ಮಗಳ ಬದುಕಿಗಾಗಿ 36 ವರ್ಷ ಪುರುಷನಾಗಿ ಬದುಕಿದ ಈ ತಾಯಿಯ ಬಗ್ಗೆ ತಿಳಿದರೆ ಕೈ ಎತ್ತಿ ಮುಗಿಯುವಿರಿ

Entertainment Featured-Articles News Wonder

ಸ್ತ್ರೀ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂದು ಅದೆಷ್ಟೋ ಮಾತುಗಳನ್ನು ಹೇಳಲಾಗುತ್ತದೆ. ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲಿ ಸಹಾ ಅದ್ಭುತವಾದ ಸಾಧನೆ ಮಾಡಿದ್ದಾರೆ‌. ಆದರೂ ಇನ್ನೂ ಅದೆಷ್ಟೋ ಜನ ಮಹಿಳೆಯರು ಇಂದಿಗೂ ಸಹಾ ಸ್ವತಂತ್ರದ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ಇದೆ ಎನ್ನುವುದು ಸಹಾ ವಾಸ್ತವವಾಗಿದೆ. ಹೌದು, ಸಮಾಜದಲ್ಲಿ ಎದುರಾದ ಅಮಾನುಷ ಪರಿಸ್ಥಿತಿಯನ್ನು ನಿಭಾಯಿಸಲು 57 ರ ಮಹಿಳೆ ಕಳೆದ 36 ವರ್ಷಗಳಿಂದ ಗಂಡಿನಂತೆ ಜೀವನ ನಡೆಸಿರುವ ಭಾವನಾತ್ಮಕ ಘಟನೆಯೊಂದು ಬಹಿರಂಗವಾಗಿದೆ.

ತಮಿಳು ನಾಡಿನ ಕಾಟು ನಾಯಕನ ಹಟ್ಟಿ ನ ನಿವಾಸಿಯಾದ ಪಚ್ಚಿಯಮ್ಮಾಳ್ ಇಂತಹ ಒಂದು ಜೀವನವನ್ನು ನಡೆಸಿದ್ದಾರೆ. ಪಚ್ಚಿಯಮ್ಮಾಳ್ ಗೆ ಅವರ 20 ನೇ ವಯಸ್ಸಿನಲ್ಲಿ ಮದುವೆಯಾಯಿತು. ಆದರೆ ದುರಾದೃಷ್ಟವಶಾತ್ ಆಕೆ ಮದುವೆಯಾದ 15 ದಿನಗಳಲ್ಲೇ ಆಕೆಯ ಪತಿ ನಿಧನರಾದರು. ಪತಿ ವಿಯೋಗದ ನಂತರ ಪಚ್ಚಿಯಮ್ಮಾಳ್ ಅವರ ಜೀವನದಲ್ಲಿ ಸಮಸ್ಯೆಗಳು ಎದುರಾದವು. ಒಂದು ಹೆಣ್ಣು ಮಗುವಿನ ತಾಯಿ ಆದರು ಪಚ್ಚಿಯಮ್ಮಾಳ್. ಒಂಟಿಯಾಗಿ ಮಗುವಿನ ಲಾಲನೆ ಪಾಲನೆ ಆಕೆಯ ಹೊಣೆಗಾರಿಕೆಯಾಗಿತ್ತು.

ಮಗುವಿನ ಜೊತೆಗೆ ತನ್ನ ಜೀವನದ ನಿರ್ವಹಣೆಗಾಗಿ ಆಕೆ ಕೆಲಸವನ್ನು ಮಾಡುವುದು ಅನಿವಾರ್ಯವಾಗಿತ್ತು. ಆದರೆ ಗ್ರಾಮದಲ್ಲಿ ಪುರುಷರಿಂದ ಲೈಂ ಗಿ ಕ ಕಿರುಕುಳ ಎದುರಾಯಿತು. ಇದರಿಂದ ಬೇಸತ್ತ ಪಚ್ಚಿಯಮ್ಮಾಳ್ ಅವರು ಅಂದೇ ಒಂದು ನಿರ್ಧಾರವನ್ನು ಮಾಡಿದರು. ಇನ್ನು ಮುಂದೆ ತನ್ನ ಮಗುವಿಗಾಗಿ ತಾನು ಹೆಣ್ಣಾಗಿ ಅಲ್ಲ, ಬದಲಾಗಿ ಗಂಡಾಗಿ ಜೀವನವನ್ನು ನಡೆಸಬೇಕೆಂದು ಆಕೆ ದೃಢ ನಿರ್ಧಾರವನ್ನು ಮಾಡಿದರು. ಆಕೆ ಸ್ತ್ರೀ ಯಂತೆ ವಸ್ತ್ರ ಧರಿಸುವುದನ್ನು ಬಿಟ್ಟರು.

ಪಚ್ಚಿಯಮ್ಮಾಳ್ ಗಂಡಿನ ಹಾಗೆ ಕೂದಲು ಕತ್ತರಿಸಿ ಕೊಂಡರು, ಸೀರೆ ಬದಲು ಟೀ ಶರ್ಟ್, ಲುಂಗಿ ಧರಿಸಿದರು. ಹೆಸರನ್ನು ಸಹಾ ಬದಲಿಸಿಕೊಂಡು ಮುತ್ತು ಎಂದಾದರು. ಅನಂತರ ಆಕೆ ಹೊಟೇಲ್ ಗಳಲ್ಲಿ, ಟೀ ಅಂಗಡಿಗಳಲ್ಲಿ ಕೆಲಸ ಮಾಡಿ ಮಗಳನ್ನು ಸಾಕಿದರು. ಮುತ್ತು ಎನ್ನುವ ಹೆಸರಿನಲ್ಲೇ ಆಧಾರ್ ಕಾರ್ಡ್ ಪಡೆದರು, ಬ್ಯಾಂಕ್ ಖಾತೆ ತೆರೆದರು. ಹೀಗೆ ಕಳೆದ 36 ವರ್ಷಗಳಿಂದ ಅವರು ಪುರುಷನಂತೆ ಬದುಕು ನಡೆಸುತ್ತಿದ್ದು, ಆಕೆ ಒಬ್ಬ ಮಹಿಳೆ ಎನ್ನುವುದು ಅವರ ಮಗಳಿಗೆ ಮಾತ್ರವೇ ತಿಳಿದಿತ್ತು.

ಪಚ್ಚಿಯಮ್ಮಾಳ್ ಅವರ ಮಗಳು ಷಣ್ಮುಗ ಸುಂದರಿಗೆ ಈಗ ಮದುವೆಯಾಗಿದೆ. ಆಕೆಯ ಜೀವನಕ್ಕೆ ಒಂದು ಭದ್ರತೆ ದೊರೆತಿದೆ. ಆದರೆ ಪಚ್ಚಿಯಮ್ಮಾಳ್ ಅವರು ತಮ್ಮ ಗುರುತನ್ನು ಮತ್ತೆ ಮಹಿಳೆಯಾಗಿ ಬದಲಾಯಿಸಲು ಇಚ್ಛಿಸಿಲ್ಲ. ಬದಲಾಗಿ ಮಗಳ ಜೀವನಕ್ಕೊಂದು ನೆಲೆಯನ್ನು ನೀಡಲು ತನ್ನ ಬದುಕಲ್ಲಿ ಒಂದು ಹೊಸ ಬೆಳಕಿಗೆ ಕಾರಣವಾದ ಪುರುಷನ ಗುರುತನ್ನು ಬಿಡಲು ಆಕೆ ಸಿದ್ಧವಿಲ್ಲ. ಏನೇ ಆದರೂ ಮಗಳಿಗಾಗಿ ಪುರುಷನಂತೆ ಬದುಕಿದ ಈ ಮಾತೃ ಮೂರ್ತಿಗೆ ಕೈ ಎತ್ತಿ ಮುಗಿಯಲೇ ಬೇಕು.

Leave a Reply

Your email address will not be published. Required fields are marked *