ಮಗನ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ, ಕಾಲೆಳೆದ ಶಾರೂಖ್ ಖಾನ್: ಸಿನಿಮಾಕ್ಕೆ ಬರುವ ಮೊದಲೇ ಆರ್ಯನ್ ಸ್ಟಾರ್!!

Written by Soma Shekar

Published on:

---Join Our Channel---

ಬಾಲಿವುಡ್ ನ ಕಿಂಗ್ ಖಾನ್ ಖ್ಯಾತಿಯ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರ ಗ್ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದ ವಿಚಾರ ಇಡೀ ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಆರ್ಯನ್ ಖಾನ್ ಒಂದಷ್ಟು ದಿನ ಜೈಲಿನಲ್ಲಿ ದಿನಗಳನ್ನು ಕಳೆದಿದ್ದು ಸಹಾ ಸತ್ಯ. ಆದರೆ ಇವೆಲ್ಲವುಗಳ ನಂತರ ನಡೆದ ವಿಚಾರಣೆ ಆಧಾರದ ಮೇಲೆ ಕೋರ್ಟ್ ಆರ್ಯನ್ ಖಾನ್ ಕೈವಾಡ ಈ ಪ್ರಕರಣದಲ್ಲಿ ಇಲ್ಲ ಎಂದು ಕ್ಲೀನ್ ಚಿಟ್ ನೀಡಿತು. ಮಗ ಪ್ರಕರಣವೊಂದರಲ್ಲಿ ಸಿಲುಕಿದಾಗ ನಟ ಶಾರೂಖ್ ಸಾಕಷ್ಟು ತಲೆ ಕೆಡಿಸಿಕೊಂಡು, ನಿದ್ರಾಹಾರಗಳನ್ನು ತೊರೆದು ಮಗನನ್ನು ಹೊರಗೆ ತರಲು ಶ್ರಮ ಪಟ್ಟು, ಮಗನ ಮೇಲೆ ತಮಗಿರುವ ಅಪಾರ ಪ್ರೀತಿ, ಕಾಳಜಿ ಪ್ರದರ್ಶಿಸಿದ್ದರು.

ಈಗ ಮಗನ ಪೋಸ್ಟ್ ಗೆ ಬಹಳ ಫನ್ನಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ ಶಾರೂಖ್ ಖಾನ್, ಇದು ಎಲ್ಲರ ಗಮನವನ್ನು ಸೆಳೆದಿದೆ. ಆರ್ಯನ್ ಖಾನ್ ಡ್ರ ಗ್ ಪ್ರಕರಣದಲ್ಲಿ ಸುಮಾರು ಒಂದು ತಿಂಗಳು ಕಾಲ ಜೈಲಿನಲ್ಲಿ ಸಮಯ ಕಳೆದು ಹೊರ ಬಂದಿದ್ದರು. ಆಮೇಲೆ ಅವರು ಸಾರ್ವಜನಿಕವಾಗಿ ಎಲ್ಲೂ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಇನ್ನು ಈ ಘಟನೆ ನಡೆದು ಒಂದು ವರ್ಷ ಕಳೆಯುತ್ತಾ ಬಂದಿದೆ. ಆರ್ಯನ್ ಸಹಾ ಎಲ್ಲವನ್ನೂ ಮರೆತು, ಇತ್ತೀಚಿಗೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದಾರೆ. ಈಗ ಆರ್ಯನ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಒಂದು ಪೋಸ್ಟ್ ಎಲ್ಲರ ಗಮನ ಸೆಳೆದಿದೆ.

ಸೆಲೆಬ್ರಿಟಿ ಮಗನಾಗಿದ್ದು, ತಾನು ಕೂಡಾ ಹಿಂಬಾಲಕರನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿರುವುದರಿಂದ ಸಹಜವಾಗಿಯೇ ಆರ್ಯನ್ ಖಾನ್ ಗೂ ಕೆಲವೊಂದು ಬ್ರಾಂಡ್ ಎಂಡೋರ್ಸ್ ಮೆಂಟ್ ಗಳ ಕಡೆಯಿಂದ ಆಫರ್ ಬಂದಿದೆ. ಖಾಸಗಿ ಬ್ರ್ಯಾಂಡ್ ಒಂದರ ಜೊತೆಯಲ್ಲಿ ಆರ್ಯನ್ ಖಾನ್ ಒಪ್ಪಂದವೊಂದನ್ನು ಮಾಡಿಕೊಂಡಿದ್ದಾರೆ. ಅದರ ಪ್ರಮೋಷನ್ ಗಾಗಿ ಆರ್ಯನ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಆಕರ್ಷಕ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸಖತ್ ಹ್ಯಾಂಡ್ಸಮ್ ಆಗಿ ಕಾಣುತ್ತಿರುವ ಆರ್ಯನ್ ಫೋಟೋಗಳಿಗೆ ಮೆಚ್ಚುಗೆಗಳು ಸಾಕಷ್ಟು ಹರಿದು ಬರುತ್ತಿವೆ.

ಆರ್ಯನ್ ಪೋಸ್ಟ್ ಗೆ ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ ಸಹೋದರಿ ಸುಹಾನಾ ಕಣ್ಣಿನಲ್ಲಿ ಹಾರ್ಟ್ ಇರುವ ಇಮೋಜಿಯನ್ನು ಹಾಕಿದ್ದಾರೆ‌. ಇದೇ ವೇಳೆ ಶಾರೂಖ್ ಪತ್ನಿ, ಆರ್ಯನ್ ಅವರ ತಾಯಿ ಗೌರಿ ಖಾನ್ ಕಾಮೆಂಟ್ ಮಾಡಿ, ನನ್ನ ಹುಡುಗ, ಲವ್, ಲವ್, ಲವ್ ಎಂದು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ತಂದೆ ಶಾರೂಖ್ ಮಾತ್ರ ತಮ್ಮದೇ ಸ್ಟೈಲ್ ನಲ್ಲಿ ಕಾಮೆಂಟ್ ಮಾಡುತ್ತಾ, “ಚೆನ್ನಾಗಿ ಕಾಣುತ್ತಿರುವೆ, ತಂದೆಯಲ್ಲಿ ಯಾವ ವಿಚಾರ ನಿಶ್ಯಬ್ದವಾಗಿ ಇರುತ್ತದೋ ಅದು ಮಗನಲ್ಲಿ ಎದ್ದು ಕಾಣುತ್ತದೆ. ಅಂದ ಹಾಗೆ ಆ ಟೀ ಶರ್ಟ್ ನನ್ನದು” ಎಂದು ಮಗನ ಕಾಲೆಳೆದಿದ್ದಾರೆ ಶಾರೂಖ್ ಖಾನ್.

Leave a Comment