ಮತ್ತೊಂದು ಮೈಲಿಗಲ್ಲಿನತ್ತ ಜೊತೆ ಜೊತೆಯಲಿ ಸೀರಿಯಲ್: ಖುಷಿ ಹಂಚಿಕೊಂಡ ನಿರ್ದೇಶಕರು.

Entertainment Featured-Articles News
53 Views

ಕನ್ನಡ ಕಿರುತೆರೆಯ ಲೋಕ ಎಂದರೆ ಇಲ್ಲಿ ಮನರಂಜನೆಯ ಸಿಂಹಪಾಲು ಧಾರಾವಾಹಿಗಳದ್ದು ಎನ್ನುವುದನ್ನು ಯಾವುದೇ ಅನುಮಾನ ಇಲ್ಲದೇ ಹೇಳಬಹುದು. ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಜನರ ಮೇಲೆ‌ ಮಾಡಿರುವ ಮೋಡಿಗೆ ಸಾಕ್ಷಿ ಆ ಧಾರಾವಾಹಿಗಳು ಪಡೆದಿರುವ ಜನಪ್ರಿಯತೆ ಹಾಗೂ ಜನಾದರಣೆಗಳಿಂದ ತಿಳಿಯುತ್ತದೆ. ಲಾಕ್ ಡೌನ್ ಅವಧಿಯಲ್ಲಿ ಸಿನಿಮಾ ಥಿಯೇಟರ್ ಗಳು ಬಂದ್ ಆದ ಕಾಲದಲ್ಲಿ ಸಹಾ ಜನರಿಗೆ ಮನರಂಜನೆಯ ಪ್ರಮುಖ ಮೂಲ ಆಗಿದ್ದು ಸೀರಿಯಲ್ ಗಳೇ. ಧಾರಾವಾಹಿಗಳು ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿವೆ.

ಕಿರುತೆರೆಯಲ್ಲಿ ಪ್ರಸಾರವಾಗುವ ಹಲವು ಸೀರಿಯಲ್ ಗಳಲ್ಲಿ, ಕೆಲವು ಸೀರಿಯಲ್ ಗಳು ಅಪಾರ ಜನಮನ್ನಣೆಯನ್ನು ಪಡೆದಿದ್ದು, ಟಾಪ್ ಧಾರಾವಾಹಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಅಂತಹ ಸೀರಿಯಲ್ ಗಳ ಸಾಲಿನಲ್ಲಿ ಜೊತೆ ಜೊತೆಯಲಿ ಸೀರಿಯಲ್ ಸಹಾ ಇದೆ. ಕನ್ನಡ ಕಿರುತೆರೆಯ ಲೋಕದಲ್ಲಿ ತನ್ನ ಆಗಮನದೊಂದಿಗೆ ಹೊಸ ಸಂಚಲನ ಹುಟ್ಟಿಸಿದ ಧಾರಾವಾಹಿ ಜೊತೆ ಜೊತೆಯಲಿ. ಈ ಧಾರಾವಾಹಿ ಕಿರುತೆರೆಯಲ್ಲಿ ಒಂದು ಹೊಸ ದಾಖಲೆ ಬರೆಯಿತು.

ಟಿ ಆರ್ ಪಿ ವಿಚಾರದಲ್ಲಿ ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಒಂದು ಹೊಸ ದಾಖಲೆ ಬರೆದ ಜೊತೆ ಜೊತೆಯಲಿ ದೀರ್ಘ ಸಮಯದ ವರೆಗೆ ನಂಬರ್ ಒನ್ ಸೀರಿಯಲ್ ಆಗಿ ಮಿಂಚಿತ್ತು. ಈ ಸೀರಿಯಲ್ ನ ನಟ ನಟಿಯರು ನಾಡಿನ ಮನೆ ಮನೆ ಮಾತಾದರು.‌ ಜನ ಅವರನ್ನು ಅವರ ಪಾತ್ರದ ಹೆಸರಿನಿಂದಲೇ ಗುರುತಿಸಲು ಪ್ರಾರಂಭಿಸಿದರು. ಸೀರಿಯಲ್ ದಿನದಿಂದ ದಿನಕ್ಕೆ ಮತ್ತಷ್ಟು ಮಗದಷ್ಟು ಕುತೂಹಲವನ್ನು ಹುಟ್ಟಿಸಿ ಜನರ ನೆಚ್ಚಿನ ಸೀರಿಯಲ್ ಎನಿಸಿಕೊಂಡಿತು. ಈಗ ಈ ಸೀರಿಯಲ್ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ.

ಜೊತೆ ಜೊತೆಯಲಿ ಸೀರಿಯಲ್ ನ ನಿರ್ದೇಶಕರಾದ ಆರೂರು ಜಗದೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು ಸಂತೋಷವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ, ಜೊತೆ ಜೊತೆಯಲಿ” ಧಾರಾವಾಹಿ ನನ್ನ ಜೀವನದ ಒಂದು ಮೈಲಿಗಲ್ಲು. ಕನ್ನಡದ ಮಾರುಕಟ್ಟೆಗೆ ಇಂಥದೊಂದು ಧಾರಾವಾಹಿಯನ್ನು ಮಾಡೋದು ತುಂಬಾನೇ ಕಷ್ಟ. ಅಂತಹ ಸಮಯದಲ್ಲೂ, ದುಡ್ಡು, ಶ್ರಮ ಹಾಕಿಮಾಡಿದ್ದೇವೆ.

ಈ ಧಾರಾವಾಹಿ ಎಲ್ಲರ ಮನಸ್ಸಲ್ಲೂ ಒಂದು ಮ್ಯಾಜಿಕಲ್ ಮೊಮೆಂಟ್ ಅನ್ನು ಕ್ರಿಯೇಟ್ ಮಾಡ್ತು. ಅದು ಎಲ್ಲರ ಮನಸ್ಸಲ್ಲೂ ಶಾಶ್ವತವಾಗಿ ಉಳಿಯುವ ಹಾಗೆ ಆಯ್ತು, ಕಿರುತೆರೆ ಇಂಡಸ್ಟ್ರಿಯಲ್ಲಿ ಅದೊಂದು ಬೆಂಚ್ ಮಾರ್ಕ್ ಆಯಿತು. ಇದಕ್ಕೆ ಕಾರಣ” ಜೆಎಸ್ ಪ್ರೊಡಕ್ಷನ್ಸ್”, “ಜೀ ಕನ್ನಡ”,”ಕಲಾವಿದರು”, “ಟೆಕ್ನಿಷನ್” ಹಾಗೆ ಇದನ್ನು ಸಂಭ್ರಮಿಸಿದ ವೀಕ್ಷಕರು ಮತ್ತು ಅಭಿಮಾನಿಗಳು. ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲ ಯಾವಾಗಲೂ ಹೀಗೆ ಇರಲಿ ಎಂದು ಬರೆದುಕೊಂಡು ಧಾರಾವಾಹಿಯ 600 ರ ಸಂಚಿಕೆಯ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *