ಮತ್ತೆ ಸಮನ್ವಿ ಬಂದರೆ.. ಮಗುವಿನ ನಿರೀಕ್ಷೆಯಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ ನಟಿ ಅಮೃತಾ ನಾಯ್ಡು

Entertainment Featured-Articles News

ಕನ್ನಡದ ಜನಪ್ರಿಯ ನಟಿ ಅಮೃತಾ ನಾಯ್ಡು ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ತಮ್ಮ ಆರು ವರ್ಷದ ಮಗಳು ಸಮನ್ವಿಯನ್ನು ಕಳೆದುಕೊಂಡಿದ್ದ ಅಮೃತಾ ಅವರ ಜೀವನದಲ್ಲೊಂದು ತೀರದ ನೋವು, ವೇದನೆ ಉಳಿಸಿ ಹೋಗಿತ್ತು. ರಸ್ತೆ ಅ ಫ ಘಾ ತದಲ್ಲಿ ಸಮನ್ವಿ ನಿಧನಳಾಗುವ ವೇಳೆಗೆ ಅಮೃತ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು.
ಇದೀಗ ಅಮೃತ ಹಾಗೂ ಅವರ ಪತಿ ರೂಪೇಶ್ ದಂಪತಿ ತಮ್ಮ ಮನೆಗೆ ಬರಲಿರುವ ಮಗುವನ್ನು ನೋಡಲು ಕಾತರರಾಗಿದ್ದಾರೆ. ಜೊತೆಗೆ ಅಮೃತಾ ಅವರು ಒಂದು ಭಾವನಾತ್ಮಕ ಪೋಸ್ಟ್ ಒಂದನ್ನು ಬರೆದುಕೊಂಡಿದ್ದಾರೆ.

ಆ ದುರಾದೃಷ್ಟದ ದಿನ ಸಿಡಿಲು ಬಡಿದ ನಂತರ ನನ್ನ ಪ್ರಪಂಚವೇ ನಲುಗಿತ್ತು. ನನಗೆ ಹಿಡಿದಿಡಲು ಏನು ಇಲ್ಲ ಎನಿಸಿತ್ತು. ನಾನು ಉಸಿರಾಡುತ್ತಿದ್ದೇನೆ ಎಂದರೂ ಒಳಗೆ ಸತ್ತಿದ್ದೇನೆ ಎನ್ನುವ ಭಾವನೆ ಮೂಡಿತ್ತು. ಎಲ್ಲಾ ವಿಶೇಷ ವ್ಯಕ್ತಿಗಳ, ನಿಮ್ಮೊಳಗಿನ ಹಾರೈಕೆಯಿಂದ ನನ್ನೊಳಗಿನ ಜೀವದ ನೆನಪಾಗುತ್ತಿತ್ತು. ನನ್ನೊಳಗೆ ಇನ್ನೊಂದು ಜೀವವಿದೆ. ನಾನು ಆ ಬೆಳಕನ್ನು ನೋಡಲಿದ್ದೇನೆ ಎನ್ನುವುದನ್ನು ನೆನಪಿಸಿತ್ತು. ನನ್ನೊಳಗಿನ ಪುಟ್ಟ ಜೀವವನ್ನು ನಾನು ಕಾಣುವಂತೆ ಮಾಡುತ್ತಿದೆ. ಜೀವನವೆಂದರೆ ಅದು ನಾನು ಮಾತ್ರವಲ್ಲ, ಎಂದಿಗೂ ಮಾಯದ ನೋವುಗಳು ಇದ್ದೇ ಇರುತ್ತವೆ, ಆದರೂ ಎಲ್ಲ ಭಾವನೆಗಳನ್ನು ನಾನು ನನ್ನ ಮೇಲೆ ಹಾಕಿಕೊಳ್ಳುವುದು ಸಾಧ್ಯವಿಲ್ಲ.

ಇಂದು ನೋವು ನನಗೆ ಮಾತ್ರ ಇರಲಿ, ಅದು ಯಾವುದಕ್ಕೆ ಕಾರಣಕ್ಕೂ ನನ್ನ ಮಗುವಿಗೆ ತಿಳಿಯಬಾರದು. ನಾನು ಖುಷಿಯಾಗಿರುವುದನ್ನು ಮಾತ್ರ ಆ ಮಗು ನೋಡಬೇಕು ಎಂದು ಅರಿತುಕೊಂಡಿದ್ದೇನೆ. ಎಲ್ಲ ಸರಿಯಾಗಿದ್ದರೆ ಈ ಮಗು ಖುಷಿ ಪಡೆಯಬೇಕು ಎಂದು ನಾನು ಅರ್ಥ ಮಾಡಿಕೊಂಡು ಈ ಫೋಟೋ ತೆಗೆಸಿಕೊಂಡಿರುವೆ. ನನ್ನ ಸಮನ್ವಿ ಮತ್ತೆ ಬಂದರೆ ಎಲ್ಲವೂ ಫ್ರೆಶ್‌ ಆಗಿರುತ್ತದೆ, ಹೊಸದಾಗಿ ಒಂದು ಶೇಡ್ ಬಂದರೆ ಅದು ನಮ್ಮ ಕುಟುಂಬ ಸೇರಿಕೊಳ್ಳುತ್ತದೆ.

ನಾನು ಈ ಸೆಲೆಬ್ರೇಶನ್ ಮಿಸ್ ಮಾಡಲು ಬಯಸುವುದಿಲ್ಲ. ನೀವೆಲ್ಲ ನನ್ನ ಶಕ್ತಿಯಾಗಿ, ಉಳಿದುಕೊಳ್ಳಲು ಸಹಾಯ ಮಾಡಿ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಕಳೆದ ಜನವರಿಯಲ್ಲಿ ಅಮೃತಾ ಅವರು ತಮ್ಮ ಮಗಳ ಜೊತೆ ಸ್ಕೂಟಿಯಲ್ಲಿ ಹೋಗುವಾಗ ವಾಜರಹಳ್ಳಿಯಲ್ಲಿ ನಡೆದಂತಹ ಒಂದು ರಸ್ತೆ ಅ ಪ ಘಾ ತದಲ್ಲಿ ಅಮೃತಾ ಅವರ ಮಗಳು ಆರು ವರ್ಷ ವಯಸ್ಸಿನ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

Leave a Reply

Your email address will not be published.