ಮತ್ತೆ ಶೇಂಗಾ ಮಾರುತ್ತೇನೆ: ಜನರ ಕ್ಷಮೆ ಯಾಚಿಸಿದ ಕಚ್ಚಾ ಬದಾಮ್ ಸಿಂಗರ್ ಭುಬನ್

Entertainment Featured-Articles News

ಜೀವನದಲ್ಲಿ ನಾವು ಎಷ್ಟೇ ಎತ್ತರಕ್ಕೆ ಏರಿದರೂ, ಎಷ್ಟೇ ಹಣವನ್ನು ಗಳಿಸಿದರೂ, ಎಷ್ಟೇ ಸಾಧನೆಯನ್ನು ಮಾಡಿದರೂ ಸಹಾ‌ ನಮ್ಮ ಈ ಸಾಧನೆಯ ಅಥವಾ ಯಶಸ್ಸಿನ ಪಯಣ ಆರಂಭವಾಗಿದ್ದು ಎಲ್ಲಿ? ಎನ್ನುವುದನ್ನು ಮರೆಯಬಾರದು. ನಮ್ಮ ಯಶಸ್ಸಿನ ಪಯಣ ಎಲ್ಲಿ ? ಯಾವಾಗ ? ಹೇಗೆ ? ಆರಂಭವಾಗಿತ್ತು ಎನ್ನುವುದನ್ನು ಸದಾಕಾಲ ನೆನಪಿನಲ್ಲಿಟ್ಟುಕೊಂಡಿರಬೇಕು. ಯಶಸ್ಸು ಸಿಕ್ಕ ಕೂಡಲೇ ನಡೆದ ಬಂದ ಹಾದಿಯನ್ನು ಮರೆತರೆ ಯಶಸ್ಸು ಹೆಚ್ಚು ಕಾಲ ಉಳಿಯುವುದಿಲ್ಲ. ಈಗ ಈ ವಿಷಯವನ್ನು ಏಕೆ ಹೇಳುತ್ತಿದ್ದೇವೆ ಎನ್ನುವುದಕ್ಕೆ ಒಂದು ಸ್ಪಷ್ಟವಾದ ಕಾರಣವಿದೆ.

ಕಚ್ಚಾ ಬಾದಾಮ್ ಎನ್ನುವ ಒಂದು ಹಾಡಿನ ಮೂಲಕ ರಾತ್ರೋರಾತ್ರಿ ದೊಡ್ಡ ಸ್ಟಾರ್ ಆದವರು ಭುಬನ್ ಬಡ್ಯಾಕರ್. ಪಶ್ಚಿಮ ಬಂಗಾಳದ ಹಳ್ಳಿಗಳಲ್ಲಿ ಶೇಂಗಾ ಮಾರಾಟ ಮಾಡುತ್ತಾ, ಆತ ಖುಷಿಯಾಗಿ ಹಾಡಿದ ಹಾಡು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನು ಸೃಷ್ಟಿಸಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಯಾರು ಈ ಹಾಡಿಗೆ ಹೆಜ್ಜೆ ಹಾಕುವ ಮೂಲಕ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರೂ ಕಚ್ಚಾ ಬಾದಾಮ್ ಹಾಡು ಮಾರ್ದನಿಸುತ್ತಿದೆ.

ಈ ಒಂದು ಹಾಡಿನ ಮೂಲಕ ಬುಬನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಬುಬನ್ ಹಾಡಿದ ಹಾಡು ಯೂಟ್ಯೂಬ್ ನಲ್ಲಿ ಕೂಡಾ ವೈರಲ್ ಆಗಿದೆ. ಅನೇಕ ಅವಕಾಶಗಳು ಅವರನ್ನು ಆರಿಸಿ ಬರುತ್ತಿವೆ. ಜೊತೆಗೆ ಹಣ ಕೂಡಾ ಬಂದಿದೆ. ಇನ್ನು ಅದೇ ಹಣದಿಂದ ಇತ್ತೀಚಿಗಷ್ಟೇ ಬುಬನ್ ಒಂದು ಸೆಕೆಂಡ್ ಹ್ಯಾಂಡ್ ಕಾರನ್ನು ಕೊಂಡುಕೊಂಡಿದ್ದಾರೆ. ಆದರೆ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಅವರು ಆಡಿದ್ದ ಮಾತುಗಳು ಜನರಿಗೆ ತೀ ವ್ರ ಬೇಸರವನ್ನು ಉಂಟು ಮಾಡಿದೆ.

ಬುಬನ್ ತಮ್ಮ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆಯಲ್ಲಿ, ನಾನು ಇನ್ನು ಮುಂದೆ ಕಲಾವಿದನಾಗಿ ಇರಲು ಬಯಸುತ್ತೇನೆ. ಸೆಲೆಬ್ರಿಟಿಯ ಸ್ಥಾನಮಾನ ಸಿಕ್ಕಿರುವುದರಿಂದ ಮುಂದೆ ಶೇಂಗಾ ಮಾರಾಟ ಮಾಡಲು ಸಾಧ್ಯವಿಲ್ಲ. ನಾನು ಮತ್ತೆ ಶೇಂಗಾ ವ್ಯಾಪಾರ ಮಾಡಲು ಹೋದರೆ ಅವಮಾನ ಎದುರಾಗಬಹುದು ಎನ್ನುವ ಮಾತನ್ನು ಹೇಳಿದ್ದರು.
ಬುಬನ್ ಆಡಿದ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ಕೂಡಲೇ ನೆಟ್ಟಿಗರು ಈ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.

ಜನಪ್ರಿಯತೆಯ ಗರ್ವ ಆತನ ತಲೆಗೆ ಏರಿದೆ ಎಂದು ಜನರು ತಮ್ಮ ಅಸಮಾಧಾನವನ್ನು ಹೊರಹಾಕಿದ ಕೂಡಲೇ ಭುಬನ್ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡುತ್ತಾ, ನಾನು ಆಡಿದ ಮಾತುಗಳು ತಪ್ಪು, ಮಾತುಗಳನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ. ನನ್ನ ಬಾಯಿಂದ ಅಂತಹ ಮಾತುಗಳು ಬರಬಾರದಿತ್ತು, ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಒಂದು ವೇಳೆ ಮುಂದೆ ಮತ್ತೆ ಶೇಂಗಾ ಮಾರುವ ಪರಿಸ್ಥಿತಿ ಬಂದರೆ ನಾನು ಅದಕ್ಕೂ ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.

ಜಗತ್ತಿನಾದ್ಯಂತ ಜನರಿಂದ ನನಗೆ ಪ್ರೀತಿ ದಕ್ಕುತ್ತಿದೆ, ಇದಕ್ಕೆ ನಾನು ಬಹಳ ಅದೃಷ್ಟವಂತ. ನಾನು ಇಂದು ಸೆಲೆಬ್ರಿಟಿಯಾಗಿ ಬದಲಾದರೂ, ನಾನು ಸಾಮಾನ್ಯನಂತೆ ಜೀವನ ನಡೆಸಿದ್ದೇನೆ. ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಇತ್ತೀಚಿಗಷ್ಟೇ ಸಣ್ಣ ಅ ಪ ಘಾ ತ ಕೂಡಾ ಸಂಭವಿಸಿ ಭುಬನ್ ಆಸ್ಪತ್ರೆಗೆ ಕೂಡಾ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು.

Leave a Reply

Your email address will not be published.