ಮತ್ತೊಂದು ಭಯಾನಕ ಭವಿಷ್ಯವಾಣಿ ನುಡಿದ ಕೋಡಿಶ್ರೀ: ಬಡಿಗೆ ಹಿಡಿದು ಜನರು ಹೊರಗೆ ಬರುವ ಕಾಲ ಬರುತ್ತದೆ

Written by Soma Shekar

Published on:

---Join Our Channel---

ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಆಗಾಗ ಭವಿಷ್ಯವಾಣಿಗಳನ್ನು ನುಡಿಯುವ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.‌ ಈಗ ಶ್ರೀಗಳು ಮತ್ತೊಮ್ಮೆ ಒಂದು ಭ ಯಾ ನಕವಾದ ಭವಿಷ್ಯವಾಣಿ ನುಡಿದಿದ್ದಾರೆ. ಕೋಡಿಮಠದ ಶ್ರೀಗಳು ಈ ಬಾರಿ ಮಳೆಯ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯ ಬೂಕನಕೆರೆಗೆ ಭೇಟಿ ನೀಡಿದ್ದ ಶ್ರೀಗಳು ಪ್ರಕೃತಿ ವಿ ಕೋ ಪ ದ ಕುರಿತಾಗಿ ಭವಿಷ್ಯವಾಣಿ ನುಡಿಯುವ ಮೂಲಕ ಎಲ್ಲರಿಗೂ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.‌ ಇದೇ ವೇಳೆ ಅವರು ಪ್ರಸ್ತುತ ರಾಜಕೀಯದ ಕುರಿತಾಗಿ ಮಾತ್ರ ಯಾವುದೇ ವಿಚಾರವನ್ನು ಹೇಳಲು ನಿರಾಕರಿಸಿದ್ದಾರೆ. ಹಾಗಾದರೆ ಶ್ರೀಗಳು ನುಡಿದ ಭವಿಷ್ಯವಾಣಿ ಏನೆಂದು ತಿಳಿಯೋಣ ಬನ್ನಿ.

ರಾಜ್ಯದಲ್ಲಿ ಮಳೆಯ ಅನಾಹುತ ಇನ್ನೂ ಮುಂದುವರೆಯಲಿದೆ ಎಂದಿರುವ ಶ್ರೀಗಳು ದೇಶದಾದ್ಯಂತ ಜಲಪ್ರಳಯಗಳು ಉಂಟಾಗುತ್ತದೆ ಎಂದೂ, ಸುನಾಮಿ ಸಹಾ ಬರುವ ಸಾಧ್ಯತೆ ಇದೆ ಎಂದೂ ಭವಿಷ್ಯವಾಣಿ ನುಡಿದಿದ್ದಾರೆ. ಭೂಮಿಯಿಂದ ಹೊಸ ಜಂತುಗಳು ಉದ್ಭವಿಸಲಿದ್ದು, ಜನರು ಮನೆಯಿಂದ ಹೊರಗೆ ಬರುವಾಗ ಬಡಿಗೆ ಹಿಡಿದು ಓಡಾಡುವ ಕಾಲವು ಬರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ‌. ಈ ಹಿಂದೆ ಕೊರೊನಾ ಬಗ್ಗೆ ತಾನು ನುಡಿದ ಭವಿಷ್ಯವಾಣಿ, ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆ ಹೇಳಿದ ಮಾತು ನಿಜವಾಗಿದೆ ಎಂದು ತಮ್ಮ ಪ್ರಸ್ತುತ ಭವಿಷ್ಯವಾಣಿಯನ್ನು ಸಮರ್ಥನೆ ಮಾಡಿಕೊಳ್ಳುವ ಹಾಗೆ ಅವರು ಮಾತನಾಡಿದ್ದಾರೆ.

ಈ ಹಿಂದೆ ನನ್ನ ಎಲ್ಲಾ ಮಾತುಗಳು ನಿಜವಾಗಿದೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಇದಕ್ಕಿಂತಲೂ ಎದುರಾಗಲಿದೆ. ಇದಕ್ಕೆಲ್ಲಾ ಪರಿಹಾರ ದೇವರನ್ನು ಪೂಜೆ ಮಾಡುವುದು. ಆದರೆ ಇತ್ತೀಚಿಗೆ ಭಗವಂತನ ಪೂಜೆಯು ಆಡಂಬರವಾಗಿದೆ. ಯೋಗ್ಯವಾದ ಸಾಧುಗಳಿದ್ದಾರೆ, ಗದ್ದುಗೆಗಳಿವೆ, ಎಲ್ಲರೂ ಸೇರಿ ಪ್ರಾರ್ಥಿಸಿದರೆ ಜಗತ್ತು ಉಳಿಯುತ್ತದೆ ಎಂದಿದ್ದಾರೆ ಶ್ರೀಗಳು. ಮಠದ ವಿರುದ್ಧ ಹಾಗೂ ಶರಣರ ವಿರುದ್ಧ ಆ ರೋ ಪ ವಿಚಾರವಾಗಿ ಕೋಡಿ ಶ್ರೀ ಅವರು ಬಹಳ ಮಾರ್ಮಿಕವಾದಂತಹ ಉತ್ತರವನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಶ್ರೀಗಳು ಪ್ರತಿಕ್ರಿಯೆ ನೀಡುತ್ತಾ, ನೀಚಂಗೆ ದೊರೆತನುವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನವೂ, ಸಿಕ್ಕಿರುವುದು ಈ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಆರೋಪಗಳು ಮುಂದೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಶ್ರೀಗಳು ಕಾರ್ತಿಕ ಮಾಸದ ಬಗ್ಗೆ ಸಹಾ ಭವಿಷ್ಯವಾಣಿ ನುಡಿದಿದ್ದರು. ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು ಎಂದು ಭವಿಷ್ಯವಾಣಿ ನುಡಿದಿದ್ದರು. ಜ್ಞಾನದ ಕೊರತೆಯಿಂದ ದೇಶದಲ್ಲಿ ಅಶಾಂತಿ ತಲೆದೋರಲಿದೆ ಎಂದು ಸಹಾ ಹೇಳಿದ್ದರು.‌

Leave a Comment