ಮಣ್ಣಲ್ಲಿ ಮಾಣಿಕ್ಯ: ಈ ಹುಡುಗನ ಪ್ರತಿಭೆಗೆ ಸಿಕ್ಕರೆ ಅವಕಾಶ ಒಲಂಪಿಕ್ಸ್ ಪದಕ ಖಂಡಿತ ಎಂದ ಜನ!!

Entertainment Featured-Articles News Sports Viral Video Wonder

ಪ್ರತಿಭೆಗೂ ಆರ್ಥಿಕ ಪರಿಸ್ಥಿತಿಗೂ ಖಂಡಿತಾ ಸಂಬಂಧ ಎನ್ನುವುದು ಇಲ್ಲ. ಕೆಲವರು ತಮ್ಮ ಜೀವನದಲ್ಲಿ ಏನನ್ನೋ ಸಾಧಿಸಬೇಕು ಎನ್ನುವ ಕನಸನ್ನು ಕಾಣುತ್ತಾರೆ. ಆದರೆ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ತಮ್ಮ ಕನಸುಗಳನ್ನು ಬದಿಗಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಕನಸು ಕನಸಾಗಿಯೇ ಉಳಿದು ಹೋಗುತ್ತದೆ. ಆದರೆ ಇನ್ನೂ ಕೆಲವರು ಮಾತ್ರ ಹೇಗಾದರೂ ಮಾಡಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲೇಬೇಕು ಎನ್ನುವ ದೃಢ ನಿಶ್ಚಯದಿಂದ ಸಮಸ್ಯೆಗಳನ್ನು ಮೀರಿ ತಮ್ಮ ಪ್ರಯತ್ನವನ್ನು ಮಾಡುತ್ತಾರೆ.

ಕಷ್ಟಪಟ್ಟು ತಮ್ಮ ಹಣೆಬರಹವನ್ನು ತಾವೇ ಬದಲಿಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳಿಗೆ ಸಂಬಂಧಪಟ್ಟಂತಹ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಇಂತಹ ವಿಡಿಯೋಗಳನ್ನು ಜನರು ಕೂಡಾ ಬಹಳ ಇಷ್ಟಪಡುತ್ತಾರೆ. ಪ್ರತಿಭಾವಂತರ ಪ್ರತಿಭೆಯನ್ನು ಕಂಡು ಮೆಚ್ಚುಗೆಯನ್ನು ನೀಡುತ್ತಾರೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಅಂತಹುದೇ ಒಂದು ಅದ್ಭುತ ಪ್ರತಿಭೆಯ ಅನಾವರಣ ಆಗಿದೆ.

ಒಬ್ಬ ಪ್ರತಿಭಾವಂತ ಹುಡುಗ ಹಾಗೂ ಅವನ ಅತ್ಯದ್ಭುತ ಕೌಶಲ್ಯಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದೆ ಬಂದಿದೆ. ಕೊಳಗೇರಿಯಲ್ಲಿ ವಾಸಿಸುವ ಈ ಹುಡುಗ ತನ್ನ ಅಪ್ರತಿಮ ಪ್ರತಿಭೆಯನ್ನು ಮೆರೆದಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿದಾಗ ಇದೊಂದು ಸ್ಲಂ ಏರಿಯಾದಲ್ಲಿ ರೆಕಾರ್ಡ್ ಮಾಡಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಆ ಸ್ಥಳದಲ್ಲಿ ಕೆಲವರು ನಿಂತು ಕೊಂಡಿದ್ದಾರೆ.

ಅದೇ ವೇಳೆ ಒಬ್ಬ ಹುಡುಗ ಕಾಲಲ್ಲಿ ಚಪ್ಪಲಿ ಇಲ್ಲದೇ ವೇಗವಾಗಿ ಓಡಿಬಂದು ಅಲ್ಲಿರುವ ಕಸದ ರಾಶಿಯ ನಡುವೆಯೇ, ಗಾಳಿಯಲ್ಲಿ ಹಾರುತ್ತಾ ಅದ್ಭುತವಾದ ಸ್ಟಂಟ್ ಗಳನ್ನು ಮಾಡುತ್ತಾನೆ. ವಿಡಿಯೋ ನೋಡುತ್ತಿದ್ದರೆ, ನೋಡುಗರಿಗೆ ಆ ದೃಶ್ಯವು ಒಂದು ಕ್ಷಣ ರೋಮಾಂಚನವನ್ನುಂಟು ಮಾಡುತ್ತದೆ. ದೇಹದಲ್ಲಿ ಮಿಂಚಿನ ಸಂಚಾರ ವಾಗುತ್ತದೆ. ಆತನು‌ ಮಾಡಿದ ಸ್ಟಂಟ್ ನಮ್ಮನ್ನು ಚಕಿತಗೊಳಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆ ಹುಡುಗ ಗಾಳಿಯಲ್ಲಿ ಹಾರಿ ಪಲ್ಟಿ ಹೊಡೆದು, ಮತ್ತೆ ನೆಲದ ಮೇಲೆ ಲ್ಯಾಂಡ್ ಮಾಡುವ ಕೌಶಲ್ಯ ನಿಜಕ್ಕೂ ಅತ್ಯದ್ಭುತ ಎನಿಸುತ್ತದೆ. ವೈರಲ್ ಆಗಿರುವ ಈ ವಿಡಿಯೋ ಸ್ಪಷ್ಟವಾಗಿ ಎಲ್ಲಿನದು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ ವೀಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ ನಾಲ್ಕು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ.

ಸಹಸ್ರಾರು ಮಂದಿ ಅದಕ್ಕೆ ಮೆಚ್ಚುಗೆಯನ್ನು ನೀಡಿದ್ದಾರೆ. ಕಾಮೆಂಟ್ ಗಳನ್ನು ಮಾಡಿದವರು ಹುಡುಗನ ಅತ್ಯದ್ಭುತ ಪ್ರತಿಭೆಯನ್ನು ಹಾಡಿಹೊಗಳಿದ್ದಾರೆ. ಆತನ ಕೌಶಲ್ಯಕ್ಕೆ ಸರಿಯಾದ ತರಬೇತಿ ಸಿಕ್ಕರೆ ಖಂಡಿತಾ ಒಲಂಪಿಕ್ಸ್ ನಲ್ಲಿ ಅವನು ಪದಕ ಗೆಲ್ಲುತ್ತಾನೆ ಎಂದು ಹೇಳಿದ್ದಾರೆ. ಆತ ಯಾವ ದೇಶದವನೋ, ಆ ದೇಶವು ಆತನಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಿದರೆ ಒಬ್ಬ ಅತ್ಯುತ್ತಮ ಕ್ರೀಡಾ ಪಟುವನ್ನು ಆ ದೇಶ ಪಡೆಯುತ್ತದೆ ಎಂದು ಸಹಾ ಕೆಲವರು ಕಾಮೆಂಟ್ ನಲ್ಲಿ ಹೇಳಿದ್ದಾರೆ.

Leave a Reply

Your email address will not be published.