ಮತ್ತೊಂದು ಮಾನವೀಯ ಕಾರ್ಯಕ್ಕೆ ಸಜ್ಜಾದ ಸೋನು ಸೂದ್: ವಿಷಯ ತಿಳಿದ್ರೆ ನೀವು ಕೂಡಾ ಗ್ರೇಟ್ ಅಂತೀರಾ.

Written by Soma Shekar

Updated on:

---Join Our Channel---

ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಟ ಸೋನು ಸೂದ್ ಅವರು ಸಿನಿಮಾ ಮಾತ್ರವೇ ಅಲ್ಲದೇ ಅನೇಕ ಸಮಾಜ ಮುಖಿ ಚಟುವಟಿಕೆಗಳು ಹಾಗೂ ಮಾನವೀಯ ಕಾರ್ಯಗಳಿಂದಾಗಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಇಂದಿನವರೆಗೂ ಅವರು ಸಹಾಯ ನೀಡುವುದು ಮಾತ್ರ ನಿಂತಿಲ್ಲ.‌ ಕೋವಿಡ್ ಸಂಕಷ್ಟದಲ್ಲಿ ಜನರ ಕೈ ಹಿಡಿದ ಇವರನ್ನು ಜನರು ರಿಯಲ್ ಹೀರೋ ಎಂದು ಕರೆದರು. ಬಹಳಷ್ಟು ಜನರು ಅವರನ್ನು ದೇವರಂತೆ ಆರಾಧಿಸುತ್ತಾರೆ.

ಹೀಗೆ ಜನರ ಮನಸ್ಸಿನಲ್ಲಿ ಅಪಾರವಾದ ಅಭಿಮಾನವನ್ನು ಸಂಪಾದನೆ ಮಾಡಿರುವ ನಟ ಸೋನು ಸೂದ್ ಅವರು ಇದೀಗ ಇನ್ನೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಸೋನು ಸೂದ್ ಅವರು ಎಲ್ಲಿ ಜನರು ಕಷ್ಟದಲ್ಲಿ ಇರುವರೋ, ಎಲ್ಲಿ ಜನರು ಸಹಾಯವನ್ನು ಯಾಚಿಸುತ್ತಾರೋ ಅಲ್ಲಿ ನೆರವನ್ನು ನೀಡಲು ಧಾವಿಸುತ್ತಾರೆ. ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಉಂಟಾಗಿರುವ ಅ ವ ಘ ಡ ದ ಬಗ್ಗೆ ಸೋನು ಸೂದ್ ಅವರಿಗೆ ಒಂದು ಟ್ವೀಟ್ ಮಾಡಿದ್ದು, ನಟ ಸೋನು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವೀಟ್ ಮಾಡಿದ ವ್ಯಕ್ತಿ, “ಸೋನು ಸೂದ್ ಅವರು ನೆಲ್ಲೂರು ಮತ್ತು ತಿರುಪತಿಯಲ್ಲಿ ಅತಿವೃಷ್ಟಿಯಿಂದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ನಮ್ಮ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗಿದೆ. ಸಾವಿರಾರು ಜನ ಮನೆ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ, ತಿನ್ನೋದಿಗೆ ಆಹಾರ ಇಲ್ಲ, ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ದಯವಿಟ್ಟು ಸಹಾಯ ಮಾಡಿ” ಎಂದು ಟ್ವೀಟ್ ಮಾಡಿ ಸೋನು ಅವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಟ್ವೀಟ್ ಗಮನಿಸಿರುವ ಸೋನು ಸೂದ್ ಇದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಅವರು ಪ್ರತಿಕ್ರಿಯೆ ನೀಡುತ್ತಾ, “ನಿಮ್ಮ ಮನೆಗಳನ್ನು ಪುನರ್ ನಿರ್ಮಾಣ ಮಾಡುವ ಸಮಯ ಬಂದಿದೆ” ಎನ್ನುವ ಭರವಸೆಯನ್ನು ನೀಡಿದ್ದಾರೆ. ಸೋನು ಅವರು ಈ ಮೂಲಕ ಮನೆಯ ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆಯನ್ನು ನೀಡಿರುವುದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ತೀವ್ರ ಮಳೆಯ ಕಾರಣ ಅಲ್ಲಿ ನದಿಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನ ಕಂಗಾಲಾಗಿದ್ದಾರೆ.

Leave a Comment