ, ಬೇರೊಬ್ಬನ ಜೊತೆ ಸಪ್ತಪದಿ ತುಳಿದ ವಧು!!

Entertainment Featured-Articles News

ಮದುವೆಯ ಸಂಭ್ರಮ ಸಡಗರ ಎಂದ ಮೇಲೆ ಅಲ್ಲಿ ಹಾಡುಗಳು ಮತ್ತು ನೃತ್ಯ ಇದ್ದೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ಮದುವೆ ಸಂಪ್ರದಾಯಗಳಲ್ಲಿ ಹಾಡುಗಳು ಮತ್ತು ಕುಣಿತಕ್ಕೆ ವಿಶೇಷವಾದ ಆದ್ಯತೆಯನ್ನು ನೀಡಲಾಗುತ್ತದೆ. ಆದರೆ ಕೊರೋನಾ ಸಂದರ್ಭದಲ್ಲಿ ಇಂತಹ ಅದ್ದೂರಿ ಮದುವೆಗಳಿಗೆ ಕಡಿವಾಣ ಬಿದ್ದಿತ್ತು. ಆದರೆ ಈಗ ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ಮತ್ತೆ ಅಬ್ಬರದ, ಅದ್ದೂರಿ ಮದುವೆಗಳ ಸಡಗರಕ್ಕೆ ಚಾಲನೆ ದೊರೆತಿದೆ. ಮತ್ತೊಮ್ಮೆ ಮದುವೆಗೆ ಬರುವ ಜನ ಖುಷಿಯಿಂದ ಹಾಡಿ ಕುಣಿಯುವ ಸಂಭ್ರಮ ಕಾಣತೊಡಗಿದೆ.

ಆದರೆ ಇಲ್ಲೊಂದು ಮದುವೆಯಲ್ಲಿ ಮದುವೆಯ ಖುಷಿಯನ್ನು ಸಂಭ್ರಮಿಸುತ್ತಾ, ಕುಣಿಯುತ್ತಿದ್ದ ಮದು ಮಗನಿಗೆ ಆತನ ನೃತ್ಯವೇ ಸಮಸ್ಯೆಯಾಗಿ ಪರಿಣಮಿಸಿದೆ. ಹೌದು ಇಲ್ಲೊಂದು ವಿಚಿತ್ರ ಘಟನೆಯಲ್ಲಿ ಮದುವೆಯ ಖುಷಿಯಲ್ಲಿ ಮದು ಮಗನು ತನ್ನ ಸ್ನೇಹಿತರೊಂದಿಗೆ ಚೆನ್ನಾಗಿ ಕುಣಿಯುತ್ತಾ ಸಮಯ ಕಳೆಯುವಾಗಲೇ ವಧು ಬೇರೊಬ್ಬನ ಜೊತೆಗೆ ಸಪ್ತಪದಿಯನ್ನು ತುಳಿದಿರುವ ವಿಲಕ್ಷಣ ಬೆಳವಣಿಗೆಯೊಂದು ನಡೆದಿದೆ. ಈ ಘಟನೆ ವಿಚಿತ್ರ ಎನಿಸಿದರೂ ವಾಸ್ತವವಾಗಿದೆ.

ಇಂತಹುದೊಂದು ವಿಚಿತ್ರವಾದ ಘಟನೆಯು ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ತನ್ನದೇ ಮದುವೆಯ ಖುಷಿಯಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ ವರನು, ಸ್ನೇಹಿತರ ಜೊತೆಗೆ ತಡವಾಗಿ ಮದುವೆ ಮಂಟಪವನ್ನು ತಲುಪಿದ್ದಾನೆ. ಆತನು ಮದುವೆ ಮಂಟಪಕ್ಕೆ ಬರುವ ವೇಳೆಗೆ ಸಾಕಷ್ಟು ಸಿಟ್ಟಾಗಿದ್ದ ವಧುವಿನ ಕಡೆಯ ಬಂಧು-ಮಿತ್ರರು ವಧುವನ್ನು ಆತನಿಗೆ ನೀಡಿ ವಿವಾಹ ಮಾಡಲು ತಿರಸ್ಕರಿಸಿ, ಅದೇ ಮಂಟಪದಲ್ಲಿ ಬೇರೊಬ್ಬ ಯುವಕನ ಜೊತೆಗೆ ಮದುವೆಯನ್ನು ಮಾಡಿ ಮುಗಿಸಿದ್ದಾರೆ.

ಗಂಡಿನ ಕಡೆಯವರು ಮೆರವಣಿಗೆಯಲ್ಲಿ ಬರುವಾಗ ಸಿಕ್ಕಾಪಟ್ಟೆ ತಡ ಮಾಡಿದ್ದಾರೆ. ಅದಾಗಲೇ ಮದುವೆ ಮಂಟಪದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ವಧುವಿನ ಕಡೆಯವರು ಸಾತ್ ಫೇರೆ ಅಂದರೆ ಗಂಡು-ಹೆಣ್ಣು ಅಗ್ನಿಯ ಸುತ್ತ 7 ಸುತ್ತುಗಳನ್ನು ತೆಗೆದುಕೊಳ್ಳುವ ಪವಿತ್ರವಾದ ಸಂಪ್ರದಾಯ ಕ್ಕಾಗಿ ಕಾದಿದ್ದಾರೆ. ಆದರೆ ಗಂಡಿನ ಕಡೆಯವರು ಹಾಗೂ ಸ್ವತಃ ಮದುವೆ ಗಂಡು ಸಹಾ ಕುಣಿದು ಕುಪ್ಪಳಿಸಿ ರಾತ್ರಿ ಎರಡು ಗಂಟೆಯ ವೇಳೆಗೆ ಮದುವೆ ಮಂಟಪವನ್ನು ತಲುಪಿದ್ದಾನೆ.

ಇದರಿಂದ ಕೋಪಗೊಂಡ ವಧುವಿನ ಕಡೆಯವರು, ವರನಿಗೆ ಸಂಪ್ರದಾಯದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ, ನಾವು ನಮ್ಮ ಹುಡುಗಿಯನ್ನು ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿ ಅದೇ ಮಂಟಪದಲ್ಲಿ ಬೇರೆ ಯುವಕನೊಡನೆ ಮದುವೆಯನ್ನು ಮಾಡಿಸಿದ್ದಾರೆ. ಗಂಡಿನ ಕಡೆಯವರನ್ನು ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಸು ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ಗಂಡಿನ ಕಡೆಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೆಣ್ಣಿನ ಕಡೆಯವರ ಮೇಲೆ ದೂರನ್ನು ದಾಖಲಿಸಿದ್ದಾರೆ.‌

Leave a Reply

Your email address will not be published. Required fields are marked *