ಮಕ್ಕಳ ಜೊತೆ ವೈಷ್ಣೋ ದೇವಿ ದರ್ಶನ ಮಾಡಿದ ಜೊತೆಜೊತೆಯಲಿ ಖ್ಯಾತಿಯ ನಟ ಅನಿರುದ್ಧ್

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮಾಡಿರುವ ಮೋಡಿಯ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳಾಗಿವೆ‌‌. ಹೌದು ಜೊತೆ ಜೊತೆಯಲಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಒಂದು ಹೊಸ ಇತಿಹಾಸವನ್ನು ರಚಿಸಿದ ಧಾರಾವಾಹಿ, ಕಿರುತೆರೆಯಲ್ಲಿ ನೂತನ ದಾಖಲೆಯನ್ನು ಮಾಡಿದ ಧಾರಾವಾಹಿ. ಆರಂಭದಲ್ಲೇ ಕೇವಲ ಒಂದೇ ಒಂದು ವಾರದಲ್ಲಿ ಹೊಸ ಸಂಚಲನವನ್ನು ಹುಟ್ಟು ಹಾಕಿತ್ತು ಜೊತೆ ಜೊತೆಯಲಿ ಸೀರಿಯಲ್. ಈ ಸೀರಿಯಕ್ ನ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ತನ್ನದಾಗಿಸಿಕೊಂಡವರು ನಟ ಅನಿರುದ್ಧ್.

ನಟ ಅನಿರುದ್ಧ್ ಅವರಿಗೆ ಸಿನಿಮಾಗಳಿಗಿಂತ ಹೆಚ್ಚು ಜನಪ್ರಿಯತೆ ಹಾಗೂ ಜನ ಮೆಚ್ಚುಗೆಯನ್ನು ತಂದು ಕೊಟ್ಟಿದ್ದು ಆರ್ಯವರ್ಧನ್ ಪಾತ್ರ ಎನ್ನುವುದರಲ್ಲಿ ಖಂಡಿತ ಅನುಮಾನವೇ ಇಲ್ಲ. ಆರ್ಯವರ್ಧನ್ ಪಾತ್ರದ ಗತ್ತು ಗಮ್ಮತ್ತಿನಿಂದ ಹೊಸ ಚಾರ್ಮ್ ನಲ್ಲಿ ಮಿಂಚಿದ್ದಾರೆ ಅನಿರುದ್ಧ್ ಅವರು. ಇನ್ನು ನಟ ಅನಿರುದ್ದ್ ಅವರು ಸೀರಿಯಲ್ ನ ಬ್ಯುಸಿ ಶೆಡ್ಯೂಲ್ ನ ನಡುವೆಯೂ ತಮ್ಮ ಕುಟುಂಬಕ್ಕೆ ಸಮಯವನ್ನು ನೀಡುತ್ತಾರೆ. ಕುಟುಂಬದ ಜೊತೆ ಸಮಯವನ್ನು ಕಳೆಯುತ್ತಾರೆ.

ನಟ ಅನಿರುದ್ದ್ ಅವರು ಕೆಲಸದ ನಡುವೆ ಬಿಡುವು ಮಾಡಿಕೊಂಡು ತಮ್ಮ ಮಕ್ಕಳೊಡನೆ ವೈಷ್ಣೋ ದೇವಿ ಯಾತ್ರೆಯನ್ನು ಮಾಡಿ ಬಂದಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡು ತಮ್ಮ, “ನಾವು ವೈಷ್ಣೋದೇವಿಗೆ ಹೋಗಿ ಬಂದೆವು. ಕೀರ್ತಿಯವರು ಕೆಲವು ವರ್ಷಗಳ ಹಿಂದೆ ಹೋಗಿ ಬಂದಿದ್ದಾರೆ. ಈ ಬಾರಿ ನಮ್ಮ ಜೊತೆ ಬಂದಿಲ್ಲ. ಸರ್ವೇ ಜನಃ ಸುಖಿನೋ ಭವಂತು. ತಾಯಿಯ ಅನುಗ್ರಹ ನಮ್ಮೆಲ್ಲರ ಮೇಲೂ ಇರಲಿ” ಎಂದು ಅನಿರುದ್ಧ ಪೋಸ್ಟ್​ ಮಾಡಿದ್ದಾರೆ.

ನಟ ಅನಿರುದ್ದ್ ಅವರ ಮಕ್ಕಳು ಶ್ಲೋಕಾ ಹಾಗೂ ಜೇಷ್ಠ ವರ್ಧನ್ ಸಹಾ ಬಹಳ ಚುರುಕಾದ ಮಕ್ಕಳಾಗಿದ್ದಾರೆ‌.‌ ಸೋಷಿಯಲ್‌ ಮೀಡಿಯಾಗಳಲ್ಲಿ ಅವರು ಆಗಾಗ ಹಂಚಿಕೊಳ್ಳುವ ವೀಡಿಯೋಗಳು ಹಾಗೂ ಫೋಟೋ ಗಳು ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆದು , ಮೆಚ್ಚುಗೆಯನ್ನು ಪಡೆಯುತ್ತವೆ. ಡಾನ್ಸ್ ವಿಚಾರದಲ್ಲಿ ಅವರು ಪಕ್ಕಾ ಸೂಪರ್ ಡಾನ್ಸರ್ ಗಳೆಂದೇ ಹೇಳಬಹುದಾಗಿದೆ. ಪ್ರಸ್ತುತ ಅನಿರುದ್ದ್ ಅವರು ಮಕ್ಕಳೊಡನೆ ವೈಷ್ಣೋದೇವಿಗೆ ಹೋಗಿ ಬಂದ ಫೋಟೋ ಗಳು ಗಮನ ಸೆಳೆದಿದೆ.

Leave a Comment