ಮಗನ ತಪ್ಪಿಗೆ ಅಪ್ಪನಿಗೆ ಆಗ್ತಿದೆ ಶಿಕ್ಷೆ: ಏಕಾಏಕೀ ಕುಸಿದ ಶಾರೂಖ್ ಖಾನ್ ಬ್ರಾಂಡ್ ವ್ಯಾಲ್ಯೂ
ಐಶಾರಾಮೀ ಹಡಗೊಂದರಲ್ಲಿ ಡ್ರ ಗ್ಸ್ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಅವರ ಮಗ ಆರ್ಯನ್ ಖಾನ್ ಬಂಧನವಾಗಿ ನ್ಯಾಯಾಂಗ ಬಂಧನದಲ್ಲಿ ಇದ್ದಾನೆ. ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಅರ್ಜಿ ವಜಾ ಮಾಡಿ ನ್ಯಾಯಾಂಗ ಬಂ ಧನವನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಮಧ್ಯಾಹ್ನ ಸೆಷನ್ ಕೋರ್ಟ್ ನಲ್ಲಿ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಮಗನ ಜಾಮೀನಿಗಾಗಿ ಶಾರೂಖ್ ಬಹಳ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಮಗ ಹೀಗೆ ಜೈ ಲು ಪಾಲಾದ ಬೆನ್ನಲ್ಲೇ ಶಾರೂಖ್ ಖಾನ್ ಬ್ರಾಂಡ್ ವ್ಯಾಲ್ಯೂ ಕುಸಿಯುತ್ತಿದೆ ಎನ್ನುವ ವಿಷಯವೊಂದು ಇದೀಗ ಸಾಕಷ್ಟು ಸುದ್ದಿಯಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಬೈ ಕಾಟ್ ಶಾರೂಖ್ ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಾರೂಖ್ ಕಾಣಿಸಿಕೊಳ್ಳುತ್ತಿದ್ದ ಎಲ್ಲಾ ಜಾಹೀರಾತುಗಳನ್ನು ನಿಲ್ಲಿಸಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ದೇಶದ ಪ್ರತಿಷ್ಠಿತ ಎಜುಕೇಷನ್ ಸಂಸ್ಥೆ ಬೈಜೂಸ್ ಶಾರೂಖ್ ನಟಿಸಿದ್ದ ಎಲ್ಲಾ ಜಾಹೀರಾತಿಗೆ ತಡೆ ಹಾಕಿದ್ದಾಗಿದೆ.
ಬೈಜೂಸ್ ನ ಈ ನಿರ್ಧಾರದಿಂದ ಶಾರೂಖ್ ಗೆ ವರ್ಷಕ್ಕೆ ಸುಮಾರು ನಾಲ್ಕರಿಂದ ಐದು ಕೋಟಿ ನಷ್ಟ ಎದುರಾಗಲಿದೆ ಎನ್ನಲಾಗಿದೆ. ಬೈಜೂಸ್ ನ ಈ ನಿರ್ಣಯದ ನಂತರ ಇನ್ನೂ ಕೆಲವು ಕಂಪನಿಗಳು ಸಹಾ ಇಂತಹುದೇ ನಿರ್ಧಾರವನ್ನು ಮಾಡುವ ಕಡೆಗೆ ತಮ್ಮ ಗಮನವನ್ನು ನೀಡಿದೆ. ನಟ ಶಾರೂಖ್ ಖಾನ್ ಸುಮಾರು 40 ಕ್ಕೂ ಹೆಚ್ಚು ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಇವರ ಬ್ರಾಂಡ್ ವ್ಯಾಲ್ಯೂ ವಾರ್ಷಿಕ ಸುಮಾರು 378 ಕೋಟಿ ರೂ. ಗಳು ಎನ್ನಲಾಗಿದೆ. ಹೀಗೆ ಜಾಹೀರಾತು ಗಳು ಶಾರೂಖ್ ಅವರ ಆದಾಯದ ಒಂದು ಪ್ರಮುಖ ಮೂಲವಾಗಿತ್ತು.
ಇದೀಗ ಶಾರೂಖ್ ಮಗನ ಪ್ರಕರಣದಿಂದ ಅನೇಕ ಪ್ರತಿಷ್ಠಿತ ಕಂಪನಿಗಳು ಶಾರೂಖ್ ಜೊತೆ ಜಾಹೀರಾತುಗಳನ್ನು ಮುಂದುವರೆಸುವ ಆಸಕ್ತಿಯನ್ನು ತೋರಿಸುತ್ತಿಲ್ಲ ಎನ್ನಲಾಗಿದ್ದು, ಕೆಲವು ಕಂಪನಿಗಳು ತಮ್ಮ ಯೋಜನೆಗಳನ್ನು ಮುಂದೂಡಿವೆ ಎನ್ನಲಾಗಿದೆ. ಮಗನ ವಿವಾದದ ಕಾರಣದಿಂದಾಗಿ ಇನ್ನೂ ಕೆಲವು ಕಂಪನಿಗಳು ಶಾರೂಖ್ ಅವರನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಕೈ ಬಿಡುವ ಆಲೋಚನೆಗಳನ್ನು ಕೂಡಾ ಮಾಡುತ್ತಿವೆ ಎನ್ನುವ ವಿಷಯ ಕೂಡಾ ಸುದ್ದಿಯಾಗಿದೆ. ಒಟ್ಟಾರೆ ಮಗನ ತಪ್ಪಿಗೆ ಅಪ್ಪ ಶಿಕ್ಷೆ ಅನುಭವಿಸುವ ಹಾಗೆ ಆಗಿದೆ.