ಮದುವೆಗೆ ಮುನ್ನ ವಧುವನ್ನು ನೋಡಲೇ ಬೇಕೆಂದು ವಧುವಿನ ಕೋಣೆಗೆ ಬಂದ ವರ ದಂಗಾಗಿ ಹೋದ!!

Entertainment Featured-Articles News Viral Video

ಯಾವುದೇ ಒಂದು ಮದುವೆ ನಡೆಯುವಾಗಲೂ ಸಹಾ, ಅಲ್ಲಿ ಸಾಮಾನ್ಯವಾಗಿಯೇ ಮದುವೆ ಗಂಡು ತಾನು ಮದುವೆಯಾಗಲಿರುವ ಹುಡುಗಿಯನ್ನು ಎಲ್ಲರಿಗಿಂತ ಮೊದಲು ನೋಡಲು ಬಯಸುತ್ತಾನೆ. ಮದುವೆಯ ಅಲಂಕಾರದಲ್ಲಿ ಭಾವಿ ಪತ್ನಿಯು ಹೇಗೆ ಕಾಣುವಳು, ಎಷ್ಟು ಸುಂದರವಾಗಿ ಕಂಗೊಳಿಸುವಳು ಎನ್ನುವುದನ್ನು ನೋಡುವ ತವಕ ಆತನಲ್ಲಿ ತುಂಬಿರುತ್ತದೆ. ಕೆಲವು ಯುವಕರು ಮದುವೆಯ ದಿನ ವಧುವಿನ ವೈಭವಯುತ ಪ್ರವೇಶಕ್ಕಾಗಿ ನಿರೀಕ್ಷೆಯನ್ನು ಮಾಡುತ್ತಾರೆ. ಅಲಂಕಾರಗೊಂಡ ಹುಡುಗಿಯನ್ನು ಮೊದಲು ತಾನು ನೋಡಬೇಕೆಂಬ ಉತ್ಕಟ ಇಚ್ಛೆ ಸಹಜವಾಗಿಯೇ ವರನಲ್ಲಿ ಇರುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಒಂದು ವಿಡಿಯೋ ವೈರಲ್ ಆಗುತ್ತಾ ಸಾಗಿತ್ತು. ಆ ವಿಡಿಯೋದಲ್ಲಿ ಮದುವೆಯ ಗಂಡು ತಾನು ವಿವಾಹವಾಗಲಿರುವ ಯುವತಿಯನ್ನು ನೋಡಲು ಸಿಕ್ಕಾಪಟ್ಟೆ ಕಾತುರನಾಗಿರುವುದನ್ನು ನಾವು ಗಮನಿಸಬಹುದು. ಈಗ ಅಂತಹುದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನೋಡಿದಾಗ ಮದುವೆಗೆ ಮುನ್ನ ವಧುನನ್ನು ನೋಡಲು ಹುಡುಗ ಬಹಳ ಉತ್ಸುಕನಾಗಿದ್ದು, ಆತ ಮಾಡಿದ ಕೆಲಸ ಎಲ್ಲರ ಗಮನ ಸೆಳೆದಿದೆ.

ವರನು ತನ್ನ ಉತ್ಸುಕತೆ ಹಾಗೂ ಕಾತರತೆಯಿಂದ, ತನ್ನನ್ನು ತಾನು ತಡೆದುಕೊಳ್ಳಲು ಸಾಧ್ಯವಾಗದೇ ಅಲಂಕಾರಗೊಂಡ ವಧುವನ್ನು ನೋಡುವ ಸಲುವಾಗಿ ಆಕೆ ಸಿದ್ಧವಾಗುತ್ತಿದ್ದ ವಧುವಿನ ಕೋಣೆಗೆ ಬಂದಿದ್ದಾನೆ. ಅಲ್ಲಿಗೆ ಬಂದಾಗ ಕೋಣೆಯ ಬಾಗಿಲು ತೆರೆಯುತ್ತಿದ್ದಂತೆಯೇ ಎದುರುಗಡೆ ಅಲಂಕಾರಗೊಂಡ ವಧುವನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಆಕೆಯ ಸೌಂದರ್ಯವನ್ನು ಕಂಡು ವಿಸ್ಮಯ ಗೊಂಡಂತೆ ದಂಗಾಗಿ ಹೋಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ವಧುವಿನ ಅಂದವನ್ನು ಕಂಡು ಒಂದು ಕ್ಷಣ ದಂಗಾಗಿ ಹೋದ ವರನು ಆನಂತರ ಅವಳ ಬಳಿಗೆ ಬಂದು ಆಕೆಯ ಕೈಗಳನ್ನು ತುಂಬಿಸಲು ಪ್ರಾರಂಭಿಸುತ್ತಾನೆ.

ಅಲ್ಲದೇ ಆಕೆಗೆ ಬಂದು ಅಪ್ಪುಗೆಯನ್ನು ನೀಡುತ್ತಾನೆ, ವರನು ಎಷ್ಟು ಉತ್ಸುಕನಾಗಿದ್ದಾನೆ ಎಂದರೆ ವಧುವಿನ ಕೆನ್ನೆಗೆ ಸಹಾ ಚುಂಬಿಸಲು ಮುಂದಾಗುತ್ತಾನೆ. ಆದರೆ ಆಗಲೇ ವಧುವು ಒಂದು ಎಚ್ಚರಿಕೆ ನೀಡಿ ಅದನ್ನು ತಡೆಯುತ್ತಾಳೆ. ಆದರೆ ವರನ ಸಂತೋಷಕ್ಕೆ ಪಾರವೇ ಇಲ್ಲ ಎನ್ನುವುದು ಆತನ ಮುಖ ಭಾವಗಳಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಒಟ್ಟಾರೆ ತಾನು ಮದುವೆಯಾಗಲಿರುವ ಹುಡುಗಿಯ ಅಂದವನ್ನು ಕಂಡು ವರನು ಮೋಹಪಾಶದಲ್ಲಿ ಸಿಲುಕಿದವನಂತೆ ಕಾಣುತ್ತದೆ.

Leave a Reply

Your email address will not be published.