ಮಗುವನ್ನು ನಿದ್ರೆಯಿಂದ ಎಬ್ಬಿಸುತ್ತಿದ್ದ ನಾಯಿ, ಡಿಸ್ಟರ್ಬ್ಬ್ ಅಂದ್ಕೊಂಡ್ರು ತಂದೆ ತಾಯಿ:ಆದ್ರೆ ಅಲ್ಲಿ ನಡೆದಿದ್ದೇ ಬೇರೆ!!!

Written by Soma Shekar

Published on:

---Join Our Channel---

ಸಾಕು ಪ್ರಾಣಿಗಳು ತಮ್ಮ ಮೇಲೆ ಪ್ರೀತಿ ತೋರಿಸಿ, ಆರೈಕೆ ಮಾಡುವ ತಮ್ಮ ಮಾಲೀಕರ ಮೇಲೆ, ಅವರ ಕುಟುಂಬದ ಮೇಲೆ ಎಷ್ಟು ಪ್ರೀತಿ ಹಾಗೂ ನಿಷ್ಠೆಯನ್ನು ಹೊಂದಿರತ್ತವೆ ಎನ್ನುವುದನ್ನು ತೋರಿಸುವ ಅನೇಕ ಘಟನೆಗಳು ಈಗಾಗಲೇ ನಡೆದು, ಅವುಗಳ ನಿಸ್ವಾರ್ಥ ಪ್ರೀತಿಯನ್ನು ಸಾಬೀತು ಮಾಡಿದೆ. ಪ್ರಸ್ತುತ ಟ್ವಿಟರ್ ಬಳಕೆದಾರರೊಬ್ಬರು ತಾವು ಸಾಕಿದ ನಾಯಿ ತಮ್ಮ ಮಗುವಿನ ಪ್ರಾಣವನ್ನು ಹೇಗೆ ಉಳಿಸಿತು ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ಒಂದು ಅಪರೂಪದ ಘಟನೆಯಾಗುವ ಜೊತೆಗೆ ಜನರು ಇದಕ್ಕೆ ಮೆಚ್ಚುಗೆಯನ್ನು ಸಹಾ ನೀಡುತ್ತಿದ್ದಾರೆ.

ಕೆಲ್ಲಿ ಆ್ಯಂಡ್ರೂ ಎನ್ನುವ ಹೆಸರಿನ ಮಹಿಳೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ರಾತ್ರಿ ನಮ್ಮ ನಾಯಿ ನರ್ಸರಿಗೆ ನುಗ್ಗಿ ಮಗುವನ್ನು ಎಬ್ಬಿಸುತ್ತಲೇ ಇತ್ತು. ಅದು ಏಕೆ ಹಾಗೆ ಮಾಡುತ್ತಿದೆ ಎಂದು ಅರ್ಥವಾಗಲಿಲ್ಲ. ಅಲ್ಲದೇ ಮಗುವನ್ನು ಅದು ಪದೇ ಪದೇ ಎಬ್ಬಿಸುತ್ತಿದ್ದುದನ್ನು ನೋಡಿ ನನಗೆ ಕೋಪ ಕೂಡಾ ಬಂದಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲೇ ನಮಗೆ ನಾಯಿ ಹಾಗೆ ಏಕೆ ಮಾಡುತ್ತಲಿತ್ತು ಎನ್ನುವುದು ಅರ್ಥವಾಯಿತು ಎಂದು ಕೆಲ್ಲಿ ಹೇಳಿದ್ದಾರೆ ಹಾಗೂ ಅಸಲಿಗೆ ಏನು ನಡೆದಿತ್ತು ಎನ್ನುವುದನ್ನು ಆಕೆ ವಿವರಿಸಿದ್ದಾರೆ.

ನಮ್ಮ ಮಗುವಿಗೆ ಉಸಿರಾಡುವುದು ಕಷ್ಟವಾಗಿತ್ತು. ಅದಕ್ಕೆ ನಾಯಿ ತನ್ನ ತಲೆಯಿಂದ ನೂಕಿ ನೂಕಿ ಮಗುವನ್ನು ಎಬ್ಬಿಸುವ ಮೂಲಕ ನಮಗೆ ಅದನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಿತ್ತು. ವಿಷಯ ಅರ್ಥವಾದ ಕೂಡಲೇ ನಾವು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು, ರಾತ್ರಿ ಪೂರ್ತಿ ನಾವು ಮಗುವಿನ ಜೊತೆಯಲ್ಲೇ ಆಸ್ಪತ್ರೆಯಲ್ಲಿ ಇದ್ದೆವು. ಮಗುವಿಗೆ ಸೂಕ್ತ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ನೀಡಲಾಯಿತು ಎಂದಿದ್ದಾರೆ.

ನಾವು ಸಾಕಿದ ನಾಯಿ ಮಗುವನ್ನು ಎಬ್ಬಿಸುವ ಪ್ರಯತ್ನವನ್ನು ಏನಾದರೂ ಮಾಡದೇ ಹೋಗಿದ್ದರೆ ನಿಜಕ್ಕೂ ಎಂತಹ ಅ ನಾ ಹು ತ ನಡೆದಿರುತ್ತಿತ್ತು ಎನ್ನುವುದನ್ನು ನಾವು ಊಹೆ ಮಾಡಲು ಕೂಡಾ ಸಾಧ್ಯವಿಲ್ಲ. ಆದರೆ ನಮ್ಮ ಸಾಕು ನಾಯಿ ಇಂದು ನಮ್ಮ ಮಗುವಿನ ಪ್ರಾಣ ಉಳಿಸಿತು ಎಂದು ಕೆಲ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Leave a Comment