ಮತ್ತೊಮ್ಮೆ ಸದ್ದು ಮಾಡಿದ ಕಚ್ಚಾ ಬಾದಾಮ್: ಮಹಿಳೆಯ ಹಾಡಿಗೆ ಹರಿದು ಬಂತು ಲಕ್ಷ ಲಕ್ಷ ವೀಕ್ಷಣೆ

Entertainment Featured-Articles News Viral Video

ಕಚ್ಚಾ ಬಾದಾಮ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಎಬ್ಬಿಸಿದ ಬಿರುಗಾಳಿ ಇನ್ನೂ ನಿಂತಿಲ್ಲ. ಇನ್ನೂ ಅನೇಕರು ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕುತ್ತಾ ವೀಡಿಯೋಗಳನ್ನು ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ಈ ಹಾಡನ್ನು ಹಾಡಿದ ಭುಬನ್ ಬಡ್ಯಾಕರ್ ಅವರು ಕೂಡಾ ರಾತ್ರೋರಾತ್ರಿ ಜನಪ್ರಿಯತೆಯನ್ನು ಪಡೆದುಕೊಂಡರು, ಎಲ್ಲೆಲ್ಲೂ ಸುದ್ದಿಯಾದ ಭುಬನ್ ಇದ್ದಕ್ಕಿದ್ದ ಹಾಗೆ ಸೆಲೆಬ್ರಿಟಿ ಆಗಿ ಬಿಟ್ಟರು. ಭುಬನ್ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಸಹಾ ಆಗಿವೆ. ಈಗ ಮತ್ತೊಮ್ಮೆ ಕಚ್ಚಾ ಬಾದಾಮ್ ಹಾಡು ಸದ್ದು ಮಾಡಿದೆ.

ಹೌದು, ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ನಿಂತು ಕಚ್ಚಾ ಬಾದಾಮ್ ಹಾಡಿಗೆ ಡಾನ್ಸ್ ಮಾಡಿದ್ದು, ಮಹಿಳೆಯು ಹಾಕಿರುವ ಸ್ಟೆಪ್ ಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದ ಮೆಚ್ಚುಗೆಗಳು ಹರಿದು ಬರುತ್ತಿದೆ. ಮಹಿಳೆಯ ಈ ಡಾನ್ಸ್ ವೀಡಿಯೋಗೆ ಬರೋಬ್ಬರಿ 8 ಮಿಲಿಯನ್ ವೀಕ್ಷಣೆಗಳು ಹರಿದು ಬಂದಿವೆ. ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿರುವ ಮಹಿಳೆಯನ್ನು ಯೋಗ ಶಿಕ್ಷಕಿ ಭಾರತಿ ಹೆಗ್ಗಡೆ ಎನ್ನಲಾಗಿದೆ.

ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ ಭಾರತಿ ಹೆಗ್ಗಡೆ ಅವರು ಕಚ್ಚಾ ಬದಾಮ್ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಅವರು ಜನವರಿಯಲ್ಲಿ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು ಈ ವರೆಗೆ ಎಂಟು ಮಿಲಿಯನ್ ಮೀರಿದ ವೀಕ್ಷಣೆಗಳು ಹರಿದು ಬಂದಿವೆ.‌ ನೆಟ್ಟಿಗರಿಗೆ ಭಾರತಿ ಅವರು ಹಾಕಿದ ಹೆಜ್ಜೆಗಳು ಸಿಕ್ಕಾಪಟ್ಟೆ ಇಷ್ಟವಾಗಿದೆ ಎನ್ನುವುದಕ್ಕೆ ಈ ವೀಡಿಯೋಗೆ ಹರಿದು ಬಂದಿರುವ ವೀಕ್ಷಣೆಗಳು ಹಾಗೂ ಲೈಕ್ ಗಳು ಸಾಕ್ಷಿಯಾಗಿವೆ. ಅನೇಕರು ಕಾಮೆಂಟ್ ಸಹಾ ಮಾಡಿ ಮೆಚ್ಚುಗೆಗಳನ್ನು ನೀಡಿದ್ದಾರೆ.

ಕಚ್ಚಾ ಬದಾಮ್ ಗೆ ಈಗಾಗಲೇ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರ ವರೆಗೆ ನೂರಾರು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ಈಗ ಭಾರತಿ ಅವರ ವೀಡಿಯೋ ಕೂಡಾ ಆ ಸಾಲಿನಲ್ಲಿ ಭರ್ಜರಿ ಯಶಸ್ಸನ್ನು ಪಡೆದುಕೊಂಡಿದೆ. ಇನ್ನು ಹಾಡು ಹಾಡಿದ ಭುಬನ್ ಬಡ್ಯಾಕರ್ ಸೆನ್ಸೇಷನ್ ಆಗಿದ್ದು ಮಾತ್ರವೇ ಅಲ್ಲದೇ ಅವರು ಆಡಿದ ಕೆಲವು ಮಾತುಗಳು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಅನಂತರ ಭುಬನ್ ಕ್ಷಮೆ ಯಾಚಿಸಿದ್ದರು.

Leave a Reply

Your email address will not be published.