ಮದುಮಗಳಾಗಿ ಅಭಿಮಾನಿಗಳ ಮುಂದೆ ಬಂದ ಟಿಕ್ ಟಾಕ್ ಬೆಡಗಿ, ಬಿಗ್ ಬಾಸ್ ಸುಂದರಿ ಧನುಶ್ರೀ
ಸೋಶಿಯಲ್ ಮೀಡಿಯಾಗಳ ಮೂಲಕವೇ ಸ್ಟಾರ್ ಆದವರು ಟಿಕ್ ಟಾಕ್ ಬೆಡಗಿ ಧನುಶ್ರೀ. ಅದರಲ್ಲೂ ಕನ್ನಡ ಬಿಗ್ ಬಾಸ್ ನ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಧನುಶ್ರೀ ಅವರ ಜನಪ್ರಿಯತೆ ಮೊದಲಿಗಿಂತಲೂ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧನುಶ್ರೀ ಅವರ ಹಿಂಬಾಲಕರ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ. ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬಂದಿವೆ. ಇನ್ನು ಫೋಟೋ ಶೂಟ್ ಗಳಲ್ಲೂ ಧನುಶ್ರೀ ಬ್ಯುಸಿಯಾಗಿದ್ದಾರೆ.
ಈಗ ಧನುಶ್ರೀ ಅವರ ಹೊಸ ಫೋಟೋ ಶೂಟ್ ನ ಫೋಟೋಗಳು ಸಖತ್ ಸೌಂಡ್ ಮಾಡಿವೆ. ಕೆಲವೇ ದಿನಗಳ ಹಿಂದೆ ದೇವಿಯ ರೂಪದಲ್ಲಿ ಫೋಟೋಶೂಟ್ ಮಾಡಿದ್ದ ಫೋಟೋಗಳನ್ನು ಹಂಚಿಕೊಂಡು, ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಭರಪೂರ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದ ಧನುಶ್ರೀ ಇದೀಗ ಹೊಸದೊಂದು ರೂಪದಲ್ಲಿ, ಅಭಿಮಾನಿಗಳು ಆಶ್ಚರ್ಯ ಪಡುವಂತಹ ಲುಕ್ ನಲ್ಲಿ ಎಲ್ಲರ ಮುಂದೆ ಬಂದಿದ್ದಾರೆ.
ಹೌದು ಧನುಶ್ರೀ ಅವರು ಈ ಬಾರಿ ಐಯ್ಯಂಗಾರಿ ಮನೆಯ ಸಾಂಪ್ರಾದಾಯದ ಮಧು ಮಗಳ ಹಾಗೆ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಐಯ್ಯಂಗಾರಿ ಮನೆಯ ಮಧು ಮಗಳಾಗಿ ಬಹಳ ಅಂದದ ವಸ್ತ್ರ ಹಾಗೂ ಆಭರಣಗಳ ಗಮ್ಮತ್ತಿನಲ್ಲಿರುವ ಬಹಳ ಸುಂದರವಾದ ಫೋಟೋಗಳನ್ನು ಧನುಶ್ರೀ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮನಸ್ಸಿಗೆ ಮುದ ನೀಡಿದೆ.
ರೇಷ್ಮೆ ಸೀರೆ, ಅದಕ್ಕೆ ಒಪ್ಪುವಂತಹ ಮೇಕಪ್ ಹಾಗೂ ಆಭರಣಗಳಲ್ಲಿ ಧನುಶ್ರೀ ಕ್ಲಾಸಿ ಲುಕ್ ನಲ್ಲಿ, ಬಹಳ ಮುದ್ದಾಗಿ, ಅಂದವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಧನುಶ್ರೀ ಅವರ ಇನ್ಸ್ಟಾಗ್ರಾಂ ಖಾತೆಯನ್ನು ನೋಡಿದಾಗ ಇತ್ತೀಚಿಗೆ ಅವರ ಭಿನ್ನ ವಿಭಿನ್ನ ಲುಕ್ ಗಳ ಫೋಟೋ ಶೂಟ್ ಗಳನ್ನು ಮಾಡಿಸಿರುವುದನ್ನು ನಾವು ಗಮನಿಸಬಹುದಾಗಿದೆ.
ಧನುಶ್ರೀ ಟಿಕ್ ಟಾಕ್ ವೀಡಿಯೋಗಳ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದ ಸೆಲೆಬ್ರಿಟಿ ಆಗಿದ್ದಾರೆ. ಟಿಕ್ ಟಾಕ್ ಬ್ಯಾನ್ ನ ನಂತರವೂ ಸೋಶಿಯಲ್ ಮೀಡಿಯಾಗಳ ಅನ್ಯ ಪ್ಲಾಟ್ ಫಾರಂ ಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಅಲ್ಲದೇ ಬಿಗ್ ಬಾಸ್ ನಂತರ ಸ್ಯಾಂಡಲ್ವುಡ್ ಗೆ ಸಹಾ ಅಡಿಯಿರಿಸಿದ್ದಾರೆ ಈ ಮೋಹಕ ಬೆಡಗಿ.