ಸಿನಿಮಾ ಸೆಲೆಬ್ರಿಟಿಗಳ ಜೀವನದಲ್ಲಿ ವೈವಾಹಿಕ ಬಂಧ ಎನ್ನುವುದು ಯಾವಾಗ ಕಳಚಿ ಬೀಳುತ್ತದೆ ಎನ್ನುವುದನ್ನು ಯಾರೂ ಸಹಾ ಊಹೆ ಮಾಡಲಾಗುವುದಿಲ್ಲ. ಮದುವೆಯಾಗುವುದು, ವಿಚ್ಚೇದನ ಪಡೆಯುವುದು , ಅದಾದ ಕೂಡಲೇ ಮೆಚ್ಚಿದವರ ಜೊತೆ ಮತ್ತೊಂದು ಮದುವೆಗೆ ಸಜ್ಜಾಗುವುದು ಇದೆಲ್ಲಾ ನಡೆಯುತ್ತಲೇ ಇರುತ್ತದೆ. ಇನ್ನೊಂದೆಡೆ ಕೆಲವೊಂದು ಜೋಡಿಗಳು ಮಾತ್ರ ತಮ್ಮ ದಾಂಪತ್ಯ ಜೀವನವನ್ನು ಇತರರಿಗೆ ಮಾದರಿಯಾಗುವಂತೆ ನಡೆಸಿಕೊಂಡು ಬರುತ್ತಿರುವ ಉದಾಹರಣೆಗಳ ಸಹಾ ಉಂಟು. ಆದರೆ ಇಂದಿನವರಲ್ಲಿ ಇಂತಹ ಉದಾಹರಣೆಗಳು ಕಡಿಮೆ.
ಪ್ರೀತಿ, ಪ್ರೇಮ ಎಂದು ಎಲ್ಲೆಡೆ ಸುದ್ದಿಯಾಗಿ, ತಾವು ಆದರ್ಶ ದಂಪತಿಯಾಗುವೆವು ಎನ್ನುವ ಮಾತು ಹೇಳುವ ಸೆಲೆಬ್ರಿಟಿ ಜೋಡಿಗಳು, ಮದುವೆಯಾದ ಕೆಲವು ವರ್ಷಗಳ ನಂತರ ಬೇರೆಯಾದಾಗ ಇವರ ಪ್ರೀತಿ, ಪ್ರೇಮ ಇಷ್ಟೇನಾ ಎನ್ನುತ್ತಾರೆ ಜನ. ಕೆಲವೇ ದಿನಗಳ ಹಿಂದೆ ಸಮಂತಾ, ನಾಗಚೈತನ್ಯ ವಿಚ್ಛೇದನ ಆಗಿದ್ದು ಅವರ ನಡುವಿನ ವಿಚ್ಛೇದನದ ಬಗ್ಗೆ ಇನ್ನೂ ಚರ್ಚೆಗಳು ನಡೆಯುವಾಗಲೇ, ಇದೀಗ ಮತ್ತೆ ಎರಡು ಸೆಲೆಬ್ರಿಟಿ ವಿವಾಹ ವಿಚ್ಛೇದನಗಳು ನಡೆಯುವ ಸೂಚನೆ ಸಿಕ್ಕಿದೆ.
ಹೌದು ತಮಿಳು ಸಿನಿರಂಗದ ಸ್ಟಾರ್ ನಟ ಧನುಷ್ ಅವರು ಹಾಗೂ ಅವರ ಪತ್ನಿ ಐಶ್ಚರ್ಯಾ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಲು ನಿರ್ಧರಿಸಿದ್ದು, ನಟ ಧನುಷ್ ಈ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಧನುಷ್ ತಮ್ಮ ಪೋಸ್ಟ್ ನಲ್ಲಿ, ನಾವಿಬ್ಬರೂ 18 ವರ್ಷಗಳಿಂದಲೂ ಸಹಾ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ ಸಾಕಷ್ಟು ಉತ್ತಮ ನೆನಪುಗಳನ್ನು ಹೊಂದಿದ್ದೇವೆ. ಒಬ್ಬರಿಗೊಬ್ಬರು ಆಸರೆಯಾಗಿ ಇದ್ದೆವು.
ಆದರೆ ಈಗ ನಮ್ಮಿಬ್ಬರ ದಾರಿ ಬೇರೆಯಾಗಿದೆ. ಹೀಗಾಗಿ ನಾವಿಬ್ಬರೂ ಬೇರೆಯಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಮತ್ತು ಸಹಕಾರ ಇರಲೆಂದು ಆಶಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಈ ವಿಷಯ ಕೇಳಿ ಶಾಕ್ ಆಗಿದ್ದಾರೆ. ಇನ್ನು ರಜನೀಕಾಂತ್ ಅವರ ಮಗಳು, ಧನುಷ್ ಅವರ ಪತ್ನಿ ಸೌಂದರ್ಯ ಈ ವಿಚಾರವಾಗಿ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ಅಥವಾ ಪೋಸ್ಟ್ ಮಾಡಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಹೆಸರಿನ ಜೊತೆ ಇರುವ ಧನುಷ್ ಸರ್ ನೇಮ್ ಕೂಡಾ ತೆಗೆದಿಲ್ಲ.