ಮಗನ ಹೆಸರಿನ ಬಗ್ಗೆ ಹರಡಿದ್ದ ಸುದ್ದಿಗಳಿಗೆ ಬ್ರೇಕ್ ಹಾಕಿದ ಮೇಘನಾ ರಾಜ್: ಹಂಚಿಕೊಂಡಿದ್ದಾರೆ ವಿಶೇಷ ವೀಡಿಯೋ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನ ಜನಪ್ರಿಯ ನಟಿ ಮೇಘನಾ ರಾಜ್ ಅವರು ಅಪಾರವಾದ ಅಭಿಮಾನಿಗಳನ್ನು ಹೊಂದಿರುವಂತಹ ನಟಿಯಾಗಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಮೇಘನಾ ಅವರು ಆಗಾಗ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮುದ್ದು ಮಗನೊಡನೆ ಸಂತೋಷದ ದಿನಗಳನ್ನು ಕಳೆಯುತ್ತಿರುವ ಕ್ಷಣಗಳನ್ನು ಅಭಿಮಾನಿಗಳ ಜೊತೆಗೆ ಸಂಭ್ರಮಿಸುತ್ತಾರೆ. ಇನ್ನು ಜೂನಿಯರ್ ಚಿರು ನಾಮಕರಣ ಯಾವಾಗ? ಮಗನಿಗೆ ಅವರು ಏನೆಂದು ಹೆಸರಿಡುವರು?? ಎಂದು ಬಹಳ ದಿನಗಳಿಂದ ಅಭಿಮಾನಿಗಳು ಅವರನ್ನು ಪ್ರಶ್ನಿಸುತ್ತಲೇ ಬರುತ್ತಿದ್ದಾರೆ. ಅಲ್ಲದೇ ಮೇಘನಾ ತಮ್ಮ ಮಗನಿಗೆ ಯಾವ ಹೆಸರನ್ನು ಇಡುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಇದೆ. ಅಲ್ಲದೆ ಈಗಾಗಲೇ ಮೇಘನಾ ಅವರ ಮಗನಿಗೆ ಅರ್ಜುನ್ ಸರ್ಜಾ, ಧೃವ ಸರ್ಜಾ ಅವರೇ ಹೆಸರನ್ನು ಇಟ್ಟಿದ್ದಾರೆಂದು ಕೂಡಾ ಸುದ್ದಿಗಳಾಗಿದ್ದು ಉಂಟು. ಆದರೆ ಈಗ ಇಂತಹ ಸುದ್ದಿಗಳಿಗೆ ಬ್ರೇಕ್ ಹಾಕಲು ಮೇಘನರಾಜ್ ಸಜ್ಜಾಗಿದ್ದಾರೆ.

ಮೇಘನರಾಜ್ ಅವರು ತಮ್ಮ ಮಗನ ಹೆಸರನ್ನು ರಿವಿಲ್ ಮಾಡುವ ದಿನಾಂಕವನ್ನು ವಿಶಿಷ್ಟ ರೀತಿಯಲ್ಲಿ ವೀಡಯೋ ಮೂಲಕ ಹಂಚಿಕೊಂಡಿದ್ದಾರೆ. ಹೌದು ಮೇಘನಾ ಅವರು ಒಂದು ಸುಂದರವಾದ ವಿಡಿಯೋ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಅವರು ಕುಟುಂಬಸ್ಥರು, ಸಿನಿಮಾದ ಆಪ್ತವಲಯ ಹಾಗೂ ಅಭಿಮಾನಿಗಳು ತಮ್ಮ ಮಗನನ್ನು ಕರೆಯುವ ಎಲ್ಲಾ ಹೆಸರುಗಳನ್ನು ಒಟ್ಟುಗೂಡಿಸಿ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮುದ್ದು ಮಗನಿಗೆ 10 ತಿಂಗಳು ತುಂಬಿದ ನಂತರ ಅವರು ಮಗನ ನಾಮಕರಣಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ನಾಳೆ ಬೆಂಗಳೂರಿನ ಸೈಂಟ್ ಆ್ಯಂಟನಿ ಚರ್ಚ್ ನಲ್ಲಿ ನಾಮಕರಣ ನಡೆಯಲಿದೆ ಎಂದು ತಿಳಿದುಬಂದಿದೆ.

ಮಗನ ನಾಮಕರಣದ ವಿಷಯವಾಗಿ ಮೇಘನಾ ಅವರು, ಪ್ಯಾರಡೈಸ್ ಗೇಟ್ ಓಪನ್ ಮಾಡೋಣ. ನಮ್ಮ ಲಿಟಲ್ ಪ್ರಿನ್ಸ್‌ಗೆ ಈಗ ಹೆಸರು ಆಯ್ಕೆ ಮಾಡಲಾಗಿದೆ. ಪ್ರತಿ ಸಲ ಜ್ಯೂನಿಯರ್ C ಬಗ್ಗೆ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳು ‘ಏನ್ ಹೆಸರು ಜ್ಯೂನಿಯರ್‌ದು’ ಅಂತ. ಈಗ ಕಿಂಗ್ ತಮ್ಮ ಪ್ರಿನ್ಸ್ ಹೆಸರು ಸೆಲೆಕ್ಟ್ ಮಾಡಿದ್ದಾರೆ. ಸೆಪ್ಟೆಂಬರ್ 3 ರಂದು ಹೆಸರು ರಿವೀಲ್ ಮಾಡುತ್ತಿರುವೆ ಎಂದು ಬರೆದುಕೊಂಡಿದ್ದಾರೆ. ಅವರು ಶೇರ್ ಮಾಡಿರುವ ವಿಡಿಯೋದಲ್ಲಿ ಮಗ ಹುಟ್ಟಿದ ದಿನಾಂಕ ಹಾಗೂ ನಟ ಚಿರಂಜೀವಿ ಸರ್ಜಾ ಅವರೊಂದಿಗೆ ಚರ್ಚ್ ನಲ್ಲಿ ಉಂಗುರ ಬದಲಾಯಿಸಿಕೊಂಡು ವಿವಾಹ ಜೀವನಕ್ಕೆ ಕಾಲಿಟ್ಟ ಮಧುರವಾದ ಕ್ಷಣ, ತಾವು ಮತ್ತು ಚಿರು ಒಂದೇ ರೀತಿಯ ಡ್ರೆಸ್ ಧರಿಸಿರುವ ವಿಡಿಯೋ ಅನಂತರ ಜೂನಿಯರ್ ಚಿರುವನ್ನು ಕರೆಯಲಾಗುವ ವಿವಿಧ ಹೆಸರುಗಳನ್ನು ತೋರಿಸಲಾಗಿದೆ.

Leave a Comment