ಮಗಳ ಜನ್ಮದಿನಕ್ಕೆ ಮಾಲ್ಡೀವ್ಸ್ ನಲ್ಲಿ ಐಶ್ ದಂಪತಿ ತಂಗಿದ್ದ ರೆಸಾರ್ಟ್ ನ 1 ದಿನದ ಬಾಡಿಗೆ ಎಷ್ಟು ಗೊತ್ತಾ??

Written by Soma Shekar

Published on:

---Join Our Channel---

ಬಾಲಿವುಡ್ ನ ಸ್ಟಾರ್ ದಂಪತಿ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ದಂಪತಿ ತಮ್ಮ ಮಗಳು ಆರಾಧ್ಯ ಬಚ್ಚನ್ ಹತ್ತನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮಗಳ ಜನ್ಮದಿನವನ್ನು ಸಂಭ್ರಮಿಸುವ ಸಲುವಾಗಿ ಮಾಲ್ಡೀವ್ಸ್ ನ ಐಶಾರಾಮೀ ರೆಸಾರ್ಟ್ ನ ವಿಲ್ಲಾದಲ್ಲಿ ಮೊಕ್ಕಾಂ ಹೂಡಿದ್ದು, ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಸಹಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಾವು ತಂಗಿರುವ ರೆಸಾರ್ಟ್ ನ ಸುಂದರವಾದ ಫೋಟೋ ಗಳನ್ನು ಶೇರ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆಯುವುದರ ಜೊತೆಗೆ ತಮ್ಮ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ದಂಪತಿಯ ಮಗಳಿಗೆ ಇದೇ ನವೆಂಬರ್ 16 ಕ್ಕೆ ಹತ್ತು ವರ್ಷ ತುಂಬಿದೆ. ಇದೇ ಕಾರಣದಿಂದ ಮಗಳ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಮೂವರು ಸಹಾ ಮಾಲ್ಡೀವ್ಸ್ ಒಂದು ಬಹಳ ದುಬಾರಿ ಮತ್ತು ಐಶಾರಾಮೀ ರೆಸಾರ್ಟ್ ವಿಲ್ಲಾ ನಲ್ಲಿ ವಾಸ್ತವ್ಯ ಹೂಡಿದ್ದರು. ಈಗ ಸುದ್ದಿಯಾಗಿರುವುದು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಉಳಿದುಕೊಂಡಿರುವ ರೆಸಾರ್ಟ್‌ ನ ಬಾಡಿಗೆ ಆಗಿದೆ.

ಹೌದು ಬಾಲಿವುಡ್ ನ ಈ ಸ್ಟಾರ್ ದಂಪತಿ ಉಳಿದುಕೊಂಡಿರುವ ಐಶಾರಾಮೀ ರೆಸಾರ್ಟ್ ವಿಲ್ಲಾ ದಲ್ಲಿ ಒಂದು ದಿನದ ಬಾಡಿಗೆ ಬರೋಬ್ಬರಿ 10 ಲಕ್ಷ ರೂಪಾಯಿಗಳಾಗಿವೆ. ರೆಸಾರ್ಟ್ ನ ಪ್ರತಿಯೊಂದು ವಿಲ್ಲಾದಲ್ಲೂ ಸಹಾ ಒಂದೊಂದು ಪ್ರತ್ಯೇಕವಾದ ಸ್ವಿಮ್ಮಿಂಗ್ ಪೂಲ್ ಇದೆ. ಅಲ್ಲದೇ ಈ ಐಶಾರಾಮೀ ರೆಸಾರ್ಟ್ ನಲ್ಲಿ ರೀಫ್ ವಾಟರ್ ಪೂಲ್ ವಿಲ್ಲಾ, ಸನ್ ಸೆಟ್ ವಾಟರ್ ಪೂಲ್ ವಿಲ್ಲಾ, ಲಗೂನ್ ವಾಟರ್ ಪೂಲ್ ವಿಲ್ಲಾ, ಮಲ್ಟಿ ಬೆಡ್ ರೂಂ ರೆಸಿಡೆನ್ಸೀಸ್ ಹೀಗೆ ಹಲವು ಸೌಲಭ್ಯಗಳು ಲಭ್ಯವಿದೆ ಎನ್ನಲಾಗಿದೆ.

Leave a Comment