ಮತ್ತೊಂದು ಸೀರಿಯಲ್ ನಿಂದ ಹೊರನಡೆದ ಜನಪ್ರಿಯ ನಟಿ ಮಾನ್ಸಿ ಜೋಷಿ: ಏನಿದರ ಹಿಂದಿನ ಅಸಲಿ ಕಾರಣ?

Entertainment Featured-Articles Movies News
62 Views

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮಾನ್ಸಿ ಜೋಶಿ ಈಗಾಗಲೇ ಕೆಲವು ಧಾರಾವಾಹಿಗಳ ಮೂಲಕ ಮನೆ ಮನೆ ಮಾತಾಗಿರುವ ನಟಿ. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯವಾಗಿರುವ ಈ ನಟಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರು ಸಹಾ ಇದ್ದಾರೆ. ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಂಡು ಮಾನ್ಸಿ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಲೇ ಇರುತ್ತಾರೆ. ಮಾನ್ಸಿ ಅವರು ಈ ಹಿಂದೆ ಪಾರು ಸೀರಿಯಲ್ ನಲ್ಲಿ ಅನುಷ್ಕಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಭರ್ಜರಿಯಾಗಿ ರಂಜಿಸಿದ್ದರು.

ಪಾರು ಸೀರಿಯಲ್ ನಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ಮಾನ್ಸಿ ಅವರ ಪಾತ್ರಕ್ಕೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು. ಆದರೆ ಮಾನ್ಸಿ ಅವರು ತೆಲುಗು ಹಾಗೂ ತಮಿಳಿನಲ್ಲಿ ಕೂಡಾ ನಟಿಸುತ್ತಿದ್ದ ಕಾರಣ ಪಾರು ಸೀರಿಯಲ್ ನಲ್ಲೂ ಅವರ ಪಾತ್ರ ಬಹಳ ಬೇಗ ಮುಗಿದಿತ್ತು. ಇದಾದ ನಂತರ ಮಾನ್ಸಿ ಅವರು ಕನ್ನಡದಲ್ಲಿ ಅಣ್ಣ ತಂಗಿ ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಬಂದಿರುವ ಹೊಸ ಸುದ್ದಿಗಳ ಪ್ರಕಾರ ಮಾನ್ಸಿ ಜೋಷಿ ಅವರು ಈಗ ಅಣ್ಣ ತಂಗಿ ಸೀರಿಯಲ್ ನಿಂದಲೂ ಹೊರಗೆ ಬಂದಿದ್ದಾರೆ ಎನ್ನಲಾಗಿದೆ.

ಇನ್ನು ನಟಿಯು ತಮ್ಮ‌ ವೈಯಕ್ತಿಕ ಕಮಿಟ್ಮೆಂಟ್ ಗಳ ಕಾರಣದಿಂದ ಸೀರಿಯಲ್ ನಿಂದ ಹೀಗೆ ಮಧ್ಯಂತರದಲ್ಲೇ ಹೊರ ಬಂದಿದ್ದಾರೆ ಎಂದು ಗಾಸಿಪ್ ಗಳು ಹರಿದಾಡಿವೆ. ಆದರೆ ನಿಜವಾದ ಕಾರಣ ಏನು ಎನ್ನುವುದನ್ನು ನಟಿ ಮಾನ್ಸಿ ಅವರೇ ಹೇಳಬೇಕಿದೆ. ಮಾನ್ಸಿ ಅವರು ಅಣ್ಣ ತಂಗಿ ಸೀರಿಯಲ್ ನಲ್ಲಿ ನಾಯಕಿಯಾಗಿ ಸಂಧ್ಯಾ ಎನ್ನುವ ಪಾತ್ರದ ಮೂಲಕ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇನ್ನು ಈಗ ಈ ಪಾತ್ರಕ್ಕೆ ಮಾನ್ಸಿ ಅವರ ಪಾತ್ರಕ್ಕೆ ನಟಿ ಜೆಸ್ಸಿಕಾ ಅವರ ಆಗಮನವಾಗಿದೆ ಎನ್ನಲಾಗಿದೆ.

ನಟಿ ಮಾನ್ಸಿ ಅವರು ಸೀರಿಯಲ್ ನಿಂದ ಹೊರ ಬಂದ ವಿಷಯವನ್ನು ಮೇಕರ್ಸ್ ಸಹಾ ಅಧಿಕೃತವಾಗಿ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ. ಸೀರಿಯಲ್ ನಲ್ಲಿ ಜೆಸ್ಸಿಕಾ ಅವರು ಸಂಧ್ಯಾ ಪಾತ್ರದ ಮೂಲಕ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಮಾನ್ಸಿ ಅವರು ಹೊಸ ಸೀರಿಯಲ್ ನಲ್ಲಿ ಏನಾದರೂ ಮಾಡುತ್ತಿದ್ದಾರಾ? ಅಥವಾ ಅನ್ಯ ಭಾಷೆಯ ಸೀರಿಯಲ್ ನಲ್ಲಿ ಅವರು ನಟಿಸಲು ತಯಾರಿ ನಡೆಸಿದ್ದಾರಾ? ಎನ್ನುವುದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *