ಮಗನಿಗೆ ಅವ್ಯಾನ್ ದೇವ್ ಎಂದು ಹೆಸರಿಟ್ಟ ನಿಖಿಲ್ ರೇವತಿ ದಂಪತಿ: ಇಷ್ಟಕ್ಕೂ ಈ ಹೆಸರಿನ ಅರ್ಥವೇನು ಗೊತ್ತಾ??

Entertainment Featured-Articles Movies News

ಸ್ಯಾಂಡಲ್ವುಡ್ ನಟ, ಜೆಡಿಎಸ್ ನ ಯುವ ನಾಯಕ ನಿಖಿಲ್ ಕುಮಾರ ಸ್ವಾಮಿ ಹಾಗೂ ಅವರ ಪತ್ನಿ ರೇವತಿ ಅವರಿಗೆ ಇಂದು ಒಂದು ಸಂಭ್ರಮದ ದಿನವಾಗಿದೆ. ಏಕೆಂದರೆ ಈ ದಂಪತಿಯ ಮುದ್ದಾದ ಮಗನಿಗೆ ಇಂದು ನಾಮಕರಣ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನಿರ್ವಹಿಸಲಾಗಿದೆ. ದೊಡ್ಡ ಗೌಡರ ಕುಟುಂಬವು ಬಹಳ ಸಂಭ್ರಮದಿಂದ ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಾಲಯದಲ್ಲಿ ನಿಖಿಲ್ ಅವರ ಪುತ್ರನ ನಾಮಕರಣ ಮಹೋತ್ಸವವನ್ನು ನಿರ್ವಹಿಸಿದ್ದಾರೆ. ಇಂದು ಬೆಳಿಗ್ಗೆ 10:30 ರಿಂದ 12:20 ಶುಭ ಲಗ್ನದಲ್ಲಿ‌ ನಿಖಿಲ್ ರೇವತಿ ದಂಪತಿಯ ಮಗನ ನಾಮಕರಣ ಶಾಸ್ತ್ರ ನಡೆದಿದೆ.

ನಾಮಕರಣ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನಡೆಸಲಾಗಿದ್ದು, ನಾಮಕರಣದ ಹಿನ್ನೆಲೆಯಲ್ಲಿ ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಿಖಿಲ್ ರೇವತಿ ಅವರ ಪುತ್ರನಿಗೆ ಒಂಬತ್ತು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ನಾಮಕರಣ ಶಾಸ್ತ್ರವನ್ನು ನಡೆಸಲಾಗಿದ್ದು, ದೊಡ್ಡ ಗೌಡರ ಕುಟುಂಬದವರಿಗೆ ಮಾತ್ರವೇ ಆಹ್ವಾನ ಇತ್ತು ಎನ್ನಲಾಗಿದೆ. ಎಲ್ಲಾ ಹಿರಿಯರು, ಆಪ್ತರ ಉಪಸ್ಥಿತಿಯಲ್ಲಿ ನಿಖಿಲ್ ಅವರ ಪುತ್ರನಿಗೆ ಅವ್ಯಾನ್ ದೇವ್ ಎನ್ನುವ ಹೆಸರನ್ನು ಇಡಲಾಗಿದೆ‌.

ನಿಖಿಲ್ ರೇವತಿ ದಂಪತಿಯ ಮುದ್ದು ಮಗನ ಹೆಸರಿನ ವಿಚಾರ ಸುದ್ದಿಯಾದ ಮೇಲೆ ಈ ಹೆಸರಿನ ಅರ್ಥ ತಿಳಿಯುವ ಕಡೆಗೆ ಅನೇಕರು ಗಮನ ನೀಡಿದ್ದಾರೆ. ಹಾಗಾದರೆ ಅವ್ಯಾನ್ ದೇವ್ ಎನ್ನುವ ಹೆಸರಿನ ಅರ್ಥ ಏನೆಂದು ತಿಳಿಯುವ ಆಸಕ್ತಿ ನಿಮ್ಮದಾದರೆ ಆ ಕುತೂಹಲಕ್ಕೆ ಇಲ್ಲಿದೆ ಉತ್ತರ. ನಿಖಿಲ್ ರೇವತಿ ದಂಪತಿಯ ಮಗನಿಗೆ ಇಡಲಾದ ಈ ಅವ್ಯಾನ್ ದೇವ್ ಹೆಸರಿಗೆ ಧಾರ್ಮಿಕ ಮಹತ್ವ ಖಂಡಿತವಾಗಿಯೂ ಇದೆ. ಹಾಗದರೆ ಏನದು? ತಿಳಿಯೋಣ.

ಅವ್ಯಾನ್ ದೇವ್ ಎನ್ನುವುದು ಎಲ್ಲರೂ ಪೂಜಿಸಿ ಆರಾಧನೆ ಮಾಡುವ ವಿಘ್ನ ವಿನಾಶಕನಾದ ಶ್ರೀ ಗಣೇಶನ ಮತ್ತೊಂದು ಹೆಸರು ಎನ್ನಲಾಗಿದೆ. ಈ ಹೆಸರು ಅದೃಷ್ಟದಿಂದ ಜನಿಸಿದವನು ಎನ್ನುವ ಅರ್ಥವನ್ನು ನೀಡುತ್ತದೆ ಎನ್ನಲಾಗಿದೆ. ವಿಶೇಷ ಏನೆಂದರೆ ಇತ್ತೀಚಿಗಷ್ಟೇ ಬಾಲಿವುಡ್ ನ ಜನಪ್ರಿಯ ನಟಿಯಾಗಿರುವ ದಿಯಾ ಮಿರ್ಜಾ ಅವರು ಸಹಾ ತಮ್ಮ ಮಗನಿಗೆ ಅವ್ಯಾನ್ ಎನ್ನುವ ಹೆಸರನ್ನೇ ಇಟ್ಟಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

Leave a Reply

Your email address will not be published.