ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದರು ಈ ಬಾಲಿವುಡ್ ನ ಈ ಸ್ಟಾರ್ ನಟಿ ಮಣಿಯರು

Written by Soma Shekar

Published on:

---Join Our Channel---

ಬಾಲಿವುಡ್ ಎನ್ನುವ ಬಣ್ಣದ ಲೋಕದ ಕುರಿತಾಗಿ ಪ್ರತಿದಿನವೂ ಒಂದಲ್ಲಾ ಒಂದು ಸುದ್ದಿ ಹೊರ ಬರುತ್ತಲೇ ಇರುತ್ತವೆ. ಇನ್ನು ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ದಕ್ಷಿಣ ಸಿನಿಮಾಗಳ ಅಬ್ಬರಕ್ಕೆ ಕಳೆಗುಂದಿದೆ. ಬಾಲಿವುಡ್ ಸಿನಿಮಾಗಳು ಸಾಲು ಸಾಲಾಗಿ ಮಕಾಡೆ ಮಲಗುತ್ತಿವೆ. ಸಿನಿಮಾಗಳು ವಿಫಲವಾದರೂ ಬಾಲಿವುಡ್ ನ ಗಾಸಿಪ್ ಗಳು, ಅಫೇರ್ ಗಳು, ಬ್ರೇಕಪ್ ಗಳ ಸುದ್ದಿಗಳಿಗೆ ಮಾತ್ರ ಕೊರತೆ‌ ಖಂಡಿತ ಇಲ್ಲ. ಸಿನಿಮಾಗಳ ಮೂಲಕ ಭೇಟಿಯಾದ ಸ್ಟಾರ್ ಗಳು ಸಿನಿಮಾ ಕೆಲಸದ ವೇಳೆಯೇ ಹತ್ತಿರವಾಗಿ ಪ್ರೇಮ ಪಾಶದಲ್ಲಿ ಸಿಲುಕಿದ್ದು ಉಂಟು.

ಹೀಗೆ ಪ್ರೇಮ ಪಾಶದಲ್ಲಿ ಸಿಲುಕಿದ ಜೋಡಿಗಳ ನಡುವಿನ ಆತ್ಮೀಯತೆ ಯಾವ ಹಂತದವರೆಗೂ ಹೋಗಿತ್ತು ಎನ್ನುವುದಾದರೆ, ಬಾಲಿವುಡ್ ನ ಕೆಲವು ನಟಿಯರು ಮದುವೆಗೆ ಮುಂಚೆಯೇ ಗರ್ಭ ಧರಿಸಿದ್ದುಂಟು. ನಾವಿಂದು ನಿಮಗೆ ಮದುವೆಗೆ ಮೊದಲೇ ಗರ್ಭಿಣಿಯರಾದ, ಕೆಲವು ಬಾಲಿವುಡ್ ಬೆಡಗಿಯರ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಹಾಗಾದರೆ ಬನ್ನಿ ಯಾರು ಈ ನಟಿಯರು ಎಂದು ತಿಳಿಯೋಣ.

ಶ್ರೀದೇವಿ: ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾ ರಂಗದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟಿ ಶ್ರೀದೇವಿ ತಾನು ಮದುವೆಗೂ ಮೊದಲು ಗರ್ಭ ಧರಿಸಿದ್ದ ವಿಷಯವನ್ನು ತಾನೇ ತಿಳಿಸಿದ್ದರು. ನಿರ್ಮಾಪಕ ಬೋನಿ ಕಪೂರ್ ಜೊತೆ ಅಫೇರ್ ಇದ್ದ ಕಾಲದಲ್ಲಿ ಶ್ರೀದೇವಿ ಮೊದಲ ಮಗುವಿನ ತಾಯಿಯಾಗುವುದರಲ್ಲಿ ಇದ್ದರು. ಅನಂತರ ಬೋನಿ ಕಪೂರ್ ಶ್ರೀದೇವಿ ಅವರನ್ನು ಮದುವೆಯಾಗಿದ್ದರು.

ಸೆಲಿನಾ ಜೇಟ್ಲಿ : ಬಾಲಿವುಡ್ ನ ಹಾಟ್ ಹಾಟ್ ನಟಿಯರಲ್ಲಿ ಹೆಸರು ಪಡೆದಿದ್ದ ನಟಿ ಸೆಲಿನಾ ಜೇಟ್ಲಿ ಅಂದು ತನ್ನ ಅಂದದಿಂದ ಪಡ್ಡೆಗಳು ಎದೆಯಲ್ಲಿ ಕಿಚ್ಚು ಹೊತ್ತಿಸಿದ್ದರು. ಈ ನಟಿ ತಮ್ಮ ಆಸ್ಟ್ರೇಲಿಯಾದ ಬಾಯ್ ಫ್ರೆಂಡ್ ಪೀಟರ್ ಹಾಗ್ಸ್ ಅವರನ್ನು ಜುಲೈ 2011 ರಲ್ಲಿ ಮದುವೆಯಾದರು. 2012 ಮಾರ್ಚ್ ನಲ್ಲಿ ಮಗುವಿಗೆ ಜನ್ಮ ನೀಡಿದರು. ಆದರೂ ನಟಿ ಮಾತ್ರ ತಾನು ಮದುವೆಗೆ ಮೊದಲೇ ಗರ್ಭ ಧರಿಸಿದ್ದ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ.

ಕಲ್ಕಿ ಕೊಚಲೀನ್ : ಬಾಲಿವುಡ್ ನಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಹೆಸರನ್ನು ಮಾಡಿರುವ ನಟಿ ಕಲ್ಕಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ದೇವ್ ಡಿ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ ಈ ನಟಿ ಇತ್ತೀಚಿಗೆ ತಾಯಿ ಆಗಿದ್ದಾರೆ. ಈ ನಟಿಯು ಇಸ್ರೇಲಿ ಶಾಸ್ತ್ರೀಯ ಪಿಯಾನೋ ವಾದಕ ಹರ್ಷ್ ಬರ್ಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ನಟಿಗೆ ಇನ್ನೂ ಮದುವೆಯಾಗಿಲ್ಲ.

ನೇಹಾ ಧೂಪಿಯಾ : ಬಾಲಿವುಡ್ ನ ಜನಪ್ರಿಯ ನಟಿ, 2002 ರ ಫೆಮಿನಾ ಮಿಸ್ ಇಂಡಿಯಾ ಟೈಟಲ್ ಖ್ಯಾತಿಯ ನೇಹಾ ಧೂಪಿಯಾ, ಬಾಲಿವುಡ್ ಸಿನಿಮಾ ನಟನೆಯ ಮೂಲಕ ಗಮನ ಸೆಳೆದವರು. ಈ ನಟಿಯು 2018 ರಲ್ಲಿ ನಟ ಅಂಗದ್ ಬೇಡಿಯನ್ನು ಮದುವೆಯಾದರು. ಮದುವೆಯಾದ ಆರು ತಿಂಗಳಲ್ಲೇ ನಟಿಯು ಮಗುವಿಗೆ ಜನ್ಮ ನೀಡಿ ತಾಯಿ ಆಗಿದ್ದಾರೆ. ನೇಹಾ ವಿವಾಹಕ್ಕೂ ಮೊದಲೇ ಗರ್ಭಿಣಿಯಾಗಿದ್ದರು.

ಮಹಿಮಾ ಚೌಧರಿ: ಮೊದಲ ಸಿನಿಮಾ ಮೂಲಕವೇ ಬಾಲಿವುಡ್ ನಲ್ಲೊಂದು ಅಬ್ಬರ ಸೃಷ್ಟಿಸಿದ್ದ ನಟಿ ಮಹಿಮಾ ಅನಂತರ ದೊಡ್ಡ ಯಶಸ್ಸನ್ನು ಪಡೆಯುವಲ್ಲಿ ಎಡವಿದರು. 2006 ರಲ್ಲಿ ಮಹಿಮಾ ಬಾಬಿ ಮುಖರ್ಜಿ ಜೊತೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಮದುವೆಯಾದ ಕೆಲವೇ ತಿಂಗಳಲ್ಲಿ ಮಹಿಮಾ ಮಗುವಿಗೆ ಜನ್ಮ ನೀಡಿದ್ದು, ಆಕೆ ಮದುವೆಗೆ ಮೊದಲೇ ಗರ್ಭ ಧರಿಸಿದ್ದರು ಎನ್ನುವುದಕ್ಕೆ ಸ್ಪಷ್ಟನೆ ನೀಡಿತ್ತು.

ನೀನಾ ಗುಪ್ತಾ : ಈ ನಟಿಗೆ ಮಾಜಿ ಕ್ರಿಕೆಟ್ ಆಟಗಾರ ವಿವಿಯನ್ ರಿಚರ್ಡ್ಸ್ ಜೊತೆಗೆ ಅಫೇರ್ ಇತ್ತು. ಆದರೆ ಅವರು ವಿವಾಹ ಆಗಲಿಲ್ಲ, ಆದರೆ ನೀನಾ ಗರ್ಭಿಣಿ ಆಗಿದ್ದರು. ನೀನಾ ಮಗುವನ್ನು ತೆಗೆಸಲಿಲ್ಲ. ಬದಲಾಗಿ ಮಗುವಿಗೆ ಜನ್ಮ ನೀಡಿ, ಸಿಂಗಲ್ ಮದರ್ ಆಗಿ ಮಗುವನ್ನು ಬೆಳೆಸುತ್ತಾ ಬಂದಿದ್ದು, ನೀನಾ ಜೀವನದಲ್ಲಿ ತಾನು ಮೋಸ ಹೋದ ಎಂದು ಹೇಳಿದ ಸಂದರ್ಭಗಳು ಸಹಾ ಉಂಟು.

Leave a Comment