ಮತ್ತೊಬ್ಬ ಸ್ಟಾರ್ ನಟನ ಪುತ್ರ ಸಿನಿಮಾ ರಂಗಕ್ಕೆ ಎಂಟ್ರಿ: ಶುರುವಾಗಿದೆ ಸಿದ್ಧತೆಗಳು, ಅಭಿಮಾನಿಗಳು ಫುಲ್ ಖುಷ್ !!

0 3

ಸಿನಿಮಾ ಎನ್ನುವ ಬಣ್ಣದ ಲೋಕದಲ್ಲಿ ಮಿಂಚಿದರೆ,‌ ಅದೃಷ್ಟ ಒಲಿದು ಬಂದರೆ ಅಂತಹ ಕಲಾವಿದರು ದೊಡ್ಡ ಜನಪ್ರಿಯತೆ ಜೊತೆಗೆ, ಅಪಾರ ಅಭಿಮಾನಿಗಳನ್ನು ಪಡೆದು ಸ್ಟಾರ್ ನಟರಾಗಿ ಬಿಡುತ್ತಾರೆ. ಆದರೆ ಈ ಹಂತವನ್ನು ತಲುಪುವುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಖಂಡಿತ ಕಠಿಣವಾದ ಕೆಲಸವಾಗಿದೆ‌. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ, ಗಾಡ್ ಫಾದರ್ ಗಳಿಲ್ಲದೇ ಸಿನಿಮಾ ರಂಗದಲ್ಲಿ ಹೆಸರನ್ನು ಮಾಡಿರುವವರು ಇಂದೂ ಚಿತ್ರರಂಗದಲ್ಲಿ ಇದ್ದಾರೆ. ಆದರೆ ಅದು ಬೆರಳೆಣಿಕೆಯಷ್ಟು ಮಾತ್ರ ಎನ್ನುವುದು ಸಹಾ ಸತ್ಯವಾದ ವಿಚಾರವೇ ಆಗಿದೆ.

ನಟ, ನಟಿಯರ ಮಕ್ಕಳಿಗೆ ಚಿತ್ರರಂಗಕ್ಕೆ ಎಂಟ್ರಿ ನೀಡುವುದು ಕಷ್ಟದ ಕೆಲಸ ಖಂಡಿತ ಅಲ್ಲ. ಅದರಲ್ಲೂ ಜನಪ್ರಿಯ ಕಲಾವಿದರು, ಸ್ಟಾರ್ ನಟರ ಕುಡಿಯಳಾದರೆ ಅವರಿಗೆ ಅವಕಾಶಗಳು ಅವರನ್ನು ಅರಸಿ ಬರುತ್ತವೆ. ಹಾಗೆಂದ ಮಾತ್ರಕ್ಕೆ ಈ ಸ್ಟಾರ್ ಗಳ ವಾರಸುದಾರರೆಲ್ಲಾ ಪ್ರತಿಭೆ ಮೆರೆದು, ತಾವು ಸ್ಟಾರ್ ಗಳಾಗುತ್ತಾರೆ ಎಂದು ಹೇಳುವುದು ಅಸಾಧ್ಯವಾದ ಮಾತಾದರೂ, ಇವರಿಗೆ ಸಿನಿಮಾ ರಂಗಕ್ಕೆ ಎಂಟ್ರಿ ನೀಡುವುದು ಮಾತ್ರ ಕಷ್ಟವಾದ ಕೆಲಸವೇನು ಅಲ್ಲ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ವಿಷಯವಾಗಿದೆ.

ಹಲವು ಸ್ಟಾರ್ ನಟ, ನಟಿಯರ ಮಕ್ಕಳು ಬಾಲ ನಟರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಾರೆ. ಕೆಲವರು ಜನರ ಮನಸ್ಸನ್ನು ಗೆದ್ದರೆ, ಇನ್ನೂ ಕೆಲವರು ಅದರಲ್ಲಿ ಹಿಂದೆ ಬೀಳುತ್ತಾರೆ. ಪ್ರಸ್ತುತ ದಕ್ಷಿಣ ಸಿನಿಮಾ ರಂಗದಲ್ಲಿ ದೊಡ್ಡ ಜನಪ್ರಿಯತೆ ಹಾಗೂ ಹೆಸರನ್ನು ಪಡೆದಿರುವ ನಟ ವಿಜಯ್ ಸೇತುಪತಿ ಅವರ ಮಗ ಸಹಾ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾನೆ. ಹೌದು, ನಟ ವಿಜಯ್ ಸೇತುಪತಿ ಅವರ ಮಗಳು ಶ್ರೀಜಾ ಸೇತುಪತಿ ಈಗಾಗಲೇ ಮುಗಿಲ್ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ್ದಾರೆ.

ಈಗ ವಿಜಯ್ ಸೇತುಪತಿ ಅವರ ಮಗ ಸೂರ್ಯ ಸೇತಪತಿ ಸಿನಿಮಾ‌ ಎಂಟ್ರಿ ಗೆ ಕಾಲ ಕೂಡಿ ಬಂದಿದೆ ಎನ್ನಲಾಗಿದೆ‌. ಸೂರ್ಯ ಸೇತುಪತಿ ತಮಿಳಿನ ಸ್ಟಾರ್ ನಟ ವಿಜಯ್ ಅವರ ಬಹುನಿರೀಕ್ಷಿತ ಸಿ‌ನಿಮಾ ಬೀಸ್ಟ್ ಮೂಲಕ ಚಿತ್ರರಂಗಕ್ಕೆ ಅಡಿಯಿಡಿತ್ತಿದ್ದಾರೆ ಎನ್ನಲಾಗಿದ್ದು, ಈ ಸುದ್ದಿ ತಮಿಳು ಚಿತ್ರರಂಗದಲ್ಲೆಲ್ಲಾ ಸದ್ದು ಮಾಡಿದೆ. ಅಲ್ಲದೇ ಈ ಸುದ್ದಿ ಕೇಳಿ ವಿಜಯ್ ಸೇತುಪತಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ನಟನ ಮಗ ಮೊದಲ ಸಿನಿಮಾದಲ್ಲಿ ಪ್ರೇಕ್ಷಕರ ಮನಸ್ಸನ್ನು ಹೇಗೆ ಗೆಲ್ಲುತ್ತಾನೆ ಕಾದು ನೋಡಬೇಕಾಗಿದೆ.

Leave A Reply

Your email address will not be published.