ಮದುವೆಗಾಗಿ ನಾಗಚೈತನ್ಯ ಮೊದಲ ಆಯ್ಕೆ ಸಮಂತಾ ಆಗಿರಲಿಲ್ಲ: ಜನ್ಮ ದಿನದಂದೇ ಬಹಿರಂಗವಾಯ್ತು ಸತ್ಯ

Written by Soma Shekar

Published on:

---Join Our Channel---

ನಾಗಚೈತನ್ಯ ಹಾಗೂ ಸಮಂತಾ ನಡುವಿನ ಸಂಬಂಧ ಈಗ ಮುಗಿದ ಅಧ್ಯಾಯ. ಆದರೆ ಅವರು ಜೋಡಿಯಾಗಿದ್ದ ದಿನಗಳಲ್ಲಿ ಚೈಸಮ್ ಜೋಡಿ ಕ್ಯೂಟ್ ಕಪಲ್ ಅಥವಾ ಮುದ್ದಾದ ಜೋಡಿಯೆಂದೇ ಅಭಿಮಾನಿಗಳ ಪ್ರೀತಿಯನ್ನು ಗಳಿಸಿತ್ತು. ಅಲ್ಲದೇ ಈ ಜೋಡಿಯು ದೂರಾಗುವರು ಎನ್ನುವ ವಿಷಯ ತಿಳಿದಾಗಲಂತೂ ಅಭಿಮಾನಿಗಳು ಬಹಳ ಬೇಸರವನ್ನು ಹೊರಹಾಕಿದ್ದರು. ವಿಚ್ಛೇದನದ ನಂತರ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಅಂತೂ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಮದುವೆಯ ನಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ಈ ಜೋಡಿಯ ಕುರಿತಾಗಿ ವಿಶೇಷವಾಗಿ ನಾಗಚೈತನ್ಯ ಬಗ್ಗೆ ಈಗ ವಿಚ್ಛೇದನದ ನಂತರ ಹೊಸ ವಿಷಯವೊಂದು ಹೊರ ಬಂದು, ಸುದ್ದಿಯಾಗಿ ಒಂದು ರೀತಿಯಲ್ಲಿ ಕುತೂಹಲವನ್ನೇ ಮೂಡಿಸಿದೆ. ಹೌದು ಈಗ ಸದ್ದು ಮಾಡಿರುವ ವಿಷಯ ಏನೆಂದರೆ ಮದುವೆಯ ವಿಚಾರದಲ್ಲಿ ನಾಗಚೈತನ್ಯ ಅವರ ಮೊದಲ ಆಯ್ಕೆ ಸಮಂತಾ ಆಗಿರಲೇ ಇಲ್ಲ ಎನ್ನುವುದಾಗಿದೆ. ಹಾಗಾದರೆ ನಾಗಚೈತನ್ಯ ಅವರ ಮೊದಲ ಆಯ್ಕೆ ಯಾರಾಗಿದ್ದರು??? ಬನ್ನಿ ತಿಳಿಯೋಣ.

ನವೆಂಬರ್ 24 ಅಂದರೆ ಇಂದು ನಾಗಚೈತನ್ಯ ತಮ್ಮ 35 ವರ್ಷದ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಅವರ ಜನ್ಮದಿನಕ್ಕೆ ಪತ್ನಿ ಸಮಂತಾ ಜೊತೆಯಲ್ಲಿ ಇಲ್ಲ. ಮೂರು ವರ್ಷಗಳಿಂದ ಜನ್ಮದಿನದಂದು ಜೊತೆಯಾಗಿರುತ್ತಿದ್ದ ಸಮಂತಾ ಈ ವರ್ಷ ಮಿಸ್ ಆಗಿದ್ದಾರೆ. ಇಂದು ಅವರ ಜನ್ಮದಿನದಂದೇ ನಾಗಚೈತನ್ಯ ಮದುವೆಯಾಗಲು ಬಯಸಿದಾಗ ಅವರ ಮೊದಲ ಆಯ್ಕೆ ಸಮಂತಾ ಆಗಿರಲಿಲ್ಲ ಎನ್ನುವ ವಿಷಯ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗುತ್ತಾ ಆಗಿದೆ.

ಹೌದು ಈಗ ಹರಡಿರುವ ಸುದ್ದಿಗಳ ಪ್ರಕಾರ ನಾಗಚೈತನ್ಯ ಮೊದಲು ಕಮಲ ಹಾಸನ್ ರ ಮಗಳು ಶೃತಿ ಹಾಸನ್ ನನ್ನು ಇಷ್ಟಪಟ್ಟಿದ್ದರು ಎನ್ನಲಾಗಿದೆ. 2013 ರಲ್ಲಿ ಮೊದಲು ಭೇಟಿಯಾದ ಈ ಇಬ್ಬರ ನಡುವೆ ಸ್ನೇಹವಾಗಿ, ಆ ಸ್ನೇಹ ಗಾಢವಾಗಿ ಡೇಟಿಂಗ್ ವರೆಗೂ ಹೋಗಿ ಇಬ್ಬರೂ ಮದುವೆ ಸಹಾ ಆಗುತ್ತಾರೆ ಎನ್ನುವ ಸುದ್ದಿಗಳು ಹರಡಿದವು. ಅಲ್ಲದೇ ಇಬ್ಬರೂ ಒಂದು ದಿನ ಸಹಾ ಒಬ್ಬರನ್ನೊಬ್ಬರು ನೋಡದೇ ಇರುತ್ತಿರಲಿಲ್ಲ ಎನ್ನುವಷ್ಟು ಗಾಢವಾದ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ.

ಆದರೆ ಒಂದು ಕಾರ್ಯ ಕ್ರಮದಲ್ಲಿ ಶೃತಿ ತಮ್ಮ ಸಹೋದರಿ ಅಕ್ಷರಾ ಜೊತೆಯಲ್ಲಿ ಇರುವಂತೆ ನಾಗಚೈತನ್ಯ ಗೆ ಹೇಳಿ ಹೋದಾಗ, ನಾಗಚೈತನ್ಯ ಅಲ್ಲಿಂದ ಕಾಲ್ಕಿತ್ತ ಕಾರಣ ಶೃತಿಗೆ ನಾಗಚೈತನ್ಯ ಮೇಲೆ ಅಸಮಾಧಾನ ಪಟ್ಟರು, ಅಲ್ಲಿಂದಲೇ ಅವರ ನಡುವೆ ಬಿರುಕು ಆರಂಭವಾಯಿತು ಎನ್ನಲಾಗಿದೆ. ಹೀಗೆ ನಾಗಚೈತನ್ಯ ಜೀವನದಲ್ಲಿ ಸಮಂತಾಗಿಂತಲೂ ಮೊದಲು ಶೃತಿಯ ಪಾತ್ರ ಇತ್ತೆನ್ನುವ ವಿಷಯ ಈಗ ಮತ್ತೆ ಸದ್ದು ಮಾಡಿದೆ.

Leave a Comment