ಮತ್ತೊಂದು ಸುಂದರ ಹೊಸ ಮನೆ ಖರೀದಿ ಮಾಡಿದ ಮಹೇಂದ್ರ ಸಿಂಗ್ ಧೋನಿ:ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು

Entertainment Featured-Articles News

ಇತ್ತೀಚಿಗೆ ಬಾಲಿವುಡ್ ನ ದಿಗ್ಗಜ ನಟರು ದೊಡ್ಡ ಐಶಾರಾಮೀ ಬಂಗಲೆ ಗಳನ್ನು ಖರೀದಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಅರ್ಜುನ್ ಕಪೂರ್ ರಂತಹ ಸ್ಟಾರ್ ನಟರುಗಳು ಮನೆ ಖರೀದಿ ಮಾಡಿದ ನಟರ ಪಟ್ಟಿಯಲ್ಲಿ ಸೇರಿದ್ದಾರೆ. ಈಗ ಈ ಸೆಲೆಬ್ರಿಟಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ‌ ಭಾರತದ ಜನಪ್ರಿಯ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು. ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಕೆಲವೇ ದಿನಗಳ ಹಿಂದೆ ಪುಣೆಯಲ್ಲಿ ಒಂದು ಬಹಳ‌ ಸುಂದರವಾದ ಹಾಗೂ ಐಶಾರಾಮೀ ಮನೆಯೊಂದನ್ನು ಖರೀದಿ ಮಾಡಿದ್ದು, ಧೋನಿ ಹೊಸ ಮನೆಯನ್ನು ಖರೀದಿ ಮಾಡಿರುವ ವಿಷಯವಾಗಿ ಮಾದ್ಯಮಗಳಲ್ಲಿ ಸಾಲಷ್ಟು ಸುದ್ದಿಯಾಗಿದ್ದಾರೆ.
ಧೋನಿಯವರ ಈ ಹೊಸ ಮನೆ ಪುಣೆಯ ಪಿಂಪರಿ ಚಿಂಚ್ ವಾಡ ಪ್ರದೇಶದ ರಾವೇತ್ ನ ಎಸ್ಟಾಡೋ ಪ್ರೆಸಿಡೆನ್ಷಿಯಲ್ ಸೊಸೈಟಿಯಲ್ಲಿ ಇದೆ.

ಕಳೆದ ವರ್ಷ ಸಹಾ ಧೋನಿ ಅವರು ಮುಂಬೈನಲ್ಲಿ ಒಂದು ಮನೆಯನ್ನು ಖರೀದಿ ಮಾಡಿದ್ದರು. ಧೋನಿ ಅವರ ಪತ್ನಿ ಸಾಕ್ಷಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಮನೆಯಲ್ಲಿ ಇನ್ನೂ ಕೆಲವು ಬಾಕಿ ಇರುವ ಕೆಲಸಗಳು ನಡೆಯುತ್ತಿದ್ದು, ಈಗ ಅದರ ಬೆನ್ನಲ್ಲೇ ಧೋನಿ ಅವರು ಮುಂಬೈನಲ್ಲಿ ಮನೆಯನ್ನು ಕೊಂಡಿದ್ದಾರೆ.‌ ಇನ್ನು ಧೋನಿ ಅವರ ಹೊಸ ಮನೆಯನ್ನು ಎಷ್ಟು ಹಣಕ್ಕೆ ಖರೀದಿ ಮಾಡಿದ್ದಾರೆ ಎನ್ನುವ ಅಧಿಕೃತವಾದ ಮಾಹಿತಿ ಹೊರ ಬಂದಿಲ್ಲ. ಇನ್ನು ಧೋನಿ ಅವರು ಈಗಾಗಲೇ ಒಂದು ಸುಂದರವಾದ ಫಾರ್ಮ್ ಹೌಸ್ ನ ಮಾಲಿಕರಾಗಿದ್ದಾರೆ.

ಧೋನಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಪತ್ನಿ ಮತ್ತು ಪುತ್ರಿಯ ಜೊತೆಗೆ ತಮ್ಮ ಫಾರ್ಮ್ ಹೌಸ್ ನಲ್ಲೇ ದಿನಗಳನ್ನು ಕಳೆಯುತ್ತಿದ್ದು, ಅವರ ಈ ಸುಂದರವಾದ ಫಾರ್ಮ್ ಹೌಸ್ ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಧೋನಿಯವರ ಈ ಫಾರ್ಮ್ ಹೌಸ್ ನ ಹೆಸರು ಕೈಲಾಶ್ ಪತಿ ಎನ್ನುವುದಾಗಿದ್ದು, ವಿಶಾಲವಾದ ಈ ಫಾರ್ಮ್ ಹೌಸ್ ಏಳು ಎಕರೆ ಜಮೀನಿನಲ್ಲಿ ಇದ್ದು, ಇಲ್ಲಿ ಸ್ವಿಮ್ಮಿಂಗ್ ಪೂಲ್, ಇನ್ ಡೋರ್ ಸ್ಟೇಡಿಯಂ ನಂತಹ ಸೌಲಭ್ಯಗಳು ಸಹಾ ಇವೆ. ಗಮನಿಸಬೇಕಾದ ವಿಷಯ ಏನೆಂದರೆ 2021 ಐಪಿಎಲ್ ಮುಂದೂಡಿದಾಗಿನಿಂದ ಧೋನಿ ತಮ್ಮ ಪರಿವಾರದ ಜೊತೆಗೆ ಇದೇ ಫಾರ್ಮ್ ಹೌಸ್ ನಲ್ಲಿ ಇದ್ದಾರೆ.

ಧೋನಿ ಅವರ ಪತ್ನಿ ಸಾಕ್ಷಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ಸಾಕ್ಷಿ ಅವರು ತಮ್ಮ ಸಾಕು ನಾಯಿ ಹಾಗೂ ಕುದುರೆಯನ್ನು ಸಹಾ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಧೋನಿ ಅವರ ಮಗಳು ಸಹಾ ಫಾರ್ಮ್ ಹೌಸ್ ನಲ್ಲಿ ತಂದೆ ತಾಯಿ ಜೊತೆಯಲ್ಲಿ ಬಹಳ ಖುಷಿ ಯಾಗಿ ದಿನಗಳನ್ನು ಕಳೆಯುತ್ತಾ,‌ ಧೋನಿ ಅವರ ಕುಟುಂಬ ಆಹ್ಲಾದಕರ ವಾತಾವರಣದಲ್ಲಿ ಸಂತೋಷವಾಗಿದೆ.

Leave a Reply

Your email address will not be published. Required fields are marked *