ಮದುವೆಗೂ ಮೊದಲೇ ತಾಯಿಯಾಗುತ್ತಿರುವ ಬಾಲಿವುಡ್ ಬೆಡಗಿ ಸ್ವರಾ ಭಾಸ್ಕರ್: ಅಭಿಮಾನಿಗಳು ಫುಲ್ ಖುಷ್

Entertainment Featured-Articles News
76 Views

ಬಾಲಿವುಡ್ ನ ಪ್ರಖ್ಯಾತ ನಟಿಯರ ಸಾಲಿನಲ್ಲಿ ಹೆಸರನ್ನು ಪಡೆದುಕೊಂಡಿರುವ ನಟಿ ಸ್ವರಾ ಭಾಸ್ಕರ್. ಈ ನಟಿಯು ತನ್ನ ಅದ್ಭುತವಾದ ನಟನೆಯ ಮೂಲಕ ಅಸಂಖ್ಯಾತ ಸಿನಿಪ್ರೇಮಿಗಳ ಮನಸ್ಸನ್ನು ಗೆದ್ದು, ತನ್ನದೇ ಆದಂತಹ ಒಂದು ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷವಾದ ಛಾಪನ್ನು ಮೂಡಿಸಿರುವ ಸ್ವರಾ ತಮ್ಮ ವೈಯಕ್ತಿಯ ಬದುಕಿನಲ್ಲಿ, ತನ್ನ ಜೀವನಶೈಲಿಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.

ಈಗ ಸ್ವರಾ ಭಾಸ್ಕರ್ ತಮ್ಮ ಅಭಿಮಾನಿಗಳಿಗೆ ಒಂದು ಖುಷಿಯ ವಿಚಾರವನ್ನು ತಿಳಿಸಿದ್ದಾರೆ. ಏನದು ಖುಷಿಯ ವಿಚಾರ ಎನ್ನುವುದಾದರೆ, ನಟಿ ಸ್ವರಾ ಭಾಸ್ಕರ್ ಶೀಘ್ರದಲ್ಲೇ ತಾಯಿಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಸ್ವರಾ ಭಾಸ್ಕರ್ ತಾಯಿ ಆಗಲಿದ್ದಾರೆ ಎನ್ನುವ ವಿಚಾರ ದೊಡ್ಡ ಸಂಚಲನವನ್ನೇ ಹುಟ್ಟುಹಾಕಿದೆ. ಸ್ವರಾ ಈ ಹಿಂದೆ ಕೆಲವು ಸಂದರ್ಭಗಳಲ್ಲಿ, ಸಂದರ್ಶನ ಗಳಲ್ಲಿ ತಾನು ಸಹಾ ತಾಯಿಯಾಗಬೇಕು, ತನ್ನದೇ ಕುಟುಂಬ ಇರಬೇಕು ಎನ್ನುವ ಮಾತುಗಳನ್ನು ಎಲ್ಲರೊಡನೆ ಹಂಚಿಕೊಂಡಿದ್ದರು.

ಆದರೆ ಈಗ ಸ್ವರಾ ಭಾಸ್ಕರ್ ತಾಯಿಯಾಗುತ್ತಿದ್ದಾರೆ ಎನ್ನುವ ವಿಷಯ ಇಷ್ಟೊಂದು ದೊಡ್ಡ ಸುದ್ದಿಯಾಗಲು ಪ್ರಮುಖ ಕಾರಣ, ನಟಿ ಸ್ವರಾ ಭಾಸ್ಕರ್ ಅವರಿಗೆ ಮದುವೆಯಾಗಿಲ್ಲ ಎನ್ನುವುದು. ಹಾಗೆಂದ ಮಾತ್ರಕ್ಕೆ ಸ್ವರಾ ಭಾಸ್ಕರ್ ತಾನು ಪ್ರೀತಿಸುತ್ತಿರುವ ವ್ಯಕ್ತಿಯಿಂದ ಅಥವಾ ಮದುವೆಯಾಗಲು ಇಚ್ಛಿಸುತ್ತಿರುವ ವ್ಯಕ್ತಿಯಿಂದ ಮಗುವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದಾದರೆ, ಆ ಊಹೆ ತಪ್ಪಾಗುತ್ತದೆ. ಏಕೆಂದರೆ ಸ್ವರಾ ಮಗು ದತ್ತು ಪಡೆದುಕೊಳ್ಳುವ ಮೂಲಕ ತಾಯಿಯಾಗಲು ಹೊರಟಿದ್ದಾರೆ.

ಸ್ವರಾ ಭಾಸ್ಕರ್ ಅವರು ಕಾನೂನಿನ ರೀತಿಯಲ್ಲಿ ಮಗುವನ್ನು ದತ್ತು ಪಡೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಮಗುವನ್ನು ದತ್ತು ಪಡೆದು ಕೊಳ್ಳುವ ಮೊದಲು ಸ್ವರಾ ಭಾಸ್ಕರ್ ಬಹಳಷ್ಟು ಅನಾಥಾಶ್ರಮಗಳಿಗೆ ಭೇಟಿ ನೀಡಿ ಮಕ್ಕಳನ್ನು ನೋಡಿ ಬಂದಿದ್ದಾರೆ. ಅಲ್ಲದೇ ಈಗಾಗಲೇ ಮಕ್ಕಳನ್ನು ದತ್ತು ಪಡೆದಿರುವ ಪೋಷಕರನ್ನು ಭೇಟಿ ಮಾಡಿ, ಅವರ ಜೊತೆ ಮಾತುಕತೆ ನಡೆಸಿ ಅವರ ಅನುಭವದ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *