ಮತ್ತೊಂದು ಸೆಲೆಬ್ರಿಟಿ ಜೋಡಿಯ ಸಂಸಾರದಲ್ಲಿ ಬಿರುಕು? ಸೋಶಿಯಲ್ ಮೀಡಿಯಾ ಪೋಸ್ಟ್ ಕೊಟ್ಟ ಸುಳಿವು? ಅಭಿಮಾನಿಗಳು ಶಾಕ್

Entertainment Featured-Articles Movies News

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ಬ್ರೇಕಪ್ ಗಳು ಹಾಗೂ ವಿಚ್ಚೇದನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಿನಿಮಾ ಸೆಲೆಬ್ರಿಟಿಗಳ ವಿಚ್ಚೇದನದ ಸುದ್ದಿಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳು ಹಂಚಿಕೊಳ್ಳುವ, ಅವರು ಹೆಸರಿನಲ್ಲಿ ಮಾಡಿಕೊಳ್ಳುವ ಬದಲಾವಣೆಗಳು ಅವರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉಂಟಾಗಿದೆಯೇನೋ ಎನ್ನುವ ಅನುಮಾನಗಳನ್ನು ಹುಟ್ಟಿಸುವಂತೆ ಆಗಿದೆ. ಇದೀಗ ಅಂತಹುದೇ ಒಂದು ಬೆಳವಣಿಗೆಯಲ್ಲಿ ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಾಶ್ರೀ ವರ್ಮಾ ದಾಂಪತ್ಯ ಜೀವನದಲ್ಲಿ ಬಿರುಕು ಮಾಡಿರಬಹುದು ಎನ್ನುವ ಅನುಮಾನವೊಂದನ್ನು ಮೂಡಿಸಿದೆ.

ಯಜ್ವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಾಶ್ರೀ ವರ್ಮಾ ತಮ್ಮ ಸುಂದರವಾದ ಫೋಟೋ ಗಳನ್ನು ಹಂಚಿಕೊಂಡು ಸದಾ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದ್ದರು. ಈ ಜೋಡಿಯು ಪ್ರೇಮಿಸಿ ಅನಂತರ ವಿವಾಹವಾಗಿದ್ದರು‌. ಡಿಸೆಂಬರ್ 22, 2020 ರಲ್ಲಿ ಈ ಜೋಡಿಯು ತಮ್ಮ‌ ವಿವಾಹದ ಪೋಸ್ಟ್ ಹಂಚಿಕೊಂಡಾಗ ನೆಟ್ಟಿಗರು ಮತ್ತು ಅಭಿಮಾನಿಗಳು ಸಹಾ ಅಚ್ಚರಿಗೊಂಡಿದ್ದರು. ಈ ಜೋಡಿಗೆ ಶುಭಾಶಯ ಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಇದೀಗ ಈ ಜೋಡಿಯ ಸೋಶಿಯಲ್ ಮೀಡಿಯಾ ಚಟುವಟಿಕೆಗಳು ಅಭಿಮಾನಿಗಳು ಮತ್ತು ನೆಟ್ಟಿಗರಲ್ಲಿ ಗೊಂದಲವನ್ನು ಮೂಡಿಸಿದೆ.

ಧನಾಶ್ರೀ ವರ್ಮಾ ಅವರು ಯಜ್ವೇಂದ್ರ ಚಹಲ್ ಅವರನ್ನು ವಿವಾಹವಾದ ನಂತರ ತಮ್ಮ ಹೆಸರಿನಲ್ಲಿ ಪತಿಯ ಸರ್ ನೇಮ್ ಅನ್ನು ಸೇರಿಸಿಕೊಂಡು ಧನಾಶ್ರೀ ಚಹಲ್ ಎಂದು ಮಾಡಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಈಗ ಅವರು ಪತಿಯ ಸರ್ ನೇಮ್ ತೆಗೆದು ಹಾಕಿ ಮತ್ತೆ ಧನಾಶ್ರೀ ವರ್ಮಾ ಎಂದೇ ಹೆಸರನ್ನು ಹಾಕಿಕೊಂಡಿದ್ದಾರೆ. ಇತ್ತೀಚಿಗೆ ಸೆಲೆಬ್ರಿಟಿ ಮಹಿಳೆಯರು ತಾವು ಪತಿಯಿಂದ ದೂರವಾಗಲಿದ್ದರೆ ಅಥವಾ ವಿಚ್ಚೇದನ ಪಡೆಯಲಿದ್ದರೆ ಪತಿಯ ಸರ್ ನೇಮ್ ತೆಗೆದು ಹಾಕುವುದು ಸಹಾ ಒಂದು ಟ್ರೆಂಡ್ ನಂತೆ ಆಗಿದ್ದು, ಈಗ ಧನಾಶ್ರೀ ವರ್ಮಾ ತಮ್ಮ‌ ಹೆಸರಿನಿಂದ ಪತಿಯ ಸರ್ ನೇಮ್ ತೆಗೆದಿರುವುದು ಅನುಮಾನ ಮೂಡಿಸಿದೆ.

ಈ ಘಟನೆಯ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರ ಯಜ್ವೇಂದ್ರ ಚಹಲ್ ಅವರು ಸಹಾ ತಮ್ಮ ಇನ್ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಖಾತೆಯ ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ, ಹೊಸ ಜೀವನವು ಲೋಡ್ ಆಗುತ್ತಿದೆ ಎಂದು ಹೇಳುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಎರಡು ಘಟನೆಗಳನ್ನು ಒಂದಕ್ಕೊಂದು ತಳಕು ಹಾಕುತ್ತಿರುವ ಅಭಿಮಾನಿಗಳು ಹಾಗೂ ನೆಟ್ಟಿಗರು ಈ ಜೋಡಿ ತಮ್ಮ ಸಂಬಂಧಕ್ಕೆ ಬ್ರೇಕ್ ಹಾಕಲಿದ್ದಾರೆ, ಬಹುಶಃ ಅವರು ದೂರ ಆಗುತ್ತಿರಬೇಕು ಹಾಗೂ ಇವರು ವಿಚ್ಚೇದನ ಪಡೆಯಲು ನಿರ್ಧರಿಸಿರಬೇಕು ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published.