ಮತ್ತೆ ಡ್ರ” ಗ್ಸ್ ಸದ್ದು: ಎನ್ ಸಿ ಬಿ ಬಲೆಗೆ ಸಿಲುಕಿದ ಬಾಲಿವುಡ್ ನಟ ಶಾರೂಖ್ ಖಾನ್ ಮಗ

Written by Soma Shekar

Published on:

---Join Our Channel---

ಬಾಲಿವುಡ್ , ಟಾಲಿವುಡ್, ಸ್ಯಾಂಡಲ್ವುಡ್ ಹೀಗೆ ಎಲ್ಲೆಡೆ ಇತ್ತೀಚಿನ ದಿನಗಳಲ್ಲಿ ಡ್ರ ಗ್ಸ್ ಪ್ರಕರಣಗಳ ವಿಷಯವು ಸದ್ದು ಮಾಡುತ್ತಲೇ ಇದೆ. ಪ್ರತಿ ಬಾರಿ ಒಂದಷ್ಟು ಹೆಸರುಗಳು, ವ್ಯಕ್ತಿಗಳ ಮೇಲೆ ಆ ರೋ ಪ ಕೇಳಿ ಬರುತ್ತದೆ. ಅನಂತರ ಕೆಲವು ದಿನಗಳಲ್ಲೇ ಎಲ್ಲವೂ ತಣ್ಣಗಾಗಿ ಬಿಡುತ್ತದೆ‌. ಯಾರೆಲ್ಲರ ಹೆಸರು ಕೇಳಿ ಬರುತ್ತದೆಯೋ ಅವರೆಲ್ಲಾ ಕೂಡಾ ಬಿಂದಾಸ್ ಆಗಿ ತಮ್ಮ ಸೆಲೆಬ್ರಿಟಿ ಲೈಫ್ ಎಂಜಾಯ್ ಮಾಡುತ್ತಾ, ನಮಗೂ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿಕೆಗಳನ್ನು ನೀಡಿ ಸುಮ್ಮನಾಗುತ್ತಾರೆ.

ಇದೀಗ ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಮಾ ದ ಕ ವಸ್ತುಗಳ ನಿಯಂತ್ರಣ ಮಂಡಳಿಯ ಬಲೆಗೆ ಬಿದ್ದಿರುವ ವಿಷಯವೊಂದು ಹೊರಗೆ ಬಂದಿದೆ. ಮುಂಬೈನ ಸಮುದ್ರ ತೀರದಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಒಂದು ಐಶಾರಾಮೀ ರೇವ್ ಪಾರ್ಟಿಯ ಮೇಲೆ ಎನ್ ಸಿ ಬಿ ಅಧಿಕಾರಿಗಳು ಧಾ ಳಿ ಮಾಡಿದ್ದು,ಈ ವೇಳೆ ಬಾಲಿವುಡ್ ಸ್ಟಾರ್ ನಟನ ಮಗನನ್ನು ವ ಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಎನ್ ಸಿ ಬಿ ವ ಶ ಕ್ಕೆ ಪಡೆದ ಆ ಸ್ಟಾರ್ ನಟನ ಮಗ ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಈಗಾಗಲೇ ಆರ್ಯನ್ ಖಾನ್ ನ ಮೊಬೈಲ್ ಫೋನ್ ಅನ್ನು ತಮ್ಮ ವಶಕ್ಕೆ ಪಡೆದಿದ್ದು, ಆತ ಪಾರ್ಟಿ ಆಯೋಜಕರ ಜೊತೆ ಹೇಗೆ ಸಂಪರ್ಕದಲ್ಲಿದ್ದ?? ಅವರೊಡನೆ ನಡೆದಿರುವ ಚಾಟಿಂಗ್ ಇತರೆ ಮಾಹಿತಿಯನ್ನು ಕಲೆ ಹಾಕಬೇಕಾಗಿದೆ ಎಂದು ತಿಳಿಸಿದ್ದಾರೆ.

ಆರ್ಯನ್ ಖಾನ್ ಮೇಲೆ ಯಾವುದೇ ಪ್ರಕರಣ ದಾಖಲು ಮಾಡಲಾಗಿಲ್ಲ. ಕೇವಲ ವ ಶ ಕ್ಕೆ ಪಡೆದು ವಿಚಾರಣೆಯನ್ನು ಮಾತ್ರವೇ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌. ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಮಾ ದ ಕ ವಸ್ತುಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಎಷ್ಟು ಪ್ರಮಾಣದಲ್ಲಿ ಎನ್ನುವುದನ್ನು ತಿಳಿಸಿಲ್ಲ. ಅಲ್ಲದೇ ವಶಕ್ಕೆ ಪಡೆದಿರುವವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಯನ್ ಖಾನ್ ಮಾತ್ರವೇ ಅಲ್ಲದೇ ಎನ್ ಸಿ ಬಿ ಧಾಳಿಯ ವೇಳೆ ಮತ್ತೋರ್ವ ಬಾಲಿವುಡ್ ಸ್ಟಾರ್ ನ ಮಗ ಕೂಡಾ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದ್ದು, ಅದು ಯಾರು ಎನ್ನುವ ವಿಷಯ ಇನ್ನೂ ಬಹಿರಂಗವಾಗಿಲ್ಲ. ಅಲ್ಲದೇ ಎನ್ ಸಿ ಬಿ ಶಾರೂಖ್ ಖಾನ್ ಮಗನನ್ನು ವ ಶ ಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ವಿಚಾರವಾಗಿ ಇನ್ನೂ ನಟ ಶಾರೂಖ್ ಖಾನ್ ಅವರು ಇನ್ನು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Leave a Comment