ಮತ್ತೊಂದು ಹೊಸ ಟ್ವಿಸ್ಟ್ ಗೆ ಸಜ್ಜಾಗಿ ಎಂದು ಹೊಸ ಶಾಕ್ ನೀಡಿದೆ ಜೊತೆ ಜೊತೆಯಲಿ ಸೀರಿಯಲ್ ತಂಡ: ಏನಿದು ಹೊಸ ಟ್ವಿಸ್ಟ್ ಹಾಗಾದ್ರೆ?

Entertainment Featured-Articles Movies News

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸುದ್ದಿಯಾಗಿದೆ. ಸೀರಿಯಲ್ ನ ಪ್ರಮುಖ ಪಾತ್ರ, ನಾಯಕ ಆರ್ಯವರ್ಧನ್ ಪಾತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಆ ವಿಚಾರದಲ್ಲಿ ಎದ್ದಿರುವ ವಿ ವಾ ದಗಳು, ಆ ಪಾತ್ರಕ್ಕೆ ಹೊಸ ನಟನ ಆಗಮನ, ಹೀಗೆ ನಾನಾ ವಿಷಯಗಳ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡಿವೆ. ನಟ ಹರೀಶ್ ರಾಜ್ ಅವರೇ ಆರ್ಯವರ್ಧನ್ ಪಾತ್ರಕ್ಕೆ ಬರುತ್ತಾರೆ ಎನ್ನುವ ಸುದ್ದಿಗಳಾಗಿತ್ತು. ಆದರೆ ಕೊನೆಗೆ ಹರೀಶ್ ರಾಜ್ ಅವರು ಸೀರಿಯಲ್ ಗೆ ಎಂಟ್ರಿ ನೀಡಿದ್ದು ನಿಜ, ಆದರೆ ಆರ್ಯವರ್ಧನ್ ಪಾತ್ರಕ್ಕಾಗಿ ಅಲ್ಲ, ಬದಲಿಗೆ ಅವರ ಸಹೋದರ ವಿಶ್ವಾಸ್ ಪಾತ್ರಕ್ಕಾಗಿ ಎನ್ನುವುದು ಪ್ರೇಕ್ಷಕರಿಗೆ ಸೀರಿಯಲ್ ತಂಡ ನೀಡಿದ ಟ್ವಿಸ್ಟ್ ಆಗಿದೆ.

ಈಗ ಅದರ ಬೆನ್ನಲ್ಲೇ ಮತ್ತೊಂದು ಹೊಸ ಟ್ವಿಸ್ಟ್ ಮತ್ತು ಶಾಕ್ ನೀಡಿದೆ ಜೊತೆ ಜೊತೆಯಲಿ ಸೀರಿಯಲ್ ತಂಡ. ಧಾರಾವಾಹಿಯ ಹೊಸ ಪ್ರೊಮೋ ಒಂದು ಬಿಡುಗಡೆ ಆಗಿದೆ. ಇದರಲ್ಲಿ ಈ ಸೀರಿಯಲ್ ನ ಒಂದು ದೊಡ್ಡ ಟ್ವಿಸ್ಟ್ ನೀಡಲಿದೆಯಾ ? ಎನ್ನುವ ಅನುಮಾನವನ್ನು ಮೂಡಿಸಿದೆ. ಹೌದು, ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಪಾತ್ರವನ್ನು ಕಥೆಯಲ್ಲಿ ಇರುವಂತೆ ಆದರೆ ಪಾತ್ರದ ಅಸ್ತಿತ್ವ ಮುಂದೆ ಬರುವುದಿಲ್ಲ ಎಂದಿದ್ದ ನಿರ್ಮಾಪಕರು ಈಗ ಕಡೆಗೂ ಈ ಪಾತ್ರಕ್ಕೆ ಒಂದು ಮುಕ್ತಾಯವನ್ನು ನೀಡಲು ಸಜ್ಜಾಗಿದ್ದಾರೇನೋ ಎನ್ನುವ ಅನುಮಾನವನ್ನು ಮೂಡಿಸುತ್ತಿದೆ.

ಹೌದು, ಹೊಸ ಪ್ರೋಮೋದಲ್ಲಿ ಸ್ಪೀಡ್ ಆಗಿ ಹೋಗುತ್ತಿದ್ದ ಆರ್ಯವರ್ಧನ್ ಕಾರು ಲಾರಿಗೆ ಡಿಕ್ಕಿ ಹೊಡೆದು, ಪಲ್ಟಿ ಹೊಡೆಯುತ್ತಾ ಸಾಗಿದೆ. ಆದರೆ ಪ್ರೊಮೋ ಇಲ್ಲಿ ಮತ್ತೆ ಕೆಲವು ಪ್ರಶ್ನೆಗಳು ಮೂಡಿಸಿದೆ. ಇನ್ಮುಂದೆ ಆರ್ಯವರ್ಧನ್ ಸಾಮ್ರಾಜ್ಯದ ಒಡೆಯ ವಿಶ್ವಾಸ್ ಆಗ್ತಾನಾ? ಆರ್ಯವರ್ಧನ್ ನ ಅಫಘಾತ ಅನಿರೀಕ್ಷಿತವೋ ಅಥವಾ ಅದರ ಹಿಂದೆ ಕೂಡಾ ಯಾರದಾದ್ರೂ ಕೈವಾಡ ಇದೆಯಾ? ಹರೀಶ್ ರಾಜ್ ಪಾತ್ರವೇ ಈ ವಿಚಾರದ ಹಿಂದೆ ಇರುವ ಕಾಣದ ಕೈ ಆಗಿರಬಹುದಾ? ಅಥವಾ ಜೇಂಡೇ ಏನಾದರೂ ಮಾಡಿರಬಹುದಾ? ಹೀಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇನ್ನು ಸಾಮಾನ್ಯವಾಗಿ ಸೀರಿಯಲ್ ಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಬದಲಾವಣೆ ತರುವಾಗ ನಡೆಯುವ ತಂತ್ರಗಳಲ್ಲಿ ಒಂದು ಆ ಪಾತ್ರಕ್ಕೆ ಆ್ಯಕ್ಸಿಡೆಂಟ್ ಆಗುವುದು. ಅನಂತರ ಆ ಪಾತ್ರವು ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಖ ಬದಲಾವಣೆ ಆಗಿ ಒಂದು ಮಹತ್ವದ ಘಟ್ಟದಲ್ಲಿ ಮತ್ತೆ ಸೀರಿಯಲ್ ಗೆ ರೀ ಎಂಟ್ರಿ ನೀಡುವುದು, ಎಲ್ಲರಿಗೂ ಶಾ ಕ್ ನೀಡುವುದು ಇಂತಹುದ್ಧು ನಡೆಯುತ್ತದೆ. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಸಹಾ ಆರ್ಯವರ್ಧನ್ ಪಾತ್ರವು ಹಾಗೇ ಬೇರೊಬ್ಬ ನಟ ಮುಖದಲ್ಲಿ ಸ್ವಲ್ಪ ವಿರಾಮದ ನಂತರ ರೀ ಎಂಟ್ರಿ ನೀಡುತ್ತಾ? ಎಲ್ಲವೂ ಸದ್ಯಕ್ಕಂತೂ ದೊಡ್ಡ ಸಸ್ಪೆನ್ಸ್ ಕ್ರಿಯೇಟ್ ಮಾಡಿದೆ.

Leave a Reply

Your email address will not be published.