ಮಗ-ಸೊಸೆ ಸಂಬಂಧ ಉಳಿಸಲು ಮಾವ ನಾಗಾರ್ಜುನ ಪ್ರಯತ್ನ: ವಿಚ್ಛೇದನಕ್ಕೆ 250 ಕೋಟಿ ಡಿಮ್ಯಾಂಡ್ ಮಾಡಿದ್ರಾ ಸಮಂತಾ??

Written by Soma Shekar

Published on:

---Join Our Channel---

ಟಾಲಿವುಡ್ ನ ಸ್ಟಾರ್ ದಂಪತಿ ನಾಗ ಚೈತನ್ಯ ಮತ್ತು ಸಮಂತಾ ಅವರ ನಡುವಿನ ವಿವಾಹ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವಿಷಯ ಈಗಾಗಲೇ ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ. ಒಬ್ಬರನ್ನೊಬ್ಬರು ಇಷ್ಟಪಟ್ಟು , ಪ್ರೀತಿಸಿ ಮದುವೆಯಾದ ಈ ಜೋಡಿಯ ನಡುವಿನ ಸಂಬಂಧದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮಾತ್ರವೇ ಅಲ್ಲದೇ ಇಬ್ಬರೂ ವಿಚ್ಛೇದನದ ಮೂಲಕ ಬೇರೆ ಬೇರೆಯಾಗುವ ಆಲೋಚನೆ ಮಾಡಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಹರಿದಾಡುತ್ತಲೇ ಇದ್ದು, ಕೆಲವು ಇದಕ್ಕೆ ಪೂರಕವಾದ ಬೆಳವಣಿಗೆಗಳು ಸಹಾ ಇತ್ತೀಚಿಗೆ ನಡೆಯುತ್ತಿವೆ.

ಕಳೆದ ಬಹುದಿನಗಳಿಂದ ನಾಗ ಚೈತನ್ಯ ಮತ್ತು ಸಮಂತ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಸಮಂತ ತಮ್ಮ ಹೆಸರಿನಿಂದ ಅಕ್ಕಿನೇನಿ ಎನ್ನುವ ಸರ್ ನೇಮ್ ಅನ್ನು ತೆಗೆದು ತಿಂಗಳುಗಳೇ ಆಗಿ ಹೋಗಿದೆ. ಇತ್ತೀಚಿಗೆ ನಡೆದ ನಾಗಾರ್ಜುನ ಅವರ ಸರಳ ಜನ್ಮದಿನದ ಆಚರಣೆಯ ಫ್ಯಾಮಿಲಿ ಫೋಟೋದಲ್ಲಿ ಸಹಾ ಸಮಂತಾ ಕಾಣಿಸಿರಲಿಲ್ಲ. ಅಲ್ಲದೇ ಸಂದರ್ಶನದಲ್ಲಿ ಕೂಡಾ ತಾನು ಈ ವಿಚಾರದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಹೇಳಬೇಕಾದ ಸಮಯ ಬಂದಾಗ ಹೇಳುವೆ ಎಂದಿದ್ದರು.

ಇವೆಲ್ಲಾ ನೋಡಿದ ಮೇಲೆ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಚೇದನದ ವಿಷಯಕ್ಕೆ ಇನ್ನಷ್ಟು ಮಹತ್ವ ದೊರೆಯಿತು. ಅಲ್ಲದೇ ಅವರು ವಿಚ್ಛೇದನಕ್ಕಾಗಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲು ಏರಿದ್ದಾರೆ ಎಂದು ಕೂಡಾ ಸುದ್ದಿಯಾಗಿದೆ. ಆದರೆ ಇವೆಲ್ಲವುಗಳ ನಡುವೆ ನಾಗ ಚೈತನ್ಯ ಅವರ ತಂದೆ ತೆಲುಗಿನ ಸ್ಟಾರ್ ನಟ ನಾಗಾರ್ಜುನ ಅವರಿಗೆ ಮಗ ಸೊಸೆಯ ವಿಚ್ಛೇದನವು ಇಷ್ಟವಿಲ್ಲ ಎನ್ನುವ ಮಾಹಿತಿಯೊಂದು ಹೊರ ಬಂದಿದೆ.

ನಾಗಾರ್ಜುನ ಅವರು ಮಗ ಮತ್ತು ಸೊಸೆಯ ನಡುವಿನ ವೈಮನಸ್ಸನ್ನು ಹೋಗಲಾಡಿಸಿ ಅವರ ಸಂಬಂಧದಲ್ಲಿ ಉಂಟಾಗಿರುವ ಬಿರುಕನ್ನು ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ನಾಗಾರ್ಜುನ ಅವರ ಮಗ ಸೊಸೆಯ ನಡುವೆ ಒಂದು ಸಂಪರ್ಕ ಸೇತುವೆಯಂತೆ ಕೆಲಸವನ್ನು ಮಾಡುತ್ತಿದ್ದು ಅವರನ್ನು ಮತ್ತೆ ಒಂದು ಮಾಡುವ ಪ್ರಯತ್ನಕ್ಕೆ ಒತ್ತು ನೀಡಿದ್ದಾರೆನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ.

ಸಮಂತಾ ಹಾಗೂ ನಾಗ ಚೈತನ್ಯ ನಡುವೆ ವಿಚ್ಛೇದನ ಆದರೆ ನಾಗಚೈತನ್ಯ ಅವರ ಸಂಪತ್ತಿನಲ್ಲಿ ಅರ್ಧವನ್ನು ಅಂದರೆ ಸುಮಾರು 250 ಕೋಟಿ ಆಸ್ತಿಯನ್ನು ಸಮಂತ ಪರಿಹಾರವಾಗಿ ಕೋರಿದ್ದಾರೆ ಎನ್ನುವ ಸುದ್ದಿ ಕೂಡ ಈಗ ಹರಡಿದ್ದು, ನಾಗಚೈತನ್ಯ ಮತ್ತು ಸಮಂತಾ ಸಂಬಂಧದ ಕುರಿತಾಗಿ ಎದ್ದಿರುವ ವಿ ವಾ ದಾತ್ಮಕ ವಿಚಾರಗಳ ಕುರಿತಾಗಿ ಇನ್ನು ಅವರ ಕುಟುಂಬ ವರ್ಗ ಮಾತ್ರ ಅಧಿಕೃತವಾಗಿ ಯಾವ ವಿಷಯವನ್ನು ಸಹಾ ಬಹಿರಂಗ ಪಡಿಸಿಲ್ಲ.

Leave a Comment