ಮತ್ತೊಮ್ಮೆ ನಟ ಪ್ರಕಾಶ್ ರಾಜ್ ಮದುವೆ: ಇದೆಲ್ಲಾ ಮಗನಿಗಾಗಿ ಎಂದ ನಟ

Written by Soma Shekar

Published on:

---Join Our Channel---

ಬಹುಭಾಷಾ ನಟ ಪ್ರಕಾಶ್ ರಾಜ್ ದಕ್ಷಿಣದ ಸಿನಿ ಪ್ರೇಮಿಗಳಿಗೆ ಚಿರಪರಿಚಿತ, ಅದರಲ್ಲೂ ಕನ್ನಡದ ಸಿನಿ ರಸಿಕರಿಗೆ ಪ್ರಕಾಶ್ ರೈ ಅವರ ಪರಿಚಯದ ಅಗತ್ಯವೇ ಇಲ್ಲ ಎನ್ನಬಹುದು. ಈ ನಟ ಇದೀಗ ಮತ್ತೊಮ್ಮೆ ಮದುವೆಯಾಗಿದ್ದಾರೆ. ಈ ಮಾತು ಕೇಳಿ ಇದೇನಿದು? ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ಮದುವೆಯಾದರೆ?? ಎಂದು ಆಶ್ಚರ್ಯ ಪಡಬೇಡಿ. ಏಕೆಂದರೆ ನಟ ಪ್ರಕಾಶ್ ರಾಜ್ ಅವರು ಈಗ ಮತ್ತೊಮ್ಮೆ ತಮ್ಮ ಪತ್ನಿಯನ್ನೇ ವಿವಾಹ ಮಾಡಿಕೊಂಡಿದ್ದಾರೆ. ಈಗ ಮತ್ತೊಮ್ಮೆ ಮದುವೆಯಾಗುವ ಅವಶ್ಯಕತೆ ಏನಿತ್ತು ಎನ್ನುವುದಾದರೆ ಎಲ್ಲಾ ತಮ್ಮ ಮಗ ವೇದಾಂತ್ ನ ಆಸೆಯನ್ನು ಪೂರೈಸುವುದಕ್ಕಾಗಿ ಎಂದು ನಟ ಪ್ರಕಾಶ್ ರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು, ಖುಷಿಯನ್ನು ಹಂಚಿಕೊಂಡಿದ್ದಾರೆ.

ಹೌದು, ‌ನಿನ್ನೆ ನಟ ಪ್ರಕಾಶ್ ರಾಜ್ ಅವರು ತಮ್ಮ ಪತ್ನಿ ಪೋನಿ ವರ್ಮಾ ಜೊತೆಗೆ ತಮ್ಮ 11 ನೆಯ ಮದುವೆ ವಾರ್ಷಿಕೋತ್ಸವದ ಆಚರಿಸಿಕೊಂಡಿದ್ದಾರೆ. ಈ ವೇಳೆ ಪ್ರಕಾಶ್ ರಾಜ್ ಅವರ ಮಗ ವೇದಾಂತ್ ತನಗೆ ತಂದೆ ತಾಯಿಯ ಮದುವೆಯನ್ನು ನೋಡಬೇಕು ಎನ್ನುವ ಆಸೆ ಯ ಒಂದನ್ನು ಅವರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದ್ದು, ಮಗನ ಈ ಆಸೆಯನ್ನು ಪ್ರಕಾಶ್ ರಾಜ್ ಹಾಗೂ ಅವರ ಪತ್ನಿ ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದು ಪೂರೈಸಿದ್ದಾರೆ. ನಟ ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿ ಫೋಟೋಗಳನ್ನು ಹಂಚಿಕೊಂಡಿದ್ದು, ತಮ್ಮ ಸಂತಸವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

ಪ್ರಕಾಶ್ ರಾಜ್ ಅವರು ತಮ್ಮ ಪೋಸ್ಟ್ ನಲ್ಲಿ, ನಾವಿಂದು ಮತ್ತೊಮ್ಮೆ ಮದುವೆ ಮಾಡಿಕೊಂಡಿದ್ದೇವೆ. ಏಕೆಂದರೆ ನಮ್ಮ ಮಗ ವೇದಾಂತ್ ನಮ್ಮ ಮದುವೆಯನ್ನು ನೋಡಬೇಕೆಂದು ಬಹಳ ಇಷ್ಟ ಪಟ್ಟಿದ್ದ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳು ಎಂದು ಅವರು ಬರೆದುಕೊಂಡಿದ್ದಾರೆ. ಇನ್ನು ಈ ಸಂತಸದ ಆಚರಣೆಯಲ್ಲಿ ಪ್ರಕಾಶ್ ರಾಜ್ ಅವರ ಮೊದಲನೇ ಪತ್ನಿಯ ಮಕ್ಕಳಾದ ಪೂಜಾ ಹಾಗೂ ಮೇಘನಾ ಅವರು ಕೂಡಾ ‌ಭಾಗಿಯಾಗಿರುವುದನ್ನು ಫೋಟೋಗಳಲ್ಲಿ ನಾವು ಗಮನಿಸಬಹುದಾಗಿದೆ. ತಮ್ಮ ಮೂವರು ಮಕ್ಕಳ ಮುಂದೆ ಮತ್ತೊಮ್ಮೆ ಮದುವೆಯಾಗಿ ಅವರಿಗೆ ಖುಷಿ ನೀಡಿದ್ದಾರೆ.

Leave a Comment