ಮತ್ತೆ ಬರ್ತಿದೆ ಕಾಂಟ್ರವರ್ಸಿ ಶೋ ಕಾಫಿ ವಿತ್ ಕರಣ್: ಈ ಬಾರಿ ಯಾರೆಲ್ಲಾ ಅತಿಥಿಗಳು ಬರಲಿದ್ದಾರೆ??

Entertainment Featured-Articles News

ಬಾಲಿವುಡ್ ನ ಜನಪ್ರಿಯ ನಿರ್ಮಾಪಕ ಕರಣ್ ಜೋಹರ್ ಸಿನಿಮಾ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ಕೂಡಾ ಸಖತ್ ಫೇಮಸ್. ರಿಯಾಲಿಟಿ ಶೋ ಗಳ ಜಡ್ಜ್ ಆಗಿರುವ ಕರಣ್ ಜೋಹರ್ ಅವರು ನಿರೂಪಕ ಸಹಾ ಆಗಿದ್ದು, ಅವರ ನಿರೂಪಣೆಯ ಕಾಫಿ ವಿತ್ ಕರಣ್ ಹೆಸರಿನ ಸೆಲೆಬ್ರಿಟಿಗಳ ಹರಟೆ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಶೋ ಆಗಿದೆ. ಕಾಫಿ ವಿತ್ ಕರಣ್ ಶೋ ಪ್ರತಿ ಸೀಸನ್ ನಲ್ಲಿ ಸಹಾ ಸಾಕಷ್ಟು ಕಾಂಟ್ರವರ್ಸಿಗಳಿಗೆ ಕಾರಣವಾಗುತ್ತದೆ. ಸೆಲೆಬ್ರಿಟಿಗಳು ಆಡುವ ಮಾತುಗಳು ಸಿಕ್ಕಾಪಟ್ಟೆ ಚರ್ಚೆಗೆ ಗುರಿಯಾಗುವುದು ಮಾತ್ರವೇ ಅಲ್ಲ, ಟ್ರೋಲ್ ಆಗಿದ್ದು ಉಂಟು. ವಿ ವಾ ದ ಗಳಿಗೆ ಕಾರಣವಾದ ಉದಾಹರಣೆಗಳು ಇವೆ.

ಇನ್ನು ಕಾಫಿ ವಿತ್ ಕರಣ್ ಶೋ 2020 ರ ಸೀಸನ್ ಮುಗಿಸಿದ ನಂತರ ಇನ್ನು ಹೊಸ ಸೀಸನ್ ಬರುವುದಿಲ್ಲ ಎನ್ನುವ ಸುದ್ದಿಗಳು ಸಹಾ ಹರಡಿತ್ತು. ಆದರೆ ಅದು ಸುಳ್ಳು, ಕಾಫಿ ವಿತ್ ಕರಣ್ ಶೀಘ್ರದಲ್ಲೇ ಹೊಸ ಸೀಸನ್ ನೊಂದಿಗೆ ಮತ್ತೊಮ್ಮೆ ವೀಕ್ಷಕರ ಮುಂದೆ ಬರಲಿದೆ ಎನ್ನುವ ಸುದ್ದಿಗಳು ಬಾಲಿವುಡ್ ನ ಮಾದ್ಯಮಗಳಲ್ಲಿ ಹರಿದಾಡಿದೆ. ಅಲ್ಲದೇ ಕಾಫಿ ವಿತ್ ಕರಣ್ ನ ಹೊಸ ಸೀಸನ್ ನಲ್ಲಿ ಯಾರೆಲ್ಲಾ ಸೆಲೆಬ್ರಿಟಿಗಳು ಈ ಬಾರಿ ಭಾಗಿಯಾಗಬಹುದು ಎನ್ನುವ ವಿಷಯ ಕೂಡಾ ಈಗ ಗಮನ ಸೆಳೆಯುತ್ತಿದೆ.

ವರದಿಗಳ ಪ್ರಕಾರ ಈ ಬಾರಿ ಕಾಫಿ ವಿತ್ ಕರಣ್ ನಲ್ಲಿ ಅಕ್ಷಯ್ ಕುಮಾರ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ, ನೀತೂ ಕಪೂರ್, ಅನಿಲ್ ಕಪೂರ್, ಕಿಯಾರಾ ಅಡ್ವಾಣಿ ಹೀಗೆ ಸಾಲು ಸಾಲು ಸ್ಟಾರ್ ಗಳೇ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಬಾಲಿವುಡ್ ನ ವಿವಾಹ ಜೀವನಕ್ಕೆ ಅಡಿಯಿಟ್ಟ ಹೊಸ ಜೋಡಿಗಳಾದ ಕತ್ರೀನಾ ಕೈಫ್, ವಿಕ್ಕಿ ಕೌಶಲ್ ಮತ್ತು ಆಲಿಯಾ ಭಟ್, ರಣಬೀರ್ ಕಪೂರ್ ಜೋಡಿಯು ಸಹಾ ಶೋ ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇದೆಲ್ಲದಕ್ಕಿಂತ ಮತ್ತೊಂದು ಆಸಕ್ತಿಕರ ವಿಷಯ ಏನೆಂದರೆ ದಕ್ಷಿಣದಲ್ಲಿ ಈಗಾಗಲೇ ಜನಪ್ರಿಯತೆ ಪಡೆದು, ಬಾಲಿವುಡ್ ನಲ್ಲಿ ಮಿಷನ್ ಮಜ್ನು ಮತ್ತು ಗುಡ್ ಬೈ ಸಿನಿಮಾಗಳ ಬಾಲಿವುಡ್ ಗೆ ಅಡಿಯಿಟ್ಟು, ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ, ಪ್ರಸ್ತುತ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲೂ ನಾಯಕಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಸಹಾ ಕಾಫಿ ವಿತ್ ಕರಣ್ ಶೋ‌ ಗೆ ಅತಿಥಿಯಾಗಿ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಪ್ರಕಟವಾಗಿದೆ.

Leave a Reply

Your email address will not be published.