ಮಗಳ ಬಾಯ್ ಫ್ರೆಂಡ್ ಗೆ ಖಡಕ್ ಎಚ್ಚರಿಕೆ ನೀಡಿದ ಶಾರೂಖ್ ಖಾನ್: ಇಷ್ಟಕ್ಕೂ ಏನೀ ವಿಷಯ??

Entertainment Featured-Articles Movies News

ಬಾಲಿವುಡ್ ನ ಸ್ಟಾರ್ ನಟ, ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ತಮ್ಮ ಮಗಳ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸುತ್ತಾರೆ. ಮಗಳು ಸುಹಾನಾ ಖಾನ್ ಸಹಾ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಆಕೆಯ ಭವಿಷ್ಯದ ಕುರಿತಾಗಿ ಬಹಳಷ್ಟು ಮುಂಜಾಗ್ರತೆಯನ್ನು ತೆಗೆದುಕೊಳ್ಳುವ ತಂದೆಯಾಗಿದ್ದಾರೆ ಅವರು. ಅಲ್ಲದೇ ಶಾರುಖ್ ಖಾನ್ ತಮ್ಮ ಮಗಳಿಗೆ ಬಾಯ್ ಫ್ರೆಂಡ್ ಆಗುವವನಿಗೆ ಏಳು ಶರತ್ತುಗಳನ್ನು ಸಹಾ ವಿಧಿಸಿದ್ದಾರೆ. ಒಂದು ವೇಳೆ ತಮ್ಮ ಮಗಳಿಗೆ ಅವಳ ಬಾಯ್ ಫ್ರೆಂಡ್ ಕಿಸ್ ಮಾಡಿದರೆ ಆತನ ತುಟಿಗಳನ್ನು ಕತ್ತರಿಸುವೆ ಎನ್ನುವ ಎಚ್ಚರಿಕೆಯನ್ನು ಸಹಾ ನಟ ನೀಡಿದ್ದಾರೆ.

ಮಗಳ ಭವಿಷ್ಯದ ಬಗ್ಗೆ ಅತೀವ ಕಾಳಜಿಯನ್ನು ವಹಿಸುವ ಶಾರುಖ್ ಖಾನ್ ಅವರು ತಮ್ಮ ಮಗಳ ವಿಷಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ಕಟ್ಟುನಿಟ್ಟಾಗಿ ಇದ್ದಾರೆ. ಮಗಳ ಭವಿಷ್ಯದ ಕುರಿತಾಗಿ ತಾನು ಬಹಳಷ್ಟು ಸುಂದರವಾದ ಕನಸುಗಳನ್ನು ಕಟ್ಟಿಕೊಂಡಿರುವುದಾಗಿ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ. ಇದೇ ವೇಳೆ ಅವರು ಮಗನಿಗೆ ಬಾಯ್ ಫ್ರೆಂಡ್ ಆಗುವವನಿಗೆ ಕೆಲವೊಂದು ಸೂಚನೆಗಳನ್ನು ಹಾಗೂ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಮೇ 22 ರಂದು ಸಹನಾ ಖಾನ್ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡರು. ಈ ವೇಳೆ ಮಾತನಾಡಿದ ಶಾರುಖ್ ಖಾನ್ ತನ್ನ ಮಗಳ ಬಾಯ್ ಫ್ರೆಂಡ್ ಆಗುವವನಿಗೆ ಕೆಲವೊಂದು ಖಡಕ್ ಆದ ಷರತ್ತುಗಳನ್ನು ವಿಧಿಸಿದ್ದಾರೆ. ಮಗಳ ಬಾಯ್ ಫ್ರೆಂಡ್ ಒಳ್ಳೆಯ ಕೆಲಸ ಮಾಡಬೇಕು. ಸದಾ ಮಗಳ ಜೊತೆ ಇರಬೇಕು. ಅಲ್ಲದೇ ಒಬ್ಬ ವಕೀಲರನ್ನು ನೇಮಕ ಮಾಡಿಕೊಳ್ಳಬೇಕು. ಮಗಳಿಗೆ ಏನಾದರೂ ಅನಾಹುತ ಮಾಡಿದರೆ ಅದೇ ರೀತಿ ಆತನಿಗೂ ಆಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

ಮಗಳ ವಿಚಾರದಲ್ಲಿ ಈ ಹಿಂದೆ ಬಾಲಿವುಡ್ ನ ಪ್ರಖ್ಯಾತ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಸೆಲೆಬ್ರಿಟಿ ಚಾಟಿಂಗ್ ಶೋ ಕಾಫಿ ವಿತ್ ಕರಣ್ ನಲ್ಲಿ ಕರಣ್ ಜೋಹರ್ ನಟ ಶಾರೂಖ್ ಅವರಿಗೆ, ನಿಮ್ಮ ಮಗಳಿಗೆ ಯಾರಾದರೂ ಕಿಸ್ ಮಾಡಿದರೆ ಏನು ಮಾಡುತ್ತೀರಿ? ಎನ್ನುವ ಪ್ರಶ್ನೆಯನ್ನು ಕೇಳಿದ್ದರು‌‌. ಅದಕ್ಕೆ ಉತ್ತರಿಸಿದ ಶಾರುಖ್ ಖಾನ್ ನಾನು ನನ್ನ ಮಗಳಿಗೆ ಕೇಸ್ ಮಾಡಿದವನ ತುಟಿಯನ್ನು ಕತ್ತರಿಸಿ ಹಾಕುತ್ತೇನೆ ಎನ್ನುವ ಮಾತನ್ನು ಹೇಳಿದ್ದರು. ಈ ಮಾತು ಅವರು ಮಗಳ ಬಗ್ಗೆ ಎಷ್ಟು ಕಟ್ಟುನಿಟ್ಟಾಗಿ ಇದ್ದಾರೆ ಎನ್ನುವುದನ್ನು ತೋರಿಸುತ್ತದೆ.

Leave a Reply

Your email address will not be published.