ಮತ್ತೊಮ್ಮೆ ಮಹಿಳಾ ಸ್ಪರ್ಧಿಯ ಕೈ ಸೇರಿದ ಬಿಗ್ ಬಾಸ್ ಟ್ರೋಫಿ: ಜನರ ನಿರೀಕ್ಷೆಗಳನ್ನು ಮೀರಿ ಗೆದ್ದ ಸ್ಪರ್ಧಿ!!

Written by Soma Shekar

Updated on:

---Join Our Channel---

ಹಿಂದಿ ಬಿಗ್ ಬಾಸ್ ಸೀಸನ್ 15 ಭರ್ಜರಿಯಾಗಿ ಮುಗಿದಿದೆ. ಗ್ರಾಂಡ್ ಫಿನಾಲೆ ಬಹಳ ಅದ್ದೂರಿಯಾಗಿ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವೆಂದರೆ ಈ ಬಾರಿ ಗ್ರಾಂಡ್ ಫಿನಾಲೆಗೆ ಹಿಂದಿನ ಕೆಲವು ಸೀಸನ್ ಗಳ ವಿಜೇತರನ್ನು ಅತಿಥಿಗಳನ್ನಾಗಿ ಆಹ್ವಾನ ನೀಡಲಾಗಿತ್ತು. ಇನ್ನು ಈ ಬಾರಿ ಮತ್ತೊಮ್ಮೆ ಹಿಂದಿ ಬಿಗ್ ಬಾಸ್ ನ ಟ್ರೋಫಿ ಮಹಿಳಾ ಸ್ಪರ್ಧಿಯೊಬ್ಬರಿಗೆ ಒಲಿದಿದೆ. ವಿಶೇಷ ಏನೆಂದರೆ ಈ ಸ್ಪರ್ಧಿ ಕಲರ್ಸ್ ವಾಹಿನಿಯ ಮುಖವೇ ಆಗಿದ್ದಾರೆ. ಹೌದು ಈ ಬಾರಿ ಬಿಗ್ ಬಾಸ್ ಹದಿನೈದರ ವಿನ್ನರ್ ಆಗಿ ಕಿರುತೆರೆಯ ಜನಪ್ರಿಯ ನಟಿ ತೇಜಸ್ವಿ ಪ್ರಕಾಶ್ ಹೊರಹೊಮ್ಮಿದ್ದು ಟ್ರೋಫೀ ತನ್ನದಾಗಿಸಿಕೊಂಡಿದ್ದಾರೆ.

ಈ ಬಾರಿ ತೇಜಸ್ವಿ ಆರಂಭದಿಂದಲೇ ಎಲ್ಲರ ಗಮನ ಸೆಳೆದಿದ್ದರು, ಮನೆಯಲ್ಲಿ ಶಮಿತಾ ಜೊತೆಗಿನ ವಿರಸ, ಮತ್ತೋರ್ವ ಸ್ಪರ್ಧಿ ಕರನ್ ಕುಂದ್ರಾ ಜೊತೆಗಿನ ಲವ್ ಟ್ರ್ಯಾಕ್, ತಾನು ತಪ್ಪು ಮಾಡಿದಾಗಲೂ ಸಮರ್ಥನೆ ಮಾಡಿಕೊಂಡು ಪ್ರತಿಸ್ಪರ್ಧಿಗಳ ಬಾಯಿಗೆ ಬೀಗ ಹಾಕುವ ಸಾಮರ್ಥ್ಯ ಹೀಗೆ ಹಲವು ವಿಷಯಗಳಿಂದ ತೇಜಸ್ವಿ ಮನೆಯ ಪ್ರಮುಖ ಸ್ಪರ್ಧಿಯಾಗಿಯೇ ಗುರುತಿಸಿಕೊಂಡಿದ್ದರು. ಖಚಿತವಾಗಿ ತೇಜಸ್ವಿ ಫೈನಲ್ ಪ್ರವೇಶ ಮಾಡುವರು ಎಂದು ಬಿಗ್ ಬಾಸ್ ನ ಆರಂಭದಿಂದಲೇ ತೇಜಸ್ವಿ ಸಾಬೀತು ಮಾಡಿಕೊಂಡು ಬಂದಿದ್ದರು.

ಈ ಬಾರಿ ಗ್ರಾಂಡ್ ಫಿನಾಲೆಗೆ ತೇಜಸ್ವಿ ಪ್ರಕಾಶ್, ಶಮಿತಾ ಶೆಟ್ಟಿ, ಕರನ್ ಕುಂದ್ರಾ, ಪ್ರತೀಕ್ ಸಹಜ್ಪಾಲ್ ಹಾಗೂ ನಿಶಾಂತ್ ಭಟ್ ಟಾಪ್ ಐದರಲ್ಲಿ ಇದ್ದರು. ಹೀಗೆ ಟಾಪ್ ಫೈವ್ ನಲ್ಲಿ ಸ್ಥಾನವನ್ನು ಪಡೆದವರಿಗೆ ಹತ್ತು ಲಕ್ಷ ಬಹುಮಾನ ಮೊತ್ತ ನೀಡಿ, ಸ್ಪರ್ಧೆಯಿಂದ ಹೊರಗುಳಿಯುವ ಆಫರ್ ನೀಡಲಾಯಿತು. ಆಗ ನಿಶಾಂತ್ ಭಟ್ ಅದನ್ನು ಒಪ್ಪಿ ಸ್ಪರ್ಧೆಯಿಂದ ಹೊರಗೆ ಉಳಿದರು. ಹತ್ತು ಲಕ್ಷ ಬಹುಮಾನ ಪಡೆದು ಮನೆಯಿಂದ ಬಹಳ ಖುಷಿಯಿಂದಲೇ ಹೊರಗೆ ಬಂದರು.

ಇದಾದ ನಂತರ ಗೆಹರಾಯಿ ಚಿತ್ರ ತಂಡ, ದೀಪಿಕಾ ಪಡುಕೋಣೆ, ಅನನ್ಯ ಪಾಂಡೆ, ಸಿದ್ಧಾರ್ಥ್, ಧೈರ್ಯ ಮನೆಯೊಳಗೆ ಹೋಗಿ, ಟಾಪ್ ತ್ರಿ ಆಯ್ಕೆ ಮಾಡಿದರು. ಶಮಿತಾ ಶೆಟ್ಟಿ ಟಾಪ್ ತ್ರೀ ಸ್ಪರ್ಧೆಯಿಂದ ಹೊರಗೆ ಉಳಿದು ಮನೆಯಿಂದ ಹೊರಗೆ ಬಂದರು. ಇನ್ನು ಟಾಪ್ ತ್ರಿ ಯಲ್ಲಿ ಕರನ್ ಕುಂದ್ರಾ ರೇಸ್ ನಿಂದ ಹೊರಗೆ ಬಂದರು. ತೇಜಸ್ವಿ ಪ್ರಕಾಶ್ ಮತ್ತು ಪ್ರತೀಕ್ ಟಾಪ್ ಟು ಆಗಿ ಉಳಿದರು. ಬಹುತೇಕ ಎಲ್ಲರೂ ಸಹಾ ಪ್ರತೀಕ್ ಈ ಬಾರಿ ವಿನ್ನರ್ ಆಗುವರು ಎಂದು ಊಹಿಸಿದ್ದರು.

ಆದರೆ ಎಲ್ಲರ ನಿರೀಕ್ಷೆಗಳು ಉಲ್ಟಾ ಹೊಡೆದು, ನಟಿ ತೇಜಸ್ವಿ ಪ್ರಕಾಶ್ ವಿನ್ನರ್ ಎಂದು ನಿರೂಪಕ ಸಲ್ಮಾನ್ ಖಾನ್ ಘೋಷಣೆ ಮಾಡಿದರು. ಇನ್ನು ತೇಜಸ್ವಿ ಪ್ರಕಾಶ್ ಈ ಬಾರಿ ಹಿಂದಿ ಕಿರುತೆರೆಯ ಸೂಪರ್ ಹಿಟ್ ನಾಗಿನ್ ( ನಾಗಿಣಿ ) ಸೀಸನ್ 6 ರಲ್ಲಿ ನಾಗಿಣಿಯಾಗಿ ಬರಲಿದ್ದಾರೆ ಎಂದು ನಾಗಿಣಿ ಪಾತ್ರದ ಪ್ರೋಮೋ ಕೂಡಾ ನಿನ್ನೆ ಬಿಗ್ ಬಾಸ್ ನಲ್ಲೇ ಬಹಿರಂಗ ಪಡಿಸಲಾಯಿತು. ಒಟ್ಟಾರೆ ತೇಜಸ್ವಿ ಪ್ರಕಾಶ್ ಗೆ ಡಬಲ್ ಧಮಾಕ ಎನ್ನುವ ಅದೃಷ್ಟ ಒಲಿದಿದೆ. ತೇಜಸ್ವಿ ಟ್ರೋಫಿ ಹಿಡಿದು ಸಂಭ್ರಮಿಸಿದ್ದಾರೆ.

ಹಿಂದಿಯಲ್ಲಿ ಮಹಿಳಾ ಸ್ಪರ್ಧಿಗಳು ಬಿಗ್ ಬಾಸ್ ಗೆದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಶ್ವೇತಾ ತಿವಾರಿ, ಊರ್ವಶಿ ಡೋಲಕಿಯಾ, ಗೊಹರ್ ಖಾನ್, ರುಬೀನಾ ದಿಲೈಕ್ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ. ಸೀಸನ್ ಹದಿನಾಲ್ಕರಲ್ಲಿ ಕಲರ್ಸ್ ಫೇಸ್ ರುಬೀನಾ ದಿಲೈಕ್ ಟ್ರೋಫಿ ಗೆದ್ದಿದ್ದರು. ಈಗ ಹದಿನೈದು ಮತ್ತೊಮ್ಮೆ ಮಹಿಳಾ ಸ್ಪರ್ಧಿಯ ಕೈ ಹಿಡಿದಿರುವುದು ವಿಶೇಷವಾಗಿದೆ. ಅಂತೂ ಬಿಗ್ ಬಾಸ್ ಸೀಸನ್ 15 ಯಶಸ್ವಿಯಾಗಿ ತನ್ನ ಜರ್ನಿ ಮುಗಿಸಿದೆ.

Leave a Comment