ಮಗಳ ಬಗ್ಗೆ ಟ್ರೋಲ್ ಮಾಡಿದ್ರೆ ಎಚ್ಚರ: ಟ್ರೋಲಿಗರಿಗೆ ಖಡಕ್ ಎಚ್ಚರಿಕೆ ನೀಡಿದ ಅಭಿಷೇಕ್ ಬಚ್ಚನ್

Written by Soma Shekar

Published on:

---Join Our Channel---

ಸಿನಿಮಾ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಹಜವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ಟ್ರೋಲ್ ಪೇಜ್ ಗಳು ಸಕ್ರಿಯವಾಗಿವೆ. ಸೆಲೆಬ್ರಿಟಿಗಳು ಧರಿಸುವ ವಸ್ತ್ರಗಳು, ಅವರು ಆಡುವ ಮಾತುಗಳು, ನೀಡುವ ಹೇಳಿಕೆಗಳು ಹೀಗೆ ಹತ್ತು ಹಲವು ವಿಚಾರಗಳನ್ನು ಇಟ್ಟುಕೊಂಡು ನಟ, ನಟಿಯರನ್ನು ಟ್ರೋಲ್ ಮಾಡಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಟ್ರೋಲ್ ಮಾಡುವವರು ಈ ಸೆಲೆಬ್ರಿಟಿಗಳ ಮಕ್ಕಳು ಹಾಗೂ ಅವರ ಕುಟುಂಬದವರನ್ನು ಸಹಾ ಟ್ರೋಲ್ ಮಾಡಿದಾಗ, ನಟ, ನಟಿಯರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ.

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಹೊಸ ಸಿನಿಮಾ ಬಾಬ್ ಬಿಸ್ವಾಸ್ ಪ್ರಚಾರದ ವೇಳೆ ನಡೆದಂತಹ ಸಂದರ್ಶನದಲ್ಲಿ, ಸಂದರ್ಶನಕಾರರು ಅವರನ್ನು ತಮ್ಮ ಹತ್ತು ವರ್ಷದ ಮಗಳು ಆರಾಧ್ಯ ಬಚ್ಚನ್ ಅವರನ್ನು ಟ್ರೋಲ್ ಮಾಡುವ ಕಿಡಿಗೇಡಿಗಳಿಗೆ ಏನು ಹೇಳುತ್ತೀರಿ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರವನ್ನು ನೀಡಿದ ಅಭಿಷೇಕ್ ಬಚ್ಚನ್ ಅವರು ತಮ್ಮ ಮಗಳನ್ನು ಟ್ರೋಲ್ ಮಾಡುವವರಿಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.

ಅಭಿಷೇಕ್ ಬಚ್ಚನ್ ಅವರು ಮಾತನಾಡುವಾಗ, ನಾನೊಬ್ಬ ಸೆಲೆಬ್ರಿಟಿ, ನನ್ನ ಬಗ್ಗೆ ಟ್ರೋಲ್ ಮಾಡಿದರೆ ಏನೂ ಸಮಸ್ಯೆ ಇಲ್ಲ. ಆದ್ರೆ ನನ್ನ ಮಗಳ ಬಗ್ಗೆ ಟ್ರೋಲ್ ಮಾಡಿದ್ರೆ ನಾನು ಸಹಿಸಲ್ಲ. ಸೆಲೆಬ್ರಿಟಿಗಳು ಅಂದ್ರೆ ಟ್ರೋಲ್ ಆಗೋದು ಸಹಜ. ಆದರೆ ಯಾವುದೇ ಕಾರಣಕ್ಕೂ ಸಹಾ ಕುಟುಂಬದವರನ್ನು ಟ್ರೋಲ್ ಮಾಡಬಾರದು ಎನ್ನುವ ಮಾತನ್ನು ಹೇಳಿದ್ದಾರೆ.

ನೀವು ನಿಜವಾಗಿಯೂ ಏನನ್ನಾದರೂ ಹೇಳಬೇಕು ಎನ್ನುವುದಾದರೆ ನನ್ನ ಮುಂದೆ ಬನ್ನಿ. ತಾಕತ್ತಿದ್ದರೆ ನನ್ನ ಮುಂದೆ ಹೇಳಿ ನನ್ನನ್ನು ಫೇಸ್ ಮಾಡಿ ಎಂದು ಅಭಿಷೇಕ್ ಬಚ್ಚನ್ ಅವರು ಹೇಳಿದ್ದಾರೆ ಒಂದು ರೀತಿಯಲ್ಲಿ ಅವರು ಪರೋಕ್ಷವಾಗಿ ಖಡಕ್ ಎಚ್ಚರಿಕೆಯ ಸಂದೇಶವನ್ನು ಈ ಮೂಲಕ ಟ್ರೋಲ್ ಮಾಡುವವರಿಗೆ ರವಾನಿಸಿದ್ದಾರೆ ಅಭಿಷೇಕ್ ಬಚ್ಚನ್.

Leave a Comment