ಮತ್ತೆ ಸಿಲ್ಲಿ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆದ ಅಕ್ಷಯ್ ಕುಮಾರ್: ವೈರಲ್ ಆಗ್ತಿದೆ ಫೋಟೋ!!
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬಹು ನಿರೀಕ್ಷಿತ ಸಿನಿಮಾ ಸಾಮ್ರಾಟ್ ಪೃಥ್ವಿರಾಜ್ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ನಂತರ ಪ್ರೇಕ್ಷಕರಿಂದ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸಿನಿಮಾಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಮಾಡಲಾಗಿದೆ. ಜೂನ್ 3 ರಂದು ಬಿಡುಗಡೆಗೊಂಡ ಸಿನಿಮಾ ಮೊದಲ ದಿನವೇ ಸುಮಾರು 10.70 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿದೆ ಎನ್ನಲಾಗಿದೆ. ಆದರೆ ಅಕ್ಷಯ್ ಕುಮಾರ್ ಬಾಲಿವುಡ್ ನ ಸ್ಟಾರ್ ನಟರಲ್ಲಿ ಒಬ್ಬರು. ನಟಿಸಿರುವುದು ಒಂದು ಐತಿಹಾಸಿಕ ಪಾತ್ರದಲ್ಲಿ. ಆದ್ದರಿಂದ ಮೊದಲ ದಿನದ ಗಳಿಗೆ ತೃಪ್ತಿಕರವಲ್ಲ ಎನ್ನುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ಇವೆಲ್ಲವುಗಳ ನಡುವೆ ಇದೀಗ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಈಗಾಗಲೇ ಕೆಲವು ವಿಚಾರಗಳಿಂದ ಟ್ರೋಲ್ ಆಗಿದೆ. ಈಗ ಮತ್ತೊಮ್ಮೆ ಟ್ರೋಲ್ ಆಗಿದ್ದು, ಸಿನಿಮಾದ ದೃಶ್ಯವೊಂದರಲ್ಲಿ ನಟ ಅಕ್ಷಯ್ ಕುಮಾರ್ ಅವರನ್ನು ಕಟ್ಟಿ ಹಾಕಿರುವ ದೃಶ್ಯವನ್ನು ಈಗ ಟ್ರೋಲ್ ಮಾಡಲಾಗುತ್ತಿದೆ. ಅಕ್ಷಯ್ ಕುಮಾರ್ ಅವರನ್ನು ಕಟ್ಟಿ ಹಾಕಿರುವ ದೃಶ್ಯದ ಪೋಸ್ಟರ್ ಅಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೈರಲ್ ಫೋಟೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ತನ್ನ ಸಿನಿಮಾಗಳನ್ನು ಬಹಳ ಅಚ್ಚುಕಟ್ಟಾಗಿ, ಜಾಗರೂಕತೆಯಿಂದ ಮಾಡುವೆನೆಂದು ಹೇಳಿಕೊಳ್ಳುವ ಅಕ್ಷಯ್ ಕುಮಾರ್ ಅವರು ತಮ್ಮ ಸಿನಿಮಾದಲ್ಲಿ ಇಂತಹುದೊಂದು ಸಿಲ್ಲಿ ಮಿಸ್ಟೇಕ್ ಹೇಗೆ ಮಾಡಿದರು ಎಂದು ಜನರು ವ್ಯಂಗ್ಯವಾಡಿದ್ದಾರೆ. ಈ ರೀತಿ ಯಾರು ಕಟ್ಟಿ ಹಾಕ್ತಾರೆ ?? ಗುರು ಎಂದು ಕಾಮಿಡಿ ಮಾಡಿದ್ದಾರೆ. ಇದೆಲ್ಲಾ ಬಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಸಾಧ್ಯ ಬಿಡಿ ಎಂದು ಕೆಲವರು ಕಾಲೆಳೆಯುವ ಕೆಲಸವನ್ನು ಸಹಾ ಮಾಡಿದ್ದಾರೆ. ದಿಸ್ ಈಸ್ ಬಾಲಿವುಡ್ ಲಾಜಿಕ್ ಎಂದು ಹಾಸ್ಯ ಮಾಡಿದ್ದಾರೆ ಕೆಲವರು.
ಇಷ್ಟಕ್ಕೂ ದೃಶ್ಯವೇನು ಎನ್ನೋದಾದ್ರೆ, ಸಿನಿಮಾದ ಒಂದು ದೃಶ್ಯದಲ್ಲಿ ಅಕ್ಷಯ್ ಕುಮಾರ್ ಅವರನ್ನು ಸರಪಳಿಗಳಿಂದ ಕಟ್ಟಿ ಹಾಕಿರುತ್ತಾರೆ. ಆದರೆ ಅವರ ಬಲಗೈಯನ್ನು ಬಹಳ ಆರಾಮವಾಗಿ , ಸುಲಭವಾಗಿ ತಪ್ಪಿಸಿಕೊಳ್ಳುವ ಹಾಗೆ ಕಟ್ಟಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಸುಮ್ಮನೆ ಇರೋದು ಸಾಧ್ಯವೇ? ನಟ ಅಕ್ಷಯ್ ಕುಮಾರ್ ಹಾಗೂ ಚಿತ್ರತಂಡವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾ, ಇತಿಹಾಸದ ಪಾಠ ಸರಿಯಾಗಿ ಮಾಡುತ್ತೇವೆ ಎಂದು ಚಿತ್ರತಂಡ ಇಂತಹ ಸಿಲ್ಲಿ ಮಿಸ್ಟೇಕ್ ಮಾಡಿದ್ದು ಹೇಗೆ ಎಂದು ಟಾಂಗ್ ನೀಡಿದ್ದಾರೆ.