ಮತ್ತೊಮ್ಮೆ ದೊಡ್ಡತನ ಮೆರೆದ ದೊಡ್ಮನೆ ಸೊಸೆ: ಪುನೀತ್ ಅವರ ಪತ್ನಿ ನಿರ್ಮಾಪಕನ ಪರ ಮಾಡಿರೋ ಕೆಲಸ ನೋಡಿ

Written by Soma Shekar

Published on:

---Join Our Channel---

ಕನ್ನಡ ಸಿನಿಮಾರಂಗದ ಪವರ್ ಸ್ಟಾರ್ ಎಂದರೆ ಅದು ಒಬ್ಬರೇ ಪುನೀತ್ ರಾಜ್‍ಕುಮಾರ್ ಅನ್ನೋದ್ರಲ್ಲಿ ಖಂಡಿತ ಎರಡು ಮಾತಿಲ್ಲ. ಅವರು ನಮ್ಮೊಡನೆ ಇರಲಿ, ನಮ್ಮ‌‌ ಸ್ಮರಣೆಗಳಲ್ಲಿಯೇ ಇರಲಿ ಅವರ ಸ್ಥಾನ ಮಾತ್ರ ಬದಲಾಗುವುದಿಲ್ಲ. ಇಂತಹ ಸ್ಟಾರ್ ನಟನ ಜೊತೆಗೆ ಯಾವ ಕಲಾವಿದರು, ನಿರ್ಮಾಪಕರು,‌ ನಿರ್ದೇಶಕರು ತಾನೇ ಸಿನಿಮಾ ಮಾಡೋಕೆ ಇಷ್ಟ ಪಡೋದಿಲ್ಲ ಹೇಳಿ?? ಅದಕ್ಕೆ ಪುನೀತ್ ಅವರು ಒಂದರ ನಂತರ ಮತ್ತೊಂದು ಅನ್ನೋ ಹಾಗೆ ಸಿನಿಮಾಗಳಲ್ಲಿ ತೊಡಗಿಕೊಂಡಿರುತ್ತಿದ್ದರು. ಆದರೆ ಅವರ ಅನಿರೀಕ್ಷಿತ ನಿಧನ ನೋವಿನ ಛಾಯೆ ಉಳಿಸಿ ಹೋಗಿದೆ.

ಅಪ್ಪು ಅವರು ಹೊಸ ಸಿನಿಮಾ ಪ್ರಾಜೆಕ್ಟ್ ಗಳನ್ನು ಮಾಡೋದಿಕ್ಕೆ ಸಜ್ಜಾಗಿದ್ದರು. ಹೊಸ ಸಿನಿಮಾಗಳಲ್ಲಿ ಕೆಲವು ಮುಗಿದರೆ, ಇನ್ನೂ ಕೆಲವು ಈಗ ನಿಂತು ಹೋಗಿದೆ. ಏಕೆಂದರೆ ಅಪ್ಪು ಅವರಿಗಾಗಿ ಮಾಡಬೇಕಿದ್ದ ಸಿನಿಮಾಗಳಲ್ಲಿ ಬೇರೆಯವರನ್ನು ಊಹಿಸಿಕೊಳ್ಳೋಕೆ ಕಷ್ಟ ಆಗಬಹುದು. ಪುನೀತ್ ಅವರ ಜೇಮ್ಸ್ ಸಿನಿಮಾ ಮುಗಿದಿತ್ತು. ಅವರು ಹೊಸ ಪ್ರಾಜೆಕ್ಟ್ ಗಳನ್ನು ಒಪ್ಪಿದ್ದರು, ಬರುವ ವರ್ಷ ಕೆಲವು ಆರಂಭ ಆಗೋದ್ರಲ್ಲಿತ್ತು ಆದರೆ ವಿಧಿ ಆಟ ಬೇರೇನೇ ಆಗಿ ಹೋಯ್ತು.

ಪುನೀತ್ ಅವರು ಕನ್ನಡ ಸಿನಿ ರಂಗದ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಜೊತೆ ಹೊಸ ಸಿನಿಮಾ ಮಾಡೋದಾಗಿ ಮಾತುಕತೆ ನಡೆಸಿದ್ರು ಎನ್ನಲಾಗಿದ್ದು, ಆ ಸಿನಿಮಾ ವಿಚಾರವಾಗಿ ಅವರು ದೊಡ್ಡ ಮೊತ್ತವನ್ನೇ ಅಡ್ವಾನ್ಸ್ ಆಗಿ ಪಡೆದಿದ್ದರು ಎನ್ನಲಾಗಿದೆ. ಆದ್ರೆ ಅಪ್ಪು ಅವರ ಅಗಲಿಕೆ ಕಾರಣ ಈಗ ಈ ಹೊಸ ಪ್ರಾಜೆಕ್ಟ್ ಗೂ ಬ್ರೇಕ್ ಬಿದ್ದಿದೆ. ಆದರೆ ಪುನೀತ್ ಅವರ ಪತ್ನಿ ಅಶ್ವಿನಿ ಅವರು ಈಗ ಮಾಡಿರೋ ಕೆಲಸ ಮಾತ್ರ ಭಾರೀ ಮೆಚ್ಚುಗೆ ಪಡೆದಿದೆ.

ಹೌದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಅಪ್ಪು ಅವರು ಸಿನಿಮಾ ಆರಂಭ ಆಗೋ ಮೊದಲೇ ನಮ್ಮನ್ನು ಅಗಲಿರುವ ಕಾರಣ ನಮ್ಮಿಂದ ಯಾರಿಗೂ ತೊಂದರೆ ಆಗಬಾರದು ಎಂದು ಉಮಾಪತಿ ಶ್ರೀನಿವಾಸ್ ಅವರಿಗೆ ಅಪ್ಪು ಅವರು ಅಡ್ವಾನ್ಸ್ ಆಗಿ ಪಡೆದ ದೊಡ್ಡ ಮೊತ್ತವನ್ನು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದು, ದೊಡ್ಮನೆ ಯಾವತ್ತಿದ್ರೂ‌ ದೊಡ್ಮನೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಇದೇ ವಿಷಯವಾಗಿ ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು ಸಹಾ ತಮ್ಮ‌ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿ ಘಟನೆಯ ವಿವರವನ್ನು ನೀಡಿದ್ದು ಅವರು ಹೇಳಿರುವ ಪ್ರಕಾರ ಅಶ್ವಿನಿ ಅವರು ಸುಮಾರು ಎರಡೂವರೆ ಕೋಟಿ ರೂಪಾಯಿಗಳ ಅಡ್ವಾನ್ಸ್ ಹಣವನ್ನು ಹಿಂತಿರುಗಿಸಿದ್ದಾರೆ. ಅವರ ಈ ಕಾರ್ಯಕ್ಕೆ ಮೆಚ್ಚುಗೆಗಳು ಹರಿದು ಬರುತ್ತಿದೆ.

Leave a Comment