ಮಗಳ ಮದುವೆಯಲ್ಲೇ 5 ಬಡ ಹೆಣ್ಣು ಮಕ್ಕಳಿಗಾಗಿ ಈ ತಂದೆ ಮಾಡಿದ ಮಾನವೀಯ ಕಾರ್ಯ ನೋಡಿ! ಮಾನವೀಯತೆ ಧರ್ಮಾತೀತ!!

Written by Soma Shekar

Published on:

---Join Our Channel---

ಭಾರತದಂತಹ ಸಂಪ್ರದಾಯಬದ್ಧ ದೇಶದಲ್ಲಿ ಹೆಣ್ಣು ಮಕ್ಕಳನ್ನು ಹೆತ್ತು, ಹೊತ್ತವರು ‌ಮೊದಲ ಆದ್ಯತೆಯನ್ನು ನೀಡುವುದು ತಮ್ಮ‌ ಹೆಣ್ಣು ಮಕ್ಕಳ ಮದುವೆಗೆ. ಅದರಲ್ಲೂ ಬಡವರು ಮತ್ತು ಮದ್ಯಮ ವರ್ಗದ ಕುಟುಂಬಗಳಲ್ಲಿ ಪೋಷಕರು ಮಗಳ ಮದುವೆಯ ತಯಾರಿಯನ್ನು ವರ್ಷಗಳ ಮೊದಲಿನಿಂದಲೇ ಆರಂಭಿಸಿ ಬಿಡುತ್ತಾರೆ. ಅಲ್ಲದೇ ಬಡವರು ಸಾಲ ಸೋಲ ಮಾಡಿ ಹೆಣ್ಣು ಮಕ್ಕಳ ಮದುವೆ ಮಾಡುತ್ತಾರೆ. ಕಾಲ ಬದಲಾದರೂ ಕೆಲವು ಆಲೋಚನೆಗಳು ಹಾಗೂ ಆಚರಣೆಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಎನ್ನುವುದು ಮಾತ್ರ ಇನ್ನೂ ಮೂಡಿಲ್ಲ.

ಇಂದಿಗೂ ಸಹಾ ಬಡವರು ಮಗಳ ಮದುವೆ ಎಂದಾಗ ಚಿಂತೆಗೀಡಾಗುತ್ತಾರೆ. ಆದರೆ ಉಳ್ಳವರು ಅದ್ದೂರಿಯಾಗಿ ಮದುವೆಯನ್ನು ಮಾಡಿಸಿ ಸಂಭ್ರಮಿಸುತ್ತಾರೆ. ಆದರೆ ಕೇರಳದಲ್ಲಿ ಮಾತ್ರ ಒಬ್ಬ ವ್ಯಕ್ತಿಯು ತಮ್ಮ ಮಗಳ ಮದುವೆಯ ಜೊತೆಯಲ್ಲೇ ಐದು ಜನ ಬಡ ಹೆಣ್ಣು ಮಕ್ಕಳ ಮದುವೆಯನ್ನು ಸಹಾ ಮಾಡಿಸಿದ್ದಾರೆ. ಅವರ ಈ ಉತ್ತಮವಾದ ಕಾರ್ಯವನ್ನು ನೋಡಿ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದ್ದು, ಇಂತಹ ಮಾನವೀಯ ಮೌಲ್ಯಗಳು ಎಲ್ಲರಲ್ಲೂ ಮೂಡಬೇಕು ಎನ್ನುತ್ತಿದ್ದಾರೆ ಜನರು.

ಕೇರಳದ ಕಣ್ಣೂರು ಮೂಲದ ಮುಸ್ಲಿಂ ಸಲೀಂ ಅವರು ತಮ್ಮ‌ ಮಗಳು ರಮೀಸಾ ಮದುವೆಯ ಜೊತೆಯಲ್ಲೇ ವಯನಾಡು, ಎಡಚೆರಿ, ಗುಡಲೂರ್, ಮಲಪ್ಪುರಂ ಮತ್ತು ಮೆಪ್ಪಯ್ಯುರ್ ಮೂಲದ ಬಡ ಕುಟುಂಬಗಳಿಗೆ ಸೇರಿದ ಐದು ಜನ ಯುವತಿಯರಿಗೆ ಮದುವೆಯನ್ನು ಮಾಡಿಸಿದ್ದಾರೆ. ಅಲ್ಲದೇ ಆ ಐದು ಜನ ಯುವತಿಯರಿಗೂ ಅವರವರ ಧರ್ಮಕ್ಕೆ ಅನುಗುಣವಾಗಿ, ಅವರ ಸಂಪ್ರದಾಯದಂತೆ ಮದುವೆಯನ್ನು ಮಾಡಿಸಿದ್ದಾರೆ ಸಲೀಂ ಅವರು.

ಈ ಮದುವೆಗಳ ಮೂಲಕ ಅವರು ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಸಲೀಂ ಅವರು ಐದು ಜನ ಹೆಣ್ಣು ಮಕ್ಕಳಿಗೂ ಹತ್ತು ಸವರನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಲೀಂ ಅವರು ಮಾಡಿದ ಈ ಉತ್ತಮ ಕೆಲಸದ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಮೇಲೆ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿವೆ.

Leave a Comment