ಮತ್ತೆ ಶುರುವಾದ RRR ಮತ್ತು ರಾಧೇಶ್ಯಾಮ್ ಬಿಡುಗಡೆ ದಿನಾಂಕದ ಸಮರ: ಯಾರಿಗೆ ಸಿಗಲಿದೆ ಗೆಲುವು??

Written by Soma Shekar

Published on:

---Join Our Channel---

ಕೊರೊನಾ ಮ ಹಾ ಮಾ ರಿ ಬಂದ ಮೇಲೆ ವಿಶ್ವದಾದ್ಯಂತ ಜನರ ಜೀವನವು ಬದಲಾಗಿ ಹೋಗಿದೆ. ಅನೇಕರ ಬದುಕು ದು ಸ್ತ ರವಾಗಿದೆ ಕೂಡಾ. ಜನರು ಹೊಸ ಬದುಕನ್ನು ಕಟ್ಟಿಕೊಳ್ಳುವ ವೇಳೆಗೆ ಹೊಸ ಹೊಸ ತಳಿಯ ವೈರಸ್ ಗಳ ಉಗಮ ಮತ್ತೆ ಮತ್ತೆ ಆ ತಂ ಕವನ್ನು ಸೃಷ್ಟಿಸುತ್ತಾ, ಜನರ ಜೀವನಕ್ಕೆ ಸ್ಥಿರತೆ ಎನ್ನುವುದನ್ನೇ ಇಲ್ಲದ ಹಾಗೆ ಮಾಡಿದೆ. ಕೊರೊನಾ ಪರಿಣಾಮ ಎಲ್ಲ ರಂಗಗಳ ಮೇಲೆ ಆದಂತೆಯೇ ಒಂದು ಹೆಜ್ಜೆ ಹೆಚ್ಚಾಗಿಯೇ ಸಿನಿಮಾ ರಂಗದ ಮೇಲೆ ಕೂಡಾ ಆಗಿದೆ. ಜನ ದಟ್ಟಣೆ ಸೇರಬಾರದೆಂಬ ಕಾರಣಕ್ಕೆ ಸಿನಿಮಾ ಮಂದಿರಗಳನ್ನು ಸಾಂಕ್ರಾಮಿಕದ ತೀವ್ರತೆ ಹೆಚ್ಚಿದ ಕೂಡಲೇ ಬಂದ್ ಮಾಡಲಾಗುತ್ತದೆ.

ಕೊರೊನಾ ಕಾರಣದಿಂದಾಗಿ ಸಿದ್ಧವಾಗಿರುವ ಬಹುಕೋಟಿ ಸಿನಿಮಾಗಳು ಬಿಡುಗಡೆಯ ಅನಿಶ್ಚಿತತೆ ಕಾದಿದೆ. ಪ್ರಸ್ತುತ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ದೊಡ್ಡ ಕ್ರೇಜ್ ಹುಟ್ಟು ಹಾಕಿರುವ ನಟ ಪ್ರಭಾಸ್ ನಾಯಕನಾಗಿರುವ ರಾಧೇ ಶ್ಯಾಮ್ ಮತ್ತು ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ, ಟಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ ಗಳಾದ ರಾಮ್ ಚರಣ್ ತೇಜಾ ಮತ್ತು ಜೂ.ಎನ್ ಟಿ ಆರ್ ನಾಯಕರಾಗಿ ಕಾಣಿಸಿಕೊಂಡಿರುವ ಆರ್ ಆರ್ ಆರ್ ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿ ಇದ್ದು, ಕೊರೊನಾ ಈ ಸಿನಿಮಾಗಳ ಬಿಡುಗಡೆಗೆ ಅಡ್ಡಗಾಲಾಗಿದೆ‌.

ಹೌದು, ಈಗಾಗಲೇ ರಾಧೇ ಶ್ಯಾಮ್ ಹಾಗೂ ಆರ್ ಆರ್ ಆರ್ ಸಿನಿಮಾಗಳ ಬಿಡುಗಡೆಯ ದಿನಾಂಕಗಳು ಕೊರೊನಾ ಕಾರಣದಿಂದ ಬದಲಾಗಿದೆ. ಬಿಡುಗಡೆ ಆಗಬೇಕಿದ್ದ ಸಿನಿಮಾಗಳು ಮತ್ತೆ ತಮ್ಮ ದಿನಾಂಕವನ್ನು ಬದಲಿಸಲು ಸಜ್ಜಾಗಿದೆ‌. ಜನವರಿಗೆ ಬರಬೇಕಿದ್ದ ತ್ರಿಬಲ್ ಆರ್ ಸಿನಿಮಾದ ನಿಗಧಿತ ಬಿಡುಗಡೆಯ ದಿನಾಂಕವನ್ನು ಕೈ ಬಿಡಲಾಯಿತು. ಹೊಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಚಿತ್ರ ತಂಡ ಹೇಳಿತು. ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಶೆ ಮೂಡಿತು.

ಈಗ ಇವೆಲ್ಲವುಗಳ ಬೆನ್ನಲ್ಲೇ ಇದೀಗ ಟಾಲಿವುಡ್ ಅಂಗಳದಿಂದ ಹೊಸ ಸುದ್ದಿಯೊಂದು ಹೊರ ಬಂದಿದೆ. ಹೌದು ಭಾರೀ ಬಜೆಟ್ ನ , ಬಹು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ತ್ರಿಬಲ್ ಆರ್ ಮತ್ತು ರಾಧೇ ಶ್ಯಾಮ್ ಎರಡೂ ಸಿನಿಮಾಗಳು ಸಹಾ ಈಗ ಮಾರ್ಚ್ 18 ಕ್ಕೆ ತೆರೆಗೆ ಬರಲು ಸಿದ್ಧತೆಗಳನ್ನು ನಡೆಸುತ್ತಿವೆ ಎನ್ನಲಾಗಿದೆ‌. ಎರಡೂ ಸಿನಿಮಾಗಳ ಬಿಡುಗಡೆ ಕೂಡಾ ಬೇರೆ ಸಿನಿಮಾಗಳ ಮೇಲೆ ಪರಿಣಾಮ ಬೀರುವುದಂತೂ ಖಚಿತ. ಆದರೆ ಈಗ ಅದಕ್ಕಿಂತ ದೊಡ್ಡ ಪ್ರಶ್ನೆಯೊಂದು ಅಭಿಮಾನಿಗಳ ಮುಂದೆ ಬಂದಿದೆ.

ಹೌದು, ಈಗ ಈ ಎರಡೂ ಸಿನಿಮಾಗಳು ಬಿಡುಗಡೆಗೆ ಕೂಡಾ ಒಂದೇ ದಿನಾಂಕವನ್ನು ಆಯ್ಕೆ ಮಾಡಿಕೊಂಡಿರುವುದು ತೀವ್ರ ಕುತೂಹಲವನ್ನು ಕೆರಳಿಸಿದೆ. ಈ ಎರಡೂ ಸಿನಿಮಾಗಳಲ್ಲಿ ಮಾರ್ಚ್ 18 ಕ್ಕೆ ಯಾವ ಸಿನಿಮಾ 100% ತೆರೆಗೆ ಬರಲಿದೆ?? ಬಾಹುಬಲಿ ನಿರ್ದೇಶಕ ರಾಜಮೌಳಿಯವರ ತ್ರಿಬಲ್ ಆರ್ ಅಥವಾ ಬಾಹುಬಲಿ ಸಿನಿಮಾ ನಾಯಕ ಪ್ರಭಾಸ್ ಅಭಿನಯದ ರಾಧೇ ಶ್ಯಾಮ್ ?? ಇಬ್ಬರಲ್ಲಿ ಯಾರು ಈ ರೇಸ್ ಗೆಲ್ಲಲಿದ್ದಾರೆ ಎನ್ನುವುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Leave a Comment