ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲು ಸಜ್ಜಾದ ಕ್ರೇಜಿಸ್ಟಾರ್ ರವಿಚಂದ್ರನ್: ಯಾವ ಶೋಗೆ ಬರ್ತಿದ್ದಾರೆ ಈ ಕನಸುಗಾರ??

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗದ ಕನಸುಗಾರ ಎಂದೇ ಹೆಸರಾದವರು ಕ್ರೇಜಿಸ್ಟಾರ್ ರವಿಚಂದ್ರನ್. ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕನಾಗಿಯೂ ಸಹಾ ತನ್ನದೇ ಆದ ಛಾಪನ್ನು ಮೂಡಿಸಿರುವ ರವಿಚಂದ್ರನ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ವಿಶೇಷವಾದ ಗೌರವವಿದೆ. ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಅದೊಂದು ಕನಸಿನ ಲೋಕದ ಅನಾವರಣ, ಅವರ ಸಿನಿಮಾದ ಹಾಡುಗಳು ಎಂದರೆ ಕಣ್ಣಿಗೂ, ಕಿವಿ ಗಳಿಗೂ ಕೂಡಾ ಹಬ್ಬ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗದಲ್ಲಿ ಅದ್ದೂರಿತನಕ್ಕೆ ಅವರ ಸಿನಿಮಾಗಳು ಹೆಸರಾಗಿದ್ದವು.

ರವಿಚಂದ್ರನ್ ಅವರ ವೃತ್ತಿ ಜೀವನದಲ್ಲಿ ಅವರು ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಆದರೆ ಚಿತ್ರ ರಸಿಕರು ಮರೆಯಲಾಗದಂತಹ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿ, ನಟಿಸಿ ಜನರ ಮನಸ್ಸಿನಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾಗಳು ಎಂದರೆ ಒಂದು ಬ್ರಾಂಡ್, ವೈಭವದ ಖಜಾನೆ ಎಂದೆಲ್ಲಾ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ. ನಟ ರವಿಚಂದ್ರನ್ ಅವರು ಹಿರಿತೆರೆಯಲ್ಲಿ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ಕೂಡಾ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ರವಿಚಂದ್ರನ್ ಅವರು 2019 ರಲ್ಲಿ ಕನ್ನಡ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸ್ ರಿಯಾಲಿಟಿ ಶೋ ತಕದಿಮಿತಾ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಆ ಕಾರ್ಯಕ್ರಮದ ಮೂಲಕ ರವಿಚಂದ್ರನ್ ಅವರು ತಮ್ಮ ಕಿರುತೆರೆಯ ಪಯಣವನ್ನು ಭರ್ಜರಿಯಾಗಿ ಆರಂಭಿಸಿ, ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದರು. ಅದಾದ ನಂತರ ಅವರು ಬೇರೆ ಯಾವುದೇ ಹೊಸ ಶೋ ನಲ್ಲಿ ಕಾಣಿಸಿರಲಿಲ್ಲ.

ಆದರೆ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತೊಮ್ಮೆ ಇನ್ನೊಂದು ಜನಪ್ರಿಯ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿರುವ ವಿಷಯವೊಂದು ಸುದ್ದಿಯಾಗಿದೆ. ಹೌದು ಕಿರುತೆರೆಯ ಸುಪ್ರಸಿದ್ಧ ಶೋ ಡ್ರಾಮಾ ಜೂನಿಯರ್ಸ್ ನ ಹೊಸ ಆವೃತ್ತಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಜಡ್ಜ್ ಆಗಿ ಶೋನ ಒಂದು ಪ್ರಮುಖ ಭಾಗವಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲವಾದರೂ, ಬಹುತೇಕ ಇದು ಖಚಿತ ಎನ್ನಲಾಗಿದೆ.

ಹೌದು, ಖಾಸಗಿ ವಾಹಿನಿಯು ತನ್ನ ಈ ಸೂಪರ್ ಹಿಟ್ ಶೋ ನ ಪ್ರೋಮೋಗಳನ್ನು ವಾಹಿನಿ ಮತ್ತು ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದು, ಅವು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಶೋ ಗೆ ಆಗಮಿಸಲಿದ್ದಾರೆ ಎನ್ನುವ ಸುಳಿವನ್ನು ಖಂಡಿತ ನೀಡಿದೆ. ಶೀಘ್ರದಲ್ಲೇ ಕಿರುತೆರೆಯಲ್ಲಿ ಡ್ರಾಮಾ ಜೂನಿಯರ್ಸ್ ನಾಲ್ಕನೇ ಸೀಸನ್ ಆರಂಭವಾಗಲಿದ್ದು, ಮತ್ತೊಮ್ಮೆ ಬಾಲ ಪ್ರತಿಭೆಗಳು ತಮ್ಮ ಅನನ್ಯ ಪ್ರತಿಭೆಯ ಅನಾವರಣ ಮಾಡಲು ವೇದಿಕೆ ಸಜ್ಜಾಗಿದೆ.

Leave a Comment