ಮಗನ ಕೈಕಾಲು ಕಟ್ಟಿ ಶಾಲೆಗೆ ಹೊತ್ತು ನಡೆದ ತಾಯಿ:ಹಳೆಯ ದಿನಗಳು ನೆನಪಾಯ್ತೆಂದ ನೆಟ್ಟಿಗರು

0 0

ಕೊರೊನಾ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷ ಕಾಲದಿಂದ ಸಹಾ ಶಾಲೆಗಳು ಬಂದ್ ಆಗಿವೆ‌. ಆದ್ದರಿಂದಲೇ ಮಕ್ಕಳಿಗೆ ಶಾಲೆಗಳೊಂದಿಗೆ ಸಂಪರ್ಕ ಬಹುತೇಕ ಇಲ್ಲವೆನ್ನುವಂತಾಗಿದೆ‌. ಇನ್ನು ಇತ್ತೀಚಿಗೆ ಕೊರೊನಾ ಒತ್ತಡ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಶಾಲೆಗಳು ಮತ್ತೆ ತೆರೆಯಲ್ಪಟ್ಟಿವೆ. ಆದರೆ ಎರಡು ಬರೋಬ್ಬರಿ ಒಂದೂವರೆ ವರ್ಷದಿಂದ ಮನೆಯಲ್ಲೇ ಇದ್ದ ಮಕ್ಕಳು ಈಗ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಸಮಸ್ಯೆ ಎನಿಸುವಂತಾಗಿದೆ‌.

ಇತ್ತೀಚಿಗೆ ಇಂತಹ ಸಮಸ್ಯೆಯನ್ನು ತೋರಿಸುವ ವೀಡಿಯೋ ಒಂದು ವೈರಲ್ ಆಗಿದ್ದು, ನೋಡುಗರಿಗೆ ಭರಪೂರ ಮನರಂಜನೆ ಜೊತೆಗೆ, ನೋಡುಗರನ್ನು ನಕ್ಕು ನಗುವಂತೆ ಮಾಡುತ್ತಿದೆ. ಅಲ್ಲದೇ ಈ ವೀಡಿಯೋ ಬಹಳಷ್ಟು ಜನರಿಗೆ ಅವರ ಶಾಲಾ ದಿನಗಳನ್ನು ಸಹಾ ಈ ವೀಡಿಯೋ ನೆನಪಿಸುತ್ತಿದೆ ಎನ್ನುವುದು ಸಹಾ ವಾಸ್ತವದ ಮಾತಾಗಿದೆ. ವೀಡಿಯೋ ನೋಡಿದವರ ಕಾಮೆಂಟ್ ಗಳು ಸಹಾ ನಗು ಉಕ್ಕಿಸುವಂತೆ ಇದೆ.

ಈ ತಮಾಷೆಯ ವೀಡಿಯೋವನ್ನು ಅವನೀಶ್ ಶರ್ಮಾ ಎನ್ನುವ ಟ್ವಿಟರ್ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ವೀಡಿಯೋ ಶೇರ್ ಮಾಡಿಕೊಂಡು, ನಾನು ನನ್ನ ಶಾಲಾ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಸಾಲೊಂದನ್ನು ಬರೆದುಕೊಂಡಿದ್ದಾರೆ. ಗ್ರಾಮೀಣ ಮೂಲದಿಂದ ಬಂದ ಪ್ರತಿಯೊಬ್ಬರಿಗೂ ಈ ವೀಡಿಯೋ ಅವರ ಶಾಲಾ ದಿನಗಳನ್ನು ಖಂಡಿತವಾಗಿ ನೆನಪಿಸುತ್ತದೆ.

ಈ ವೀಡಿಯೋದಲ್ಲಿ ನೋಡಿದಾಗ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದ ಹುಡುಗನನ್ನು ಮೂರು ಜನ ಹುಡುಗರು ಹಾಗೂ ಒಬ್ಬ ಮಹಿಳೆ ಕಾಲು, ಕೈಗಳನ್ನು ಹಿಡಿದುಕೊಂಡು ಹೊತ್ತು ಕೊಂಡು ಹೋಗುತ್ತಿರುವುದನ್ನು ನಾವು ನೋಡಬಹುದಾಗಿದೆ‌. ಅವರು ಹುಡುಗನನ್ನು ಎತ್ತಿಕೊಂಡು ಹೋಗುವ ವಿಧಾನವನ್ನು ನೋಡಿದ ಆ ಕ್ಷಣದಲ್ಲಿ ನಮಗೆ ನಗುವನ್ನು ತಡೆಯಲಾಗುವುದಿಲ್ಲ. ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗಿದೆ‌.

ಈವರೆಗೆ ವೀಡಿಯೊವನ್ನು 44 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದರೆ, ಸಾವಿರಾರು ಜನರು ಲೈಕ್ ಗಳನ್ನು ನೀಡಿದ್ದರೆ , ನೂರಾರು ಜನರು ಕಾಮೆಂಟ್ ಗಳನ್ನು ಮಾಡಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ಬಹಳಷ್ಟು ಜನರು ಹಳೆಯ ನೆನಪುಗಳು ಮತ್ತೊಮ್ಮೆ ನೆನಪಾದವು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೊರೊನಾ ನಂತರ ಇಂತಹ ದಿನಗಳನ್ನು ನೋಡವುದೇ ಸಾಧ್ಯವಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

Leave A Reply

Your email address will not be published.