ಮಕ್ಕಳಾಗ್ತಿಲ್ಲ ಅನ್ನೋ ಕಾರಣಕ್ಕೆ, ವಿಚ್ಚೇದನಕ್ಕೆ ಸಜ್ಜಾದ ಕನ್ನಡದ ಸ್ಟಾರ್ ನಟಿ: ಸುದ್ದಿ ಕೇಳಿ ಬೆಚ್ಚಿದ ಅಭಿಮಾನಿಗಳು

Entertainment Featured-Articles Movies News

ಸಿನಿಮಾ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಪಡೆಯುವ ಸೆಲೆಬ್ರಿಟಿ ಜೋಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯುವ ಜೋಡಿ, ಸೀನಿಯರ್ ಜೋಡಿ ಎನ್ನುವ ಯಾವುದೇ ಬೇಧವಿಲ್ಲದೇ ಕೆಲವೇ ವರ್ಷಗಳ ಹಿಂದೆ ವಿವಾಹವಾದ ಜೋಡಿಗಳು, ದೀರ್ಘಕಾಲದಿಂದ ಜೊತೆಯಾಗಿದ್ದ ಜೋಡಿಗಳು ಸಹಾ ವಿಚ್ಚೇದನದ ಮೂಲಕ ಬೇರ್ಪಡುತ್ತಿರುವುದು ಶಾಕಿಂಗ್ ಸುದ್ದಿಗಳಾಗುತ್ತಿವೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಸ್ಯಾಂಡಲ್ವುಡ್ ನ ಪ್ರಖ್ಯಾತ ನಟಿ, ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಎನಿಸಿಕೊಂಡಿರುವ ಪ್ರಿಯಾ ಮಣಿ ಅವರು ಸಹಾ ತಮ್ಮ ಪತಿಯಿಂದ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಪ್ರಿಯಾಮಣಿ ತಮ್ಮ ಪತಿ ಮುಸ್ತಫಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎನ್ನುವ ವಿಚಾರವೊಂದು ಈಗ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ದಕ್ಷಿಣ ಸಿನಿಮಾರಂಗದಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಪ್ರಿಯಾಮಣಿ ದೊಡ್ಡ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಿದ್ದಾರೆ. ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿರುವ ನಟಿ ಮದುವೆಯ ನಂತರವೂ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಿನಿಮಾ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಬಹುತೇಕ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿ ಕೊಂಡಿರುವ ನಟಿ ಪ್ರಿಯಾಮಣಿ ಮುಸ್ತಾಫ ಅವರೊಡನೆ ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಮುಸ್ತಾಫ ಅವರಿಗೆ ಪ್ರಿಯಾಮಣಿ ಎರಡನೇ ಪತ್ನಿಯಾಗಿದ್ದಾರೆ. ಅವರ ಮೊದಲ ಪತ್ನಿ ಈ ಹಿಂದೆ ಒಮ್ಮೆ ಪ್ರಿಯಾಮಣಿ ವಿರುದ್ಧ ದೂ ರ ನ್ನು ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ನಟಿ ಅದಕ್ಕೆ ತಲೆ ಕೆಡಿಸಿಕೊಂಡಿರಿಲ್ಲ. ಅನಂತರ ಆ ವಿಚಾರ ತಣ್ಣಗಾಯಿತು. ಮುಸ್ತಫಾ ಜೊತೆಗೆ ಮದುವೆಯಾಗಿ ವರ್ಷಗಳಢ ಕಳೆದಿದ್ದರೂ ಈ ಜೋಡಿಗೆ ಇನ್ನೂ ಮಕ್ಕಳಾಗಿಲ್ಲ. ಅಲ್ಲದೆ ನಟಿ ಈಗಲೇ ಮಕ್ಕಳನ್ನು ಮಾಡಿಕೊಳ್ಳುವುದು ಬೇಡ ಎಂದು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಚಿತ್ರರಂಗದಲ್ಲಿ ತನ್ನ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ನಟಿ ಪ್ರಿಯಾಮಣಿ ವೃತ್ತಿರಂಗದಲ್ಲಿ ಸೆಟಲ್ ಆದ ನಂತರ ಮಕ್ಕಳ ಬಗ್ಗೆ ಆಲೋಚಿಸುವ ನಿರ್ಧಾರವನ್ನು ಮಾಡಿದ್ದು, ಇದೇ ವಿಚಾರವಾಗಿ ಅವರಿಗೂ ಮತ್ತು ಅವರ ಪತಿ ಮುಸ್ತಫಾ ಅವರಿಗೂ ಜಗಳವಾಗಿದೆ ಎನ್ನಲಾಗಿದ್ದು, ಈಗ ಅವರು ವಿಚ್ಚೇದನ ಪಡೆದು ಬೇರೆ ಬೇರೆ ಯಾಗಲು ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಚೇದನದ ವಿಷಯವಾಗಿ ಹರಡಿರುವ ಸುದ್ದಿಗಳ ಕುರಿತಾಗಿ ನಟಿ ಪ್ರಿಯಾಮಣಿ ಮಾತ್ರ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆಯನ್ನು ನೀಡಿಲ್ಲ.

Leave a Reply

Your email address will not be published.