ಮಗ ಅಂದ್ರೆ ಹೀಗಿರಬೇಕು: ಜನಪ್ರಿಯ ನಟ ಮಾಧವನ್ ಮಗನ ಸಾಧನೆ ಕಂಡು ಹಿಗ್ಗಿದ ನೆಟ್ಟಿಗರು

Written by Soma Shekar

Updated on:

---Join Our Channel---

ತಮಿಳು ನಟ ಮಾಧವನ್ ದಕ್ಷಿಣದಲ್ಲಿ ಮಾತ್ರವೇ ಅಲ್ಲ ಬಾಲಿವುಡ್ ನಲ್ಲಿ ಸಹಾ ದೊಡ್ಡ ಜನಪ್ರಿಯತೆ ಪಡೆದುಕೊಂಡಿರುವ ನಟ. ಮಾಧವನ್ ಇಂದಿಗೂ ಸಹಾ ಬಹುಬೇಡಿಕೆಯ ನಟನಾಗಿ ವೈವಿದ್ಯಮಯ ಪಾತ್ರಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನಿಮಾದಲ್ಲಿ ತನ್ನ ಸಾಧನೆಯನ್ನು ಅಭಿಮಾನಿಗಳು ಮೆಚ್ಚುವಾಗಲೇ, ವೈಯಕ್ತಿಕ ಜೀವನದಲ್ಲಿ ಮಾಧವನ್ ತಮ್ಮ ಮಗನ ಸಾಧನೆಯನ್ನು ನೋಡಿ ಬಹಳ ಖುಷಿ ಪಡುತ್ತಿದ್ದಾರೆ. ಮಗನ ಬಗ್ಗೆ ಮಾಧವನ್ ಅವರು ಹೆಮ್ಮೆಯಿಂದ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

ನಟ ಮಾಧವನ್ ಅವರ ಮಗ ವೇದಾಂತ್, ಅಪ್ಪನಂತೆ ಆತ ಕೂಡಾ ಸಿನಿಮಾ ರಂಗದಲ್ಲಿ ಹೆಸರು ಮಾಡಬಹುದು ಎನ್ನುವ ನಿರೀಕ್ಷೆ ಸಹಜವಾಗಿಯೇ ಮಾಧವನ್ ಅವರ ಅಭಿಮಾನಿಗಳಲ್ಲಿ ಇತ್ತು. ಆದರೆ ಮಾಧವನ್ ಅವರ ಪುತ್ರ ಸಿನಿಮಾ ರಂಗದಿಂದ ಹೊರಗೆ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಅಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ.‌ 16 ವರ್ಷ ವಯಸ್ಸಿನ ವೇದಾಂತ್ ಸ್ವಿಮ್ಮಿಂಗ್ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದು, ಇತ್ತೀಚಿಗೆ ಏಳು ಪದಕಗಳನ್ನು ತನ್ನದಾಗಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಯನ್ನು ಮೂಡಿಸಿದ್ದಾರೆ.

ಬೆಂಗಳೂರಿನ ಬಸವನಗುಡಿ ಯಲ್ಲಿ ನಡೆದ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕವನ್ನು ವೇದಾಂತ್ ಗೆದ್ದುಕೊಂಡಿದ್ದಾರೆ. ಹೀಗೆ ಮಗ ಮಾಡಿದ ಸಾಧನೆಯ ಕುರಿತಂತೆ ಮಾಧವನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೊಂದು ಪೋಸ್ಟ್ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಮಾಧವನ್ ತಮ್ಮ ಪೋಸ್ಟ್ ನಲ್ಲಿ, ನಾನು ಉತ್ತಮವಾಗಿರುವ ಎಲ್ಲದರಲ್ಲೂ ನನ್ನನ್ನು ಸೋಲಿಸಿದ್ದಕ್ಕಾಗಿ, ನನಗೆ ಅಸೂಯೆ ಉಂಟುಮಾಡಿದ್ದಕ್ಕಾಗಿ ಧನ್ಯವಾದಗಳು.
ನನ್ನ ಹೃದಯವು ಹೆಮ್ಮೆಯಿಂದ ಉಬ್ಬುತ್ತದೆ.

ನನ್ನ ಹುಡುಗ ನಿನ್ನಿಂದ ತುಂಬಾ ಕಲಿಯಬೇಕು. ನೀವು ಪುರುಷತ್ವದ ಹೊಸ್ತಿಲಲ್ಲಿ ಹೆಜ್ಜೆ ಹಾಕುತ್ತಿರುವಾಗ, ನಾನು ನಿಮಗೆ 16 ನೇ ಜನ್ಮದಿನದ ಶುಭಾಶಯಗಳನ್ನು ಕೋರಲು ಬಯಸುತ್ತೇನೆ ಮತ್ತು ನಾನು ನಿನಗೆ ನೀಡಲು ಸಾಧ್ಯವಾಗುವುದಕ್ಕಿಂತ ಉತ್ತಮವಾದ ಜೀವನವನ್ನು ಪಡೆಯಲು ನಿನಗೆ ಸಾಮರ್ಥ್ಯ ಇದೆ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ನಾನೊಬ್ಬ ಅದೃಷ್ಟವಂತ ತಂದೆ ಎಂದು ಬರೆದುಕೊಂಡಿದ್ದಾರೆ. ಮಾಧವನ್ ಅವರ ಈ ಪೋಸ್ಟ್ ಗೆ ಬಹಳಷ್ಟು ಜನ ಉತ್ತರ ನೀಡಿ ಶುಭ ಹಾರೈಸಿದ್ದಾರೆ.

Leave a Comment