ಟಾಲಿವುಡ್ ನ ಕ್ಯೂಟ್ ಕಪಲ್, ಸ್ವೀಟ್ ಜೋಡಿ ಎಂದೆಲ್ಲಾ ಕರೆಸಿಕೊಂಡಿದ್ದ ಸಮಂತಾ, ನಾಗಚೈತನ್ಯ ತಮ್ಮ ವಿಚ್ಛೇದನದ ಘೋಷಣೆ ಮಾಡಿಯಾಗಿದೆ. ಅವರು ವಿಚ್ಛೇದನದ ಘೋಷಣೆಯನ್ನು ಮಾಡಿಯಾಗಿದೆ. ಆದರೆ ಅವರ ವಿಚ್ಛೇದನದ ವಿಷಯ ಮಾತ್ರ ಇನ್ನೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಅವರ ವಿಚ್ಛೇದನದ ಬಗ್ಗೆ ನಡೆದಿದ್ದ ಚರ್ಚೆಗಳಿಗೆ ಮೂರು ದಿನಗಳ ಹಿಂದೆ ಅಧಿಕೃತ ಉತ್ತರ ದೊರೆತರೂ ಅದಾದ ನಂತರ ಬಹಳಷ್ಟು ಹೊಸ ಹೊಸ ವಿಷಯಗಳು ಹೊರಗೆ ಬರುತ್ತಿವೆ.
ವಿಚ್ಛೇದನದ ವಿಷಯವೇನೋ ಹೊರ ಬಂತು, ಆದರೆ ಅದಕ್ಕೆ ಕಾರಣವೇನು ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ ಅವರ ಈ ನಿರ್ಧಾರಕ್ಕೆ ಕಾರಣಗಳೆಂದು ಮಾದ್ಯಮಗಳಲ್ಲಿ ಸಾಕಷ್ಟು ವಿಷಯಗಳು ಸಹಾ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ. ಅಲ್ಲದೇ ಕೆಲವು ಸೆಲೆಬ್ರಿಟಿಗಳು ಸಹಾ ಈ ವಿಷಯದ ಬಗೆಗೆ ತಮ್ಮದೇ ಆದ ಅಭಿಪ್ರಾಯ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ಈಗ ಎಲ್ಲವುಗಳ ನಡುವೆ ಹೊಸ ವಿಷಯವೊಂದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.
ಹೌದು ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಘೋಷಣೆ ಮಾಡಿದ ಮೇಲೆ ಮೊದಲ ಬಾರಿಗೆ ನಟಿ ಸಮಂತಾ ಅವರ ತಂದೆ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾತುಗಳನ್ನು ಕೇಳಿದವರಿಗೆ ಈ ವಿಷಯ ಅವರಿಗೆ ತಿಳಿದೇ ಇರಲಿಲ್ಲವೇ ಎನ್ನುವ ಪ್ರಶ್ನೆ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಸಮಂತಾ ಅವರ ತಂದೆ, ಅವರಿಬ್ಬರು ಬೇರೆ ಬೇರೆಯಾಗುತ್ತಿದ್ದಾರೆ ಎನ್ನುವ ವಿಚಾರ ತಿಳಿದ ಕ್ಷಣದಿಂದ ನನ್ನ ಮನಸ್ಸು ಸ್ತಬ್ದವಾಗಿದೆ ಎಂದಿದ್ದಾರೆ.
ಈ ಸಮಯದಲ್ಲಿ ನನಗೇನೂ ತೋಚುತ್ತಿಲ್ಲ ಎಂದಿರುವ ಅವರು, ಮಗಳ ಬಳಿ ಈ ವಿಷಯವಾಗಿ ತಾನು ಮಾತನಢುವುದಾಗಿ ಹಾಗೂ ಆಕೆಗೆ ವಿಚ್ಛೇದನದ ತನ್ನ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಹೇಳುತ್ತೇನೆ ಎಂದಿದ್ದಾರೆ. ಅಲ್ಲದೇ ಅವರು ಸದ್ಯದಲ್ಲೇ ಎಲ್ಲವೂ ಸರಿಹೋಗುವ ವಿಶ್ವಾಸವಿದೆ ಎನ್ನುವ ಮಾತನ್ನು ಸಹಾ ಹೇಳಿರುವುದು ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡಿದೆ.
ಸಮಂತಾ ಅವರ ತಂದೆ ಜೋಸೆಫ್ ಪ್ರಭು ಅವರು ಮೇಲಿನ ವಿಚಾರಗಳನ್ನು ಹೇಳಿಕೊಂಡಿದ್ದು, ಅವರ ಈ ಹೇಳಿಕೆಯ ನಂತರ ತಮ್ಮ ಮಗಳ ಜೀವನದ ಬಗ್ಗೆ ಸಮಂತಾ ಅವರ ತಂದೆಗೆ ಈ ವಿಷಯಗಳು ಯಾವುದೂ ತಿಳಿದಿರಲಿಲ್ಲವೇ, ಮಾದ್ಯಮಗಳಲ್ಲಿ ಇಷ್ಟೆಲ್ಲಾ ಸುದ್ದಿಗಳಾದರೂ ಅವರು ಗಮನ ನೀಡಿರಲಿಲ್ಲವೇ ಎನ್ನುವ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ.